ಬೆಂಗಳೂರು : ಮನರೇಗಾ ಯೋಜನೆಯಡಿ ಆರ್ಥಿಕ ವರ್ಷದ ಕನಿಷ್ಠ 100 ದಿನಗಳಲ್ಲಿ ದೊರಕಲಿರುವ ದೈನಂದಿನ ಕೂಲಿ ಮೊತ್ತವನ್ನು ₹370ಕ್ಕೆ ಹೆಚ್ಚಿಸಲಾಗಿದೆ. ಇದು ಏಪ್ರಿಲ್ 1ರಿಂದ ಜಾರಿಯಾಗಿದೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನರೇಗಾ ಕೂಲಿ ಕಾರ್ಮಿಕರಿಗೆ ಏಪ್ರಿಲ್ 1ರಿಂದ ನರೇಗಾ ಕಾರ್ಮಿಕರ ದಿನದ ಕೂಲಿ ಮೊತ್ತ ಹೆಚ್ಚಳ ಮಾಡಲಾಗಿದೆ.
ಕೂಲಿ ಹಣ ನೇರವಾಗಿ ಕೂಲಿಕಾರರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಪ್ರಸ್ತುತ ₹349 ಇರುವ ಕೂಲಿ ದರ ₹370ಕ್ಕೆ ಏರಿಕೆ ಮಾಡಲಾಗಿದೆ. ಈ ಮೂಲಕ ಉದ್ಯೋಗ ಚೀಟಿದಾರ ಕೂಲಿಕಾರರಿಗೆ ಆರ್ಥಿಕ ಬಲ ಸಿಗಲಿದೆ.