Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೃಹಬಳಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಮಂಡ್ಯ ಡಿಸಿ ಡಾ.ಕುಮಾರ ಸ್ಪಷ್ಟನೆ

12/03/2026 4:56 PM

BREAKING : “ಭಾರತದಲ್ಲಿ ಇಂಧನ ಕೊರತೆ ಇಲ್ಲ, ತೈಲ ಸರಬರಾಜು ಸುರಕ್ಷಿತವಾಗಿದೆ” : ಸಂಸತ್ತಿನಲ್ಲಿ ಹರ್ದೀಪ್ ಸಿಂಗ್ ಪುರಿ

12/03/2026 4:55 PM

ಲೆಕ್ಕ ಕೇಳೋ ಹಕ್ಕಿರೋದು ಜನತೆಗೆ, ಮಂಡ್ಯ ಸಂಸದರಲ್ಲ: ಸಚಿವ ಚಲುವರಾಯಸ್ವಾಮಿ ತಿರುಗೇಟು

12/03/2026 4:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಸಾರಿಗೆ ಸಿಬ್ಬಂದಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಗುಡ್ ನ್ಯೂಸ್
KARNATAKA

ರಾಜ್ಯದ ಸಾರಿಗೆ ಸಿಬ್ಬಂದಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಗುಡ್ ನ್ಯೂಸ್

By kannadanewsnow0922/12/2024 5:08 AM

ಬೆಂಗಳೂರು: ರಾಜ್ಯದ ಸಾರಿಗೆ ಸಿಬ್ಬಂದಿಗಳಿಗೆ ಸಿಹಿಸುದ್ದಿ ಎನ್ನುವಂತೆ ರಾಜ್ಯ ಸರ್ಕಾರದಿಂದ ಬಾಕಿ ಉಪಧನ, ಗಳಿಕೆ ರೆಜ ನಗಧೀಕರಣಕ್ಕೆ ರೂ.224.05 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇಂದು ಸಾಂಕೇತಿಕವಾಗಿ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಚೆಕ್ ವಿತರಿಸಿದರು.

ಈ ಕುರಿತಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ಹಂಚಿಕೊಂಡಿದ್ದು, 2020ರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ನಿವೃತ್ತ ಸಿಬ್ಬಂದಿಗಳಿಗೆ ನೀಡಬೇಕಾಗಿದ್ದ ಬಾಕಿ ಹಣವನ್ನು ಇಂದು ದಿನಾಂಕ 21.12.2024 ರಂದು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು, ಕರಾರಸಾ ನಿಗಮದ ಕೇಂದ್ರ ಕಛೇರಿಯಲ್ಲಿ ಸಾಂಕೇತಿಕವಾಗಿ ಮೂವರಿಗೆ ಸಿಬ್ಬಂದಿಗಳಿಗೆ ಬಾಕಿ ಉಪಧನ ಹಾಗೂ ಗಳಿಕೆ ರಜೆ ನಗದೀಕರಣ ಮೊತ್ತದ ಚೆಕ್ ಅನ್ನು ವಿತರಿಸಿ, ʼನುಡಿದಂತೆ ನಡೆದಿದ್ದೇವೆ ಎಂಬುದನ್ನು ನಾವು ಮತ್ತೊಮ್ಮೆ ಸಾಬೀತುಪಡಿಸಿರುತ್ತೇವೆ ಎಂದು ತಿಳಿಸಿದರು.

ಈ ಹಿಂದೆ ನೌಕರರ ಸಂಘಟನೆಗಳೊಂದಿಗೆ ನಡೆದ ಸಭೆಯಲ್ಲಿ ಅವರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿ, ಅವುಗಳಲ್ಲಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವುದಾಗಿ ನೀಡಿದ್ದ ಭರವಸೆಯಂತೆ, ಈ ಪೈಕಿ ನಾಲ್ಕು ಸಾರಿಗೆ ನಿಗಮಗಳ 1308 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ಅಂತರ ನಿಗಮ ವರ್ಗಾವಣೆಯ ತಾತ್ಕಾಲಿಕ ಪಟ್ಟಿಯನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ ಎಂದರು.

ಹಾಗೂ ಎಲ್ಲಾ 11694 ನಿವೃತ್ತ ಸಿಬ್ಬಂದಿಗಳಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತವನ್ನು ಅಧಿವೇಶನದ ನಂತರ ಬಿಡುಗಡೆಗೊಳಿಸುವುದಾಗಿ ನೀಡಿದ್ದ ಭರವಸೆಯಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ ಟಿಡಿ 72 ಟಿಸಿಬಿ 2021(ಭಾ-1), ದಿನಾಂಕ 07.12.2024 ರನ್ವಯ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲಾಗಿತ್ತು ಎಂದು ತಿಳಿಸಿದರು.

ಮುಂದುವರೆದು, ನಾಲ್ಕು ಸಾರಿಗೆ ನಿಗಮಗಳಲ್ಲಿ ದಿನಾಂಕ: 01.01.2020 ರಿಂದ 28.02.2023 ರವರೆಗಿನ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತಿ ಹೊಂದಿರುವ ಸುಮಾರು 11,694 ಸಿಬ್ಬಂದಿಗಳಿಗೆ ನೀಡಬೇಕಾಗಿದ್ದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಮೊತ್ತ ರೂ.224.05 ಕೋಟಿಯನ್ನು ಇಂದು ದಿನಾಂಕ: 21.12.2024 ರಂದು ಎಲ್ಲಾ ನಾಲ್ಕು ನಿಯಮಗಳಲ್ಲಿ ಈ ಕೆಳಕಂಡಂತೆ ಪಾವತಿಸಲು ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.

ಸಂಸ್ಥೆಗಳು

ಕರಾರಸಾ ನಿಗಮ-
4711 ಸಿಬ್ಬಂದಿಗಳು
ರೂ. 86.55 ಕೋಟಿ

ಬೆಂಮನಸಾ ಸಂಸ್ಥೆ-
1833 – ಸಿಬ್ಬಂದಿಗಳು
ರೂ.50.25 ಕೋಟಿ

ವಾಕರಸಾ ಸಂಸ್ಥೆ- 3116 ಸಿಬ್ಬಂದಿಗಳು – ರೂ 51.50 ಕೋಟಿ

ಕಕರಸಾ ಸಂಸ್ಥೆ- 2034 ಸಿಬ್ಬಂದಿಗಳು

ರೂ. 35.75 ಕೋಟಿ

ಒಟ್ಟು 11,694 ಸಿಬ್ಬಂದಿಗಳ ಮೊತ್ತ ರೂ. 224.05 ಕೋಟಿಗಳನ್ನು ಇಂದಿನಿಂದ RTGS ಹಾಗೂ ಚೆಕ್ ಮುಖಾಂತರ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ವಿತರಿಸಲು ಕ್ರಮಕೈಗೊಳ್ಳಲಾಗಿದೆ.

ಕಾಲಕಾಲಕ್ಕೆ ಸಿಬ್ಬಂದಿಗಳಿಗೆ ನೀಡಬೇಕಾಗಿರುವ ಆರ್ಥಿಕ ಹಾಗೂ ಇತರೆ ಸೌಲಭ್ಯಗಳನ್ನು ನೀಡದಿದ್ದರೆ, ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರುಗಳು ಈ ಬಗ್ಗೆ ಗಮನವಹಿಸಲು ಈ ಸಂದರ್ಭದಲ್ಲಿ ಸಾರಿಗೆ ಸಚಿವರು ಸೂಚನೆ ನೀಡಿದರು. ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ, ವ್ಯವಸ್ಥಾಪಕ ನಿರ್ದೇಶಕರು, ಬೆಂಮಸಾ ಸಂಸ್ಥೆ ಮತ್ತು ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ), ಕೆ ಎಸ್ ಆರ್ ಟಿ ಸಿ ರವರು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

ಗೃಹಬಳಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಮಂಡ್ಯ ಡಿಸಿ ಡಾ.ಕುಮಾರ ಸ್ಪಷ್ಟನೆ

12/03/2026 4:56 PM2 Mins Read

ಲೆಕ್ಕ ಕೇಳೋ ಹಕ್ಕಿರೋದು ಜನತೆಗೆ, ಮಂಡ್ಯ ಸಂಸದರಲ್ಲ: ಸಚಿವ ಚಲುವರಾಯಸ್ವಾಮಿ ತಿರುಗೇಟು

12/03/2026 4:53 PM3 Mins Read

BIG NEWS: ರಾಜ್ಯದಲ್ಲಿ 50 ವರ್ಷಗಳ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ ಬದಲಾವಣೆ ನಿರ್ಧಾರ: ಡಿ.ಕೆ ಶಿವಕುಮಾರ್ ಘೋಷಣೆ

12/03/2026 4:46 PM2 Mins Read
Recent News

ಗೃಹಬಳಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಮಂಡ್ಯ ಡಿಸಿ ಡಾ.ಕುಮಾರ ಸ್ಪಷ್ಟನೆ

12/03/2026 4:56 PM

BREAKING : “ಭಾರತದಲ್ಲಿ ಇಂಧನ ಕೊರತೆ ಇಲ್ಲ, ತೈಲ ಸರಬರಾಜು ಸುರಕ್ಷಿತವಾಗಿದೆ” : ಸಂಸತ್ತಿನಲ್ಲಿ ಹರ್ದೀಪ್ ಸಿಂಗ್ ಪುರಿ

12/03/2026 4:55 PM

ಲೆಕ್ಕ ಕೇಳೋ ಹಕ್ಕಿರೋದು ಜನತೆಗೆ, ಮಂಡ್ಯ ಸಂಸದರಲ್ಲ: ಸಚಿವ ಚಲುವರಾಯಸ್ವಾಮಿ ತಿರುಗೇಟು

12/03/2026 4:53 PM

BIG NEWS: ರಾಜ್ಯದಲ್ಲಿ 50 ವರ್ಷಗಳ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ ಬದಲಾವಣೆ ನಿರ್ಧಾರ: ಡಿ.ಕೆ ಶಿವಕುಮಾರ್ ಘೋಷಣೆ

12/03/2026 4:46 PM
State News
KARNATAKA

ಗೃಹಬಳಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಮಂಡ್ಯ ಡಿಸಿ ಡಾ.ಕುಮಾರ ಸ್ಪಷ್ಟನೆ

By kannadanewsnow0912/03/2026 4:56 PM KARNATAKA 2 Mins Read

ಮಂಡ್ಯ : ಮಧ್ಯ ಪ್ರಾಚ್ಯ ಪ್ರದೇಶಗಳಲ್ಲಿ ಯುದ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟಿನಿಂದ ಗೃಹಬಳಕೆಯ ಅಡುಗೆ ಅನಿಲದ ಸರಬರಾಜಿನಲ್ಲಿ ವ್ಯತ್ಯಯ…

ಲೆಕ್ಕ ಕೇಳೋ ಹಕ್ಕಿರೋದು ಜನತೆಗೆ, ಮಂಡ್ಯ ಸಂಸದರಲ್ಲ: ಸಚಿವ ಚಲುವರಾಯಸ್ವಾಮಿ ತಿರುಗೇಟು

12/03/2026 4:53 PM

BIG NEWS: ರಾಜ್ಯದಲ್ಲಿ 50 ವರ್ಷಗಳ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ ಬದಲಾವಣೆ ನಿರ್ಧಾರ: ಡಿ.ಕೆ ಶಿವಕುಮಾರ್ ಘೋಷಣೆ

12/03/2026 4:46 PM

ರಾಜ್ಯದ ವಿವಿಧ ಇಲಾಖೆಗಳಲ್ಲಿ 56,432 ಹುದ್ದೆಗಳ ಭರ್ತಿಗೆ ಸರ್ಕಾರ ನಿರ್ಧಾರ

12/03/2026 4:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.