ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (NHM) ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ, ಅರೆವೈದ್ಯಕೀಯ ಹಾಗೂ ಕಾರ್ಯಕ್ರಮ ನಿರ್ವಹಣಾ ಸಿಬ್ಬಂದಿಗಳ ಸೇವೆಯನ್ನು 2026-27ನೇ ಸಾಲಿಗೆ ಮುಂದುವರೆಸಲು ಸರ್ಕಾರ ಅನುಮತಿ ನೀಡಿದೆ.
ಸೇವಾವಧಿ ವಿಸ್ತರಣೆಯ ಪ್ರಮುಖ ಮುಖ್ಯಾಂಶಗಳು:
-
ಅವಧಿ ವಿಸ್ತರಣೆ: ನೇರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಒಂದು ದಿನದ ವಿರಾಮ ನೀಡಿ, ದಿನಾಂಕ 02.04.2026 ರಿಂದ 31.03.2027 ರವರೆಗೆ ಸೇವೆಯನ್ನು ಮುಂದುವರೆಸಲು ಆದೇಶಿಸಲಾಗಿದೆ.
-
ಮೌಲ್ಯಮಾಪನ ಆಧಾರಿತ ಆಯ್ಕೆ: 2025-26ನೇ ಸಾಲಿನ ಸಿಬ್ಬಂದಿಗಳ ಕಾರ್ಯಕ್ಷಮತೆ ಮೌಲ್ಯಮಾಪನ (Performance Evaluation) ಪಟ್ಟಿಯಲ್ಲಿ ಅವರು ಪಡೆದ ಶೇಕಡವಾರು ಅಂಕಗಳ ಆಧಾರದ ಮೇಲೆ ಈ ಸೇವಾವಧಿ ವಿಸ್ತರಣೆಯನ್ನು ಮಾಡಲಾಗಿದೆ.
-
ಅತೃಪ್ತಿಕರ ಕಾರ್ಯಕ್ಷಮತೆ ಹೊಂದಿದವರಿಗೆ ಸೂಚನೆ: ಮೌಲ್ಯಮಾಪನದಲ್ಲಿ ಅತೃಪ್ತಿಕರ (Unsatisfactory) ಫಲಿತಾಂಶ ಹೊಂದಿರುವ ಸಿಬ್ಬಂದಿಗಳಿಗೆ ಕೇವಲ ಮೂರು ತಿಂಗಳ ಅವಧಿಗೆ ಅಂದರೆ 02.04.2026 ರಿಂದ 30.06.2026 ರವರೆಗೆ ಮಾತ್ರ ನಿಯಮಾನುಸಾರ ಸೇವೆ ವಿಸ್ತರಿಸಲು ತಿಳಿಸಲಾಗಿದೆ.
-
ಹೊರಗುತ್ತಿಗೆ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ: ಈ ಸೇವಾವಧಿ ವಿಸ್ತರಣೆಯ ಸುತ್ತೋಲೆಯು ಕೇವಲ ನೇರ ಗುತ್ತಿಗೆ ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾಗಿದ್ದು, ಹೊರಗುತ್ತಿಗೆ (Outsource) ಆಧಾರದ ಮೇಲೆ ಕೆಲಸ ಮಾಡುತ್ತಿರುವವರಿಗೆ ಇದು ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪಾರದರ್ಶಕ ಪ್ರಕ್ರಿಯೆ: ಕಾರ್ಯಕ್ಷಮತೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಾರ್ಯಕ್ರಮಾಧಿಕಾರಿಗಳು ಕ್ರಮವಹಿಸಿದ್ದಾರೆ. ರಾಜ್ಯ ಸಮಿತಿಯ ಅನುಮೋದನೆಯಂತೆ ಅಂಕಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸರ್ಕಾರಕ್ಕೆ ಧನ್ಯವಾದ ತಿಳಿಸಿದ KSHCOEA BMS ಸಂಘದ ರಾಜ್ಯಾಧ್ಯಕ್ಷ ಶ್ರೀಕಾಂತ್ ಸ್ವಾಮಿ
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರು ಈ ಕುರಿತು ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಸಿಬ್ಬಂದಿಗಳನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಾರ್ಯಕ್ಷಮತೆ ಮೌಲ್ಯಮಾಪನ ಮಾಡುವ ಮೂಲಕ 2026-27 ನೆಯ ಸಾಲಿಗೆ ಮುಂದುವರೆಸಿದ ಬಗ್ಗೆ ಅಭಿಯಾನ ನಿರ್ದೇಶಕರು ಆದೇಶ ಹೊರಡಿಸುತ್ತಾರೆ ಎಂದು ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀಕಾಂತ್ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಳೆದ ವರ್ಷ ಈ ಪ್ರಕ್ರಿಯೆ ಮೂರ್ನಾಲ್ಕು ಬಾರಿ ಆಗಿ ವಿಳಂಬವಾಗಿ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿ ಗೊಂದಲ ಸೃಷ್ಟಿ ಆಗಿತ್ತು ಈ ವಿಷಯವಾಗಿ ರಾಜ್ಯದ ಎಲ್ಲಾ ಮಾನ್ಯ ಶಾಸಕರುಗಳ ಸಚಿವರುಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ, ಮಾನ್ಯ ಆರೋಗ್ಯ ಸಚಿವರ ಗಮನಕ್ಕೆ ತಂದು ಹಾಗೂ ಅಧಿಕಾರಿಗಳಲ್ಲಿ ಸಹ ಈ ವರ್ಷ ಹೀಗಾಗದಂತೆ ಸಂಘದಿಂದ ಹಲವಾರು ಬಾರಿ ಮನವಿ ಮಾಡಲಾಗಿತ್ತು ಅದರಂತೆ 2026-27 ನೆಯ ಸಾಲಿಗೆ ಸಿಬ್ಬಂದಿಗಳನ್ನು ಮುಂದುವರೆಸಿ ಅಭಿಯಾನದ ನಿರ್ದೇಶಕರಾದ ಡಾ ಅವಿನಾಶ್ ಮೆನನ್ ಆದೇಶ ಹೊರಡಿಸಿದ್ದಾರೆ.
ಈ ಮನವಿಗೆ ಸ್ಪಂದಿಸಿ ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದೆ ಎಲ್ಲಾ ಸಿಬ್ಬಂದಿಗಳನ್ನು ಮುಂದುವರೆಸಿ ಆದೇಶ ಹೊರಡಿಸಿದ್ದಕ್ಕೆ ಮಾನ್ಯ ಆರೋಗ್ಯ ಸಚಿವರಿಗೆ, ಇಲಾಖೆಯ ಅಧಿಕಾರಿಗಳಿಗೆ ಹಾಗೂ ಇತರರಿಗೆ KSHCOEA BMS ಸಂಘದ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಹಾಗೂ ಎಲ್ಲ NHM ಸಿಬ್ಬಂದಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಂಘದ ಅಧ್ಯಕ್ಷರು ಕರೆ ನೀಡಿರುತ್ತಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ಲಂಚ ಪಡೆದಿದ್ದ ಅಧಿಕಾರಿಗೆ ಜೈಲು ಶಿಕ್ಷೆ: ಶಿವಮೊಗ್ಗ ನ್ಯಾಯಾಲಯದ ಮಹತ್ವದ ತೀರ್ಪು
Vastu for Wealth: ನಿಮ್ಮ ಸಾಲಬಾಧೆ ಮುಕ್ತಿಗಾಗಿ ‘ವಾಸ್ತು ಟಿಪ್ಸ್’: ಲಕ್ಷ್ಮಿಯ ಕೃಪೆ ಪಡೆಯಲು ಇಲ್ಲಿದೆ ಮಾರ್ಗ!








