ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸ್ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪೊಲೀಸರ ಆರೋಗ್ಯ ತಪಾಸಣೆಗೆ ಕೊಡುವ ವೈದ್ಯಕೀಯ ವೆಚ್ಚವನ್ನು 500 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಹೌದು, ಬಜೆಟ್‌ನಲ್ಲಿ ಘೋಷಿಸಿದಂತೆ ಪೊಲೀಸರ ಆರೋಗ್ಯ ತಪಾಸಣೆಗೆ 1000 ರೂ.ನಿಂದ 1500 ರೂ.ಗೆ ಏರಿಕೆ ಮಾಡಲಾಗಿದ್ದು, ಆರೋಗ್ಯ ತಪಾಸಣೆ ಮಾಡುವ ಆಸ್ಪತ್ರೆಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ರಾಜ್ಯದ ಪೊಲೀಸರಿಗೆ 2016-17ರಿಂದ ಪ್ರತಿ ಸಿಬ್ಬಂದಿಗೆ ವಾರ್ಷಿಕ ವೈದ್ಯಕೀಯ ತಪಾಸಣೆಗೆ 1 ಸಾವಿರ ರೂ. ನೀಡಲಾಗುತ್ತಿತ್ತು. ವೈದ್ಯಕೀಯ ವೆಚ್ಚದ ಮೊತ್ತವನ್ನು ವಿ ಹೆಚ್ಚಳ ಮಾಡಬೇಕು ಎಂದು ಬಹುದಿನಗಳಿಂದ ಬೇಡಿಕೆ ಇತ್ತು. ಕಳೆದ ಬಜೆಟ್‌ನಲ್ಲಿ 500 ರೂ. ಹೆಚ್ಚಿಸುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಇದೀಗ ರಾಜ್ಯ ಸರ್ಕಾರವು ಈ ಸಂಬಂಧ ಅಧಿಕೃತವಾಗಿ ಆದೇಶ ಹೊರಡಿಸಿದೆ.
ರಕ್ತದ ಒತ್ತಡ, ಅಲ್ವಾಸೌಂಡ್ ಟೆಸ್ಟ್, ಇಸಿಜಿ, ಕೊಲೆಸ್ಟ್ರಾಲ್ ಪ್ರಮಾಣ, ಮೂತ್ರದ ಸಕ್ಕರೆ ಪರೀಕ್ಷೆ, ಕಿಡ್ನಿ, ಲಿವರ್, ಕಣ್ಣು, ಸಂಪೂರ್ಣ ರಕ್ತ ಪರೀಕ್ಷೆ (ಸಿಬಿಸಿ), ಮೂತ್ರ ಪರೀಕ್ಷೆ, ಟಿಎಂಟಿ ಟ್ರೆಡ್ ಮಿಲ್, ಎದೆಯ ಎಕ್ಸ್‌ರೇ, ಇಕೋ ಕಾರ್ಡಿಯೋಗ್ರಾಂ ಪರೀಕ್ಷೆಗಳನ್ನು ಮಾಡಲಾಗುತ್ತದೆ.