Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೋಪಾಲಕೃಷ್ಣ ಬೇಳೂರು ಭಿಕ್ಷೆಯಿಂದ ಗೆದ್ದವರು ಇಂದು ಶಾಸಕರನ್ನೇ ಟೀಕಿ: ರತ್ನಾಕರ ವಿರುದ್ಧ ಚೇತನ್ ರಾಜ್ ಕಣ್ಣೂರು ಕಿಡಿ

05/03/2026 3:31 PM

ರತ್ನಾಕರ ಹೊನಗೋಡು ‘ತರ್ಡ್ ಕ್ಲಾಸ್ ರಾಜಕಾರಣ’ ಮಾಡಬಾರದು: ಸೋಮಶೇಖರ್ ಲಾವಿಗೆರೆ ವಾಗ್ದಾಳಿ

05/03/2026 3:29 PM

SHOCKING : ಪರೀಕ್ಷೆಗೆ ಬಂದಿದ್ದ 16 ವರ್ಷದ ವಿದ್ಯಾರ್ಥಿನಿಗೆ ಶೌಚಾಲಯದಲ್ಲೇ ಹೆರಿಗೆ!

05/03/2026 3:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `ಗ್ರಾಮ ಸಹಾಯಕರಿಗೆ’ ಗುಡ್ ನ್ಯೂಸ್ : 5 ಲಕ್ಷ ರೂ. `ಇಡುಗಂಟು’ ನೀಡಲು ಸರ್ಕಾರ ಮಹತ್ವದ ಆದೇಶ
KARNATAKA

ರಾಜ್ಯದ `ಗ್ರಾಮ ಸಹಾಯಕರಿಗೆ’ ಗುಡ್ ನ್ಯೂಸ್ : 5 ಲಕ್ಷ ರೂ. `ಇಡುಗಂಟು’ ನೀಡಲು ಸರ್ಕಾರ ಮಹತ್ವದ ಆದೇಶ

By kannadanewsnow5710/02/2026 6:20 AM

ಬೆಂಗಳೂರು: ಮಾಸಿಕ ವೇತನದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರು 65 ವರ್ಷ ವಯೋಮಾನವನ್ನು ಪೂರೈಸಿ ಕರ್ತವ್ಯದಿಂದ ಬಿಡುಗಡೆ ಹೊಂದಿದವರಿಗೆ/ಸೇವೆಯಲ್ಲಿರುವಾಗಲೇ ಮೃತರಾದಲ್ಲಿ, ಗರಿಷ್ಠ ರೂ.5.00 ಲಕ್ಷಗಳವರೆಗೆ ಒಂದು ಬಾರಿಯ ಇಡಿಗಂಟು ಸೌಲಭ್ಯವನ್ನು ಕಲ್ಪಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು ನಡವಳಿಯನ್ನು ಹೊರಡಿಸಿದ್ದು, ಕರ್ನಾಟಕ ಗ್ರಾಮ ಕಛೇರಿಗಳ ರದ್ದತಿ ಕಾಯ್ದೆ 1961 ದಿನಾಂಕ:01.02.1963ರಿಂದ ಜಾರಿಗೆ ಬಂದಿದ್ದು, ಸದರಿ ಅಧಿನಿಯದನ್ವಯ ಕಂದಾಯ ಇಲಾಖೆಯಲ್ಲಿ ವಂಶಪಾರಂಪರ್ಯವಾಗಿ ಮುಂದುವರೆಯುತ್ತಿದ್ದ ಶ್ಯಾನುಭೋಗರು, ಪಟೇಲರು ಹಾಗೂ ಇನ್ನು ಮುಂತಾದ ಎಲ್ಲಾ ಕೆಳಹಂತದ ಗ್ರಾಮ ಅಧಿಕಾರಿ ಹುದ್ದೆಗಳನ್ನು ರದ್ದುಪಡಿಸಿ, ಆಡಳಿತಾತ್ಮಕ ಅನುಕೂಲಕ್ಕಾಗಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಹಾಯ ಮಾಡಲು ಗ್ರಾಮಸಹಾಯಕರ ಹುದ್ದೆಗಳನ್ನು ತಾತ್ಕಾಲಿಕವಾಗಿ ಸೃಜಿಸಲಾಗಿರುತ್ತದೆ. ಕಂದಾಯ ಇಲಾಖೆಯಲ್ಲಿ 8,941 ಗ್ರಾಮ ಸಹಾಯಕರ ಹುದ್ದೆಗಳನ್ನು ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ ಪೆಂಡರಿ ಆಧಾರದ ಮೇಲೆ ತಾತ್ಕಾಲಿಕವಾಗಿ ಸೃಜಿಸಿ ಆದೇಶಸಲಾಗಿದೆ. ಮೇಲೆ (2)ರಲ್ಲಿ ಓದಲಾದ ಆದೇಶದಲ್ಲಿ 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತವೇತನದ ಆಧಾರದ ಮೇಲೆ ಖಾಯಂ ಆಗಿ ಮುಂದುವರೆಸಿ ಆದೇಶಿಸಲಾಗಿದೆ ಎಂದಿದ್ದಾರೆ..

ಕಂದಾಯ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 9,903 ಗ್ರಾಮ ಸಹಾಯಕರ ಮಾಸಿಕ ಮಿತವೇತನವನ್ನು ದಿನಾಂಕ: 01.04.2024 ರಿಂದ ಅನ್ವಯವಾಗುವಂತೆ ಮಾಸಿಕ ರೂ.13,000/-ಗಳಿಂದ ರೂ.15,000/- ಗಳಿಗೆ ಹೆಚ್ಚಿಸಿ ಆದೇಶಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘವು ಗ್ರಾಮ ಸಹಾಯಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಹಾಗೂ ಸೇವಾ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸುತ್ತಿದ್ದು, ಅವರನ್ನು ರಾಜ್ಯ ಸರ್ಕಾರದ ಗ್ರೂಪ್-ಡಿ ನೌಕರರ ಹುದ್ದೆಯಲ್ಲಿ ಸಕ್ರಮಾತಿ ಮಾಡುವಂತೆ ಕೋರಿರುವುದು ಅವರ ಪ್ರಮುಖ ಬೇಡಿಕೆಯಾಗಿರುತ್ತದೆ. ಮುಂದುವರೆದು, ಇವರಿಗೆ ಗ್ರೂಪ್-ಡಿ ಸಮಾನವಾದ 1.27,000/- ಗಳ ವೇತನ ನಿಗದಿಪಡಿಸಲು ಹಾಗೂ ಮರಣ/ನಿವೃತ್ತಿ ಹೊಂದಿದ ಗ್ರಾಮ ಸಹಾಯಕರುಗಳಿಗೆ 310.00 ಲಕ್ಷಗಳ ಇಡಿಗಂಟು ನೀಡುವ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿರುತ್ತಾರೆ. ಗ್ರಾಮ ಸಹಾಯಕರು 65 ವರ್ಷ ವಯಸ್ಸಿನವರೆಗೆ ಸೇವೆಯಲ್ಲಿ ಮುಂದುವರೆಯಲು ಅವಕಾಶವಿದ್ದು, ಪುಸ್ತುತ ಸದರಿಯವರಿಗೆ ಮಾಸಿಕ ರೂ.15000/- ಗಳ ಮಿತವೇತನವನ್ನು ಪಾವತಿಸಲಾಗುತ್ತಿದ್ದು, ಇದನ್ನು ಹೊರತುಪಡಿಸಿ ಇನ್ಯಾವುದೇ ಸೇವಾ ಸೌಲಭ್ಯಗಳು ಇರುವುದಿಲ್ಲ ಎಂದಿದ್ದಾರೆ.

ಇವರು ಖಾಯಂ ಸರ್ಕಾರಿ ನೌಕರರಾಗದೇ ಇರುವುದರಿಂದ ಇವರಿಗೆ ಕಾಲಕಾಲಕ್ಕೆ ಸರ್ಕಾರದ ತುಟ್ಟಿಭತ್ಯೆ, ವೇತನ ಮುಂಬಡ್ತಿ, ವಾರ್ಷಿಕ ವೇತನ ಬಡ್ತಿ ಇವುಗಳಾವು ಇವರುಗಳಿಗೆ ಲಭ್ಯವಾಗುತ್ತಿಲ್ಲ. ಗ್ರಾಮ ಸಹಾಯಕರು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಗೌರವಯುತ ನಿವೃತ್ತಿ ಜೀವನವನ್ನು ನಡೆಸಲು ಮತ್ತು ದೈನಂದಿನ ಅಗತ್ಯಗಳ ವೆಚ್ಚ, ಅವರ ಮಕ್ಕಳ ಶಿಕ್ಷಣ, ವೃದ್ಧ ಪೋಷಕರ ನಿರ್ವಹಣೆಯನ್ನು ಭರಿಸಲು, ನಿವೃತ್ತಿ ನಂತರ/ ಮೃತರಾದ ಸಂದರ್ಭದಲ್ಲಿ ಒಂದು ಬಾರಿಗೆ ರೂ. 5 ಲಕ್ಷಗಳ ಇಡಿಗಂಟನ್ನು ನೀಡಲು ದಿನಾಂಕ: 25.09.2025 ರಂದು ನಡೆದ ಸಚಿವ ಸಂಪುಟ ಸಭೆಯ ಕಾರ್ಯಸೂಚಿ ಸಂಖ್ಯೆ: ಸಿ.827/2025ರಲ್ಲಿ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಈ ಕೆಳಕಂಡಂತೆ ಆದೇಶಿಸಿದ್ದಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರುಗಳಿಗೆ ಅವರುಗಳು ಸೇವೆಯಿಂದ ನಿವೃತ್ತಿ ಹೊಂದಿದ ನಂತರ/ಸೇವೆಯಲ್ಲಿರುವಾಗಲೇ ಮೃತರಾದಲ್ಲಿ ಗರಿಷ್ಠ ರೂ.5.00 ಲಕ್ಷಗಳವರೆಗೆ ಇಡಿಗಂಟನ್ನು ಮಂಜೂರು ಮಾಡಿ ಆದೇಶಿಸಿದೆ:

ಷರತ್ತುಗಳು:-

1. ಇಡಿಗಂಟು ನೀಡಬೇಕಾಗಿರುವ ಅರ್ಹ ಪ್ರಕರಣಗಳಲ್ಲಿ ಒಂದು ವೇಳೆ ಗ್ರಾಮ ಸಹಾಯಕರು ಮರಣಹೊಂದಿದ್ದರೆ, ಅಂತಹ ಗ್ರಾಮ ಸಹಾಯಕರ ಕಾನೂನುಬದ್ಧ ಅರ್ಹ ಅವಲಂಬಿತರಿಗೆ ಇಡಿಗಂಟು ಮೊತ್ತವನ್ನು ಪಾವತಿಸತಕ್ಕದ್ದು.

2. ಇಡಿಗಂಟು ನೀಡಬೇಕಾಗಿರುವ ಅರ್ಹ ಪ್ರಕರಣಗಳಲ್ಲಿ ಗ್ರಾಮ ಸಹಾಯಕರು ಅಥವಾ ಅರ್ಹ ಕಾನೂನುಬದ್ಧ ಅವಲಂಬಿತರು ಇಡಿಗಂಟನ್ನು ಪಡೆಯಲು ಸಲ್ಲಿಸಬೇಕಾಗಿರುವ ಅರ್ಜಿಯ ನಮೂನೆ, ಸೇವಾ ದೃಢೀಕರಣ ಪತ್ರ ಮರಣ ಪ್ರಮಾಣ ಪತ್ರ ಹಾಗೂ ಇತರೆ ಸಂಬಂಧಿತ ದಾಖಲೆಗಳೊಂದಿಗೆ ಪುಸ್ತಾವನೆ ಸ್ವೀಕೃತಿಗೆ ಅನುಸರಿಸಬೇಕಾಗಿರುವ ಕಾರ್ಯವಿಧಾನದ ಕುರಿತು ಒಂದು ಸಮಗ್ರವಾದ ಸುತ್ತೋಲೆಯನ್ನು ಹೊರಡಿಸಲಾಗುವುದು.

3. ಇಡಿಗಂಟು ನೀಡಬೇಕಾಗಿರುವ ಅರ್ಹ ಪುಸ್ತಾವನೆಗಳನ್ನು ಸಂಬಂಧಿತ ತಹಶೀಲ್ದಾರ್ ರವರು ಪಡೆದು ಪರಿಶೀಲಿಸಿ, ದೃಢೀಕರಿಸಿ, ಆಯಾ ಜಿಲ್ಲಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.

4. ಜಿಲ್ಲಾಧಿಕಾರಿಗಳ ಹಂತದಲ್ಲಿ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ಪರಿಶೀಲನೆಯ ನಂತರ ಅರ್ಹ ಪಸ್ತಾವನೆಗಳಿಗೆ ಇಡಿಗಂಟು ನೀಡುವ ಸಂಬಂಧ ಮಂಜೂರಾತಿ ಆದೇಶವನ್ನು ಹೊರಡಿಸತಕ್ಕದ್ದು.

ಈ ಆದೇಶವನ್ನು ದಿನಾಂಕ:25.09.2025 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪುಕರಣ ಸಂಖ್ಯೆ:827/2025ರಲ್ಲಿ ಕೈಗೊಳ್ಳಲಾದ ನಿರ್ಣಯದನ್ವಯ ಹೊರಡಿಸಲಾಗಿದೆ ಎಂದಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Good news for the state's 'village helpers': Government orders important order to provide Rs. 5 lakh 'Idugantu'
Share. Facebook Twitter LinkedIn WhatsApp Email

Related Posts

ಗೋಪಾಲಕೃಷ್ಣ ಬೇಳೂರು ಭಿಕ್ಷೆಯಿಂದ ಗೆದ್ದವರು ಇಂದು ಶಾಸಕರನ್ನೇ ಟೀಕಿ: ರತ್ನಾಕರ ವಿರುದ್ಧ ಚೇತನ್ ರಾಜ್ ಕಣ್ಣೂರು ಕಿಡಿ

05/03/2026 3:31 PM1 Min Read

ರತ್ನಾಕರ ಹೊನಗೋಡು ‘ತರ್ಡ್ ಕ್ಲಾಸ್ ರಾಜಕಾರಣ’ ಮಾಡಬಾರದು: ಸೋಮಶೇಖರ್ ಲಾವಿಗೆರೆ ವಾಗ್ದಾಳಿ

05/03/2026 3:29 PM2 Mins Read

GOOD NEWS : ಮಾ.7 ರಂದು ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ : 100ಕ್ಕೂ ಹೆಚ್ಚು ಕಂಪನಿ ಭಾಗಿ

05/03/2026 3:21 PM1 Min Read
Recent News

ಗೋಪಾಲಕೃಷ್ಣ ಬೇಳೂರು ಭಿಕ್ಷೆಯಿಂದ ಗೆದ್ದವರು ಇಂದು ಶಾಸಕರನ್ನೇ ಟೀಕಿ: ರತ್ನಾಕರ ವಿರುದ್ಧ ಚೇತನ್ ರಾಜ್ ಕಣ್ಣೂರು ಕಿಡಿ

05/03/2026 3:31 PM

ರತ್ನಾಕರ ಹೊನಗೋಡು ‘ತರ್ಡ್ ಕ್ಲಾಸ್ ರಾಜಕಾರಣ’ ಮಾಡಬಾರದು: ಸೋಮಶೇಖರ್ ಲಾವಿಗೆರೆ ವಾಗ್ದಾಳಿ

05/03/2026 3:29 PM

SHOCKING : ಪರೀಕ್ಷೆಗೆ ಬಂದಿದ್ದ 16 ವರ್ಷದ ವಿದ್ಯಾರ್ಥಿನಿಗೆ ಶೌಚಾಲಯದಲ್ಲೇ ಹೆರಿಗೆ!

05/03/2026 3:27 PM

GOOD NEWS : ಮಾ.7 ರಂದು ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ : 100ಕ್ಕೂ ಹೆಚ್ಚು ಕಂಪನಿ ಭಾಗಿ

05/03/2026 3:21 PM
State News
KARNATAKA

ಗೋಪಾಲಕೃಷ್ಣ ಬೇಳೂರು ಭಿಕ್ಷೆಯಿಂದ ಗೆದ್ದವರು ಇಂದು ಶಾಸಕರನ್ನೇ ಟೀಕಿ: ರತ್ನಾಕರ ವಿರುದ್ಧ ಚೇತನ್ ರಾಜ್ ಕಣ್ಣೂರು ಕಿಡಿ

By kannadanewsnow0905/03/2026 3:31 PM KARNATAKA 1 Min Read

ಆನಂದಪುರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರ ವಿರುದ್ಧ ಟೀಕೆ ಮಾಡುತ್ತಿರುವ ರತ್ನಾಕರ ಹೊನಗೋಡು ಅವರ ರಾಜಕೀಯ ಅಸ್ತಿತ್ವದ ಬಗ್ಗೆ ಕಾಂಗ್ರೆಸ್…

ರತ್ನಾಕರ ಹೊನಗೋಡು ‘ತರ್ಡ್ ಕ್ಲಾಸ್ ರಾಜಕಾರಣ’ ಮಾಡಬಾರದು: ಸೋಮಶೇಖರ್ ಲಾವಿಗೆರೆ ವಾಗ್ದಾಳಿ

05/03/2026 3:29 PM

GOOD NEWS : ಮಾ.7 ರಂದು ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ : 100ಕ್ಕೂ ಹೆಚ್ಚು ಕಂಪನಿ ಭಾಗಿ

05/03/2026 3:21 PM

BIG NEWS : ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್​​ಗಳು ಪತ್ತೆ : ತನಿಖೆಗೆ ಸ್ಪೀಕರ್ ಖಾದರ್ ಸೂಚನೆ!

05/03/2026 3:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.