Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮೆರಿಕ ಅಧ್ಯಕ್ಷರ ಹೇಳಿಕೆ ‘ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ’: ಕದನ ವಿರಾಮ ಕೋರಿದ್ದ ಟ್ರಂಪ್ ವಾದವನ್ನು ತಳ್ಳಿಹಾಕಿದ ಇರಾನ್!

02/04/2026 7:08 AM

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ 21 ಸೌಲಭ್ಯಗಳು.!

02/04/2026 7:05 AM

ಗಡಿ ಕಾಯುವ ಯೋಧರಿಗೆ ಶತ್ರುಗಳಿಗಿಂತ ‘ಜೀವನಶೈಲಿ ಕಾಯಿಲೆ’ಗಳೇ ದೊಡ್ಡ ಸವಾಲು: ಸೈನ್ಯದಲ್ಲಿ ಮಧುಮೇಹ ಪ್ರಕರಣಗಳ ಏರಿಕೆ ಕಂಡು ಬೆಚ್ಚಿಬಿದ್ದ ಕೇಂದ್ರ ಸರ್ಕಾರ!

02/04/2026 7:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ 21 ಸೌಲಭ್ಯಗಳು.!
KARNATAKA

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ 21 ಸೌಲಭ್ಯಗಳು.!

By kannadanewsnow5702/04/2026 7:05 AM

ಬೆಂಗಳೂರು: ರಾಜ್ಯ ಕೃಷಿ ಇಲಾಖೆಯು ರೈತರ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ಕೃಷಿಯಲ್ಲಿ ಆಧುನಿಕತೆಯನ್ನು ಉತ್ತೇಜಿಸಲು ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ವಿವಿಧ ಸೌಲಭ್ಯಗಳಡಿ ಬಿತ್ತನೆ ಬೀಜಗಳಿಂದ ಹಿಡಿದು ಕೃಷಿ ಯಂತ್ರೋಪಕರಣಗಳವರೆಗೆ ಭರ್ಜರಿ ರಿಯಾಯಿತಿ (ಸಬ್ಸಿಡಿ) ಘೋಷಿಸಲಾಗಿದೆ.

ಈ ಯೋಜನೆಗಳ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:

ಬಿತ್ತನೆ ಬೀಜಗಳ ವಿತರಣೆ

ರಾಜ್ಯದ ಎಲ್ಲಾ ವರ್ಗದ ರೈತರಿಗೆ ವಿವಿಧ ಬೆಳೆಗಳ (ಭತ್ತ, ರಾಗಿ, ಜೋಳ, ತೊಗರಿ, ಕಡಲೆ ಇತ್ಯಾದಿ) ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.

ಸಾಮಾನ್ಯ ವರ್ಗದ ರೈತರಿಗೆ: 50% ರಿಯಾಯಿತಿ.

ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ: 75% ರಿಯಾಯಿತಿ.

ಗರಿಷ್ಠ 2.00 ಹೆಕ್ಟೇರ್ ವಿಸ್ತೀರ್ಣಕ್ಕೆ ಸೀಮಿತವಾಗಿ ಈ ಸೌಲಭ್ಯ ದೊರೆಯಲಿದೆ.

ಸಸ್ಯ ಸಂರಕ್ಷಣೆ ಮತ್ತು ತರಬೇತಿ

ಪೀಡೆನಾಶಕಗಳು, ಜೈವಿಕ ನಿಯಂತ್ರಣ ಕಾರಕಗಳು ಮತ್ತು ಬೀಜೋಪಚಾರ ಆಂದೋಲನಕ್ಕಾಗಿ 50% ಸಹಾಯಧನ ನೀಡಲಾಗುತ್ತಿದೆ. ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ರೈತರಿಗೆ ತರಬೇತಿಯನ್ನೂ ನೀಡಲಾಗುತ್ತದೆ.

ಕೃಷಿ ಯಾಂತ್ರೀಕರಣಕ್ಕೆ ಭರ್ಜರಿ ಸಬ್ಸಿಡಿ

ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಯಂತ್ರೋಪಕರಣಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ:

ಸಾಮಾನ್ಯ ಯಂತ್ರೋಪಕರಣಗಳು: ಸಾಮಾನ್ಯ ವರ್ಗಕ್ಕೆ 50% ಹಾಗೂ ಎಸ್‌ಸಿ/ಎಸ್‌ಟಿ ರೈತರಿಗೆ 90% ಸಹಾಯಧನ (ಗರಿಷ್ಠ 1 ಲಕ್ಷ ರೂ.ವರೆಗೆ).

ಟ್ರಾಕ್ಟರ್‌ಗಳು (45 PTO HP ವರೆಗೆ): ಸಾಮಾನ್ಯ ವರ್ಗಕ್ಕೆ 0.75 ಲಕ್ಷ ರೂ. ಹಾಗೂ ಎಸ್‌ಸಿ/ಎಸ್‌ಟಿ ರೈತರಿಗೆ 90% ರಿಯಾಯಿತಿಯಲ್ಲಿ ಗರಿಷ್ಠ 3.00 ಲಕ್ಷ ರೂ.ಗಳವರೆಗೆ ಸಹಾಯಧನ ಸಿಗಲಿದೆ.

ಇತರೆ: ಟಾರ್ಪಾಲಿನ್ ಮತ್ತು ಸಣ್ಣ ಎಣ್ಣೆಗಾಣ ಘಟಕಗಳಿಗೂ ರಿಯಾಯಿತಿ ಲಭ್ಯವಿದೆ.

‘ರೈತ ಸಿರಿ’ ಯೋಜನೆ: ಸಿರಿಧಾನ್ಯ ಬೆಳೆಯುವವರಿಗೆ ಪ್ರೋತ್ಸಾಹ

ಸಿರಿಧಾನ್ಯಗಳಾದ ನವಣೆ, ಹಾರಕ, ಕೊರಲೆ, ಸಾಮೆ, ಊದಲು ಮತ್ತು ಬರಗು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರಿಗೆ 10,000 ರೂ. ಗಳಂತೆ ಗರಿಷ್ಠ ಎರಡು ಹೆಕ್ಟೇರ್‌ಗೆ ಪ್ರೋತ್ಸಾಹಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ (DBT) ಜಮಾ ಮಾಡಲಾಗುತ್ತದೆ.

ಸಾವಯವ ಇಂಗಾಲ ಅಭಿಯಾನ

ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರ ಬಿತ್ತನೆ ಬೀಜಗಳನ್ನು 75% ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಗುಂಪುಗಳಿಗೆ ಪ್ರಮಾಣೀಕರಣಕ್ಕಾಗಿ ಅನುದಾನ ನೀಡಲಾಗುವುದು.

ಹೊಸ ಬೆಳೆ ವಿಮಾ ಯೋಜನೆ: ಈ ಯೋಜನೆಯಡಿ ಪ್ರಕೃತಿ ವಿಕೋಪಗಳು, ಕೀಟಗಳು ಮತ್ತು

ರೋಗಗಳಿಂದಾಗಿ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಹಣಕಾಸು ಬೆಂಬಲ ನೀಡಲಾಗುವುದು. ರೈತರಿಗೆ ನೀಡುವ ವಿಮಾ ಕಂತಿನ ರಿಯಾಯಿತಿಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ನೀಡಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಅನುವು ಮಾಡಲಾಗುತ್ತಿದೆ.

ಈ ಯೋಜನೆಯಡಿ ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ಇತರೆ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಪ್ರಥಮವಾಗಿ ಅಧಿಸೂಚಿಸಲಾಗುತ್ತದೆ. ಅಂತಿಮ ದಿನಾಂಕದೊಳಗೆ ರೈತರಿಂದ ಪ್ರೀಮಿಯಂ ಪಡೆದು ಬ್ಯಾಂಕ್ / ಸಹಕಾರ ಸಂಸ್ಥೆ / ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬೆಳೆ ವಿಮೆ ನೋಂದಣಿ ಕಾರ್ಯ ಕೈಗೊಳ್ಳಲಾಗುತ್ತದೆ ದಾಖಲೆಗಳನ್ನು ಪರಿಶೀಲಿಸಿ ಅರ್ಹ ರೈತರ ಪ್ರಸ್ತಾವನೆಗಳನ್ನು ಸಂಬಂಧಿಸಿದ ವಿಮಾ ಸಂಸ್ಥೆಗಳಿಗೆ ಅಂಗೀಕರಿಸಲು ರವಾನಿಸಲಾಗುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು ಕ್ಷೇತ್ರಾಧಾರಿತ ಹಾಗೂ ಇಳುವರಿ ಆಧಾರಿತ ಯೋಜನೆಯಾಗಿದ್ದು, ಮಾರ್ಗಸೂಚಿಯನುಸಾರ ಹೋಬಳಿ / ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯವರು ನೀಡುವ ಬೆಳೆ ಕಟಾವು ಪ್ರಯೋಗಗಳಿಂದ ಬಂದಂತಹ ವಾಸ್ತವಿಕ ಇಳುವರಿ ಮಾಹಿತಿಯು ನಿಗದಿಪಡಿಸಲಾದ ಪ್ರಾರಂಭಿಕ ಇಳುವರಿಗಿಂತ ಕಡಿಮೆ ಇದ್ದರೆ, ಇಳುವರಿಯ ಕೊರತೆಗನುಗುಣವಾಗಿ ಹೋಬಳಿ/ ಗ್ರಾಮ ಪಂಚಾಯಿತಿಯಲ್ಲಿ ಬೆಳೆ ವಿಮೆ ಮಾಡಿಸಿದ ಎಲ್ಲಾ ರೈತರು ಬೆಳೆ ವಿಮಾ ನಷ್ಟ ಪರಿಹಾರ ಪಡೆಯಲು ಅರ್ಹರಾಗುತ್ತಾರೆ. ಅರ್ಹ ರೈತರಿಗೆ ವಿಮೆ ಪರಿಹಾರ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವಿಮಾ ಸಂಸ್ಥೆಯವರು ವರ್ಗಾಯಿಸುತ್ತಾರೆ.

ಬೆಳೆ ಸಮೀಕ್ಷೆ: ಪೂರ್ವ ಮುಂಗಾರು, ಮುಂಗಾರು, ಹಿಂಗಾರು ಮತ್ತು ಬೇಸಿಗೆ

ಹಂಗಾಮುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಂಡ ಖಾಸಗಿ ನಿವಾಸಿಗಳಿಗೆ ಕೇಂದ್ರೀಕೃತ DBT k2 ಮೂಲಕ ಆಧಾ‌ರ್ ಆಧಾರಿತ ನೇರ ಗೌರವಧನ ಪಾವತಿ, ಮಾಸ್ಟರ್ ತರಬೇತುದಾರರು ಹಾಗೂ ಜಿಲ್ಲಾ ತಾಂತ್ರಿಕ ಸಲಹೆಗಾರರ ಗೌರವಧನ, ಬೆಳೆ ಸಮೀಕ್ಷೆ ಕುರಿತು ತರಬೇತಿ, ಕಾರ್ಯಾಗಾರ ಆಯೋಜನೆ, ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತು, ಮುದ್ರಣ, ಸಿ.ಡಿ. ದಾಖಲಾತಿ, ವಿದ್ಯುನ್ಮಾನ ಮತ್ತು ವಿವಿಧ ಮಾಧ್ಯಮಗಳ ಮುಖಾಂತರ ಪ್ರಚಾರಕ್ಕಾಗಿ ತಗಲುವ ವೆಚ್ಚ, ಹೆಲ್ಸ್ ಡೆಸ್ಕ್ ಸಿಬ್ಬಂದಿ ವೇತನ ಹಾಗೂ ತಂತ್ರಾಂಶ ನಿರ್ವಹಣೆ ವೆಚ್ಚ, ಶೇ. 1ರಷ್ಟು ದತ್ತಾಂಶದ ಪರಿಶೀಲನೆ ಕೈಗೊಳ್ಳುವ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಸಿಬ್ಬಂದಿಗಳಿಗೆ ಗೌರವಧನ, ಬೆಳೆ ಸಮೀಕ್ಷೆ ಕಾರ್ಯತಂಡ ನಿರ್ವಹಣೆ, ಇತರೆ ಕಛೇರಿ ಮತ್ತು ಆಡಳಿತಾತ್ಮಕ ವೆಚ್ಚಕ್ಕಾಗಿ ಉಪಯೋಗಿಸಲಾಗುತ್ತದೆ. ಪಹಣಿ ಹೊಂದಿರುವ ಎಲ್ಲಾ ಹಿಡುವಳಿದಾರರು ಅರ್ಹರಿರುತ್ತಾರೆ.

ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ: ಎಸ್.ಎಸ್.ಎಲ್.ಸಿ/ 10ನೇ ತರಗತಿಯನ್ನು

ಪೂರೈಸಿರುವ ಹಾಗೂ ರಾಜ್ಯದ ಯಾವುದೇ ಭಾಗದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆ/ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ರೈತರ ಹಾಗೂ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ ಹಾಗೂ ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ.

ಸದರಿ ಯೋಜನೆಯಡಿ:-

8, 9 ಮತ್ತು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳು ಮತ್ತು ಎಸ್.ಎಸ್.ಎಲ್.ಸಿ /10ನೇ ತರಗತಿಯನ್ನು ಪೂರೈಸಿರುವ ಹಾಗೂ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣಸಂಸ್ಥೆ/ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್-ಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ರೈತರ ಮಕ್ಕಳು ಈ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ.

ರೈತ ಕುಟುಂಬದ ಎಲ್ಲಾ ಮಕ್ಕಳು ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. ಸದರಿ ಉದ್ದೇಶಕ್ಕೆ ರೈತ ಎಂದರೆ ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ ಮಾಡುವಂತಹ/ ಕೃಷಿ ಮಾಡುವಂತಹ ಜಮೀನನ್ನು ತನ್ನ ಹೆಸರಿನಲ್ಲಿ ಹೊಂದಿರುವಂತಹ ವ್ಯಕ್ತಿ (ಕೃಷಿ ಇಲಾಖೆಯ FRUITS ತಂತ್ರಾಂಶದಲ್ಲಿ ಭೂಸಹಿತ FID ಸಂಖ್ಯೆ ಹೊಂದಿರಬೇಕು). ಕೃಷಿ ಕಾರ್ಮಿಕರು ಎಂದರೆ ಕೃಷಿ ಇಲಾಖೆಯ FRUITS ತಂತ್ರಾಂಶದಲ್ಲಿ ಭೂರಹಿತ FID ಸಂಖ್ಯೆ ಹೊಂದಿದ್ದು MGNREGA ಉದ್ಯೋಗ ಚೀಟಿ ಹೊಂದಿರಬೇಕು. ರೈತ ಕುಟುಂಬ ಎಂದರೆ ರಾಜ್ಯದ ಇ-ಆಡಳಿತ ಇಲಾಖೆಯು ನಿರ್ವಹಿಸುತ್ತಿರುವ ಕುಟುಂಬ” ತಂತ್ರಂಶದ ದತ್ತಾಂಶದಲ್ಲಿ ದಾಖಲಾಗಿರುವ ಸದಸ್ಯರು.

ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಇತರೆ ಯಾವುದೇ ಇಲಾಖೆಯು ನೀಡುವ ವಿದ್ಯಾರ್ಥಿ ವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುವುದಿಲ್ಲ.

ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿ:

ಕೃಷಿ ಪಂಡಿತ ಪ್ರಶಸ್ತಿ: ಕೃಷಿ ಕ್ಷೇತ್ರದಲ್ಲಿ ವಿನೂತನ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮುದಾಯದ ಅಭಿವೃದ್ಧಿಗಾಗಿ ಕೊಡುಗೆ ನೀಡುತ್ತಿರುವ ರೈತ ಮತ್ತು ರೈತ ಮಹಿಳೆಯರಿಗೆ ಕೃಷಿ ಪಂಡಿತ ಪ್ರಶಸ್ತಿ ನೀಡಲಾಗುತ್ತಿದೆ. ಹಿಂದೆ ಕೃಷಿ ಪ್ರಶಸ್ತಿ (ಪ್ರಥಮ/ದ್ವಿತೀಯ/ತೃತೀಯ/ಉದಯೋನ್ಮುಖ) ಪಡೆದವರು ಪಂಡಿತ ಹೊರತುಪಡಿಸಿ ಉಳಿದೆಲ್ಲಾ ರೈತ ಮತ್ತು ರೈತ ಮಹಿಳೆಯರು ಕೃಷಿ ಪಂಡಿತ ಪ್ರಶಸ್ತಿಗೆ ಸ್ಪರ್ಧಿಸಬಹುದಾಗಿರುತ್ತದೆ.

ಕೃಷಿ ಪ್ರಶಸ್ತಿ : ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವನೆಯನ್ನು ಉಂಟು ಮಾಡಿ ಅತಿ ಹೆಚ್ಚು ಇಳುವರಿ ಪಡೆಯುವ ರೈತ ಮತ್ತು ರೈತ ಮಹಿಳೆಯರಿಗೆ ಕೃಷಿ ಪ್ರಶಸಿಯನ್ನು ನೀಡಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಬೆಳೆ ಸ್ಪರ್ಧೆಯಡಿ ವಿಜೇತರಾದವರನ್ನು ಹೊರತುಪಡಿಸಿ ಉಳಿದೆಲ್ಲಾ ರೈತರು ಕೃಷಿ ಪ್ರಶಸ್ತಿಗೆ ಸ್ಪರ್ಧಿಸಬಹುದಾಗಿರುತ್ತದೆ.

ತರಬೇತಿ ಕಾರ್ಯಕ್ರಮಗಳು: ಈ ಯೋಜನೆಯಡಿ ಕೃಷಿ ವಿಸ್ತರಣಾ ಅಧಿಕಾರಿಗಳ ನಿರ್ವಹಣಾ

ಸಾಮರ್ಥ್ಯ ಮತ್ತು ರೈತರ/ ರೈತ ಮಹಿಳೆಯರ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಕೃಷಿ ತಾಂತ್ರಿಕತೆಗಳಿಗೆ ಸಂಬಂಧಿಸಿದಂತೆ ವಿಶೇಷ ತರಬೇತಿಗಳನ್ನು ಹಾಗೂ ಅಧ್ಯಯನ ಪ್ರವಾಸಗಳನ್ನು ಆಯೋಜಿಸಲಾಗುತ್ತದೆ.

ಕೃಷಿ ಭಾಗ್ಯ: ಮಳೆಯಾಶ್ರಿತ ಕೃಷಿ ನೀತಿ, 2014 ರನ್ವಯ 2023-24 ನೇ ಸಾಲಿನಲ್ಲಿ ರಾಜ್ಯದ 5

ಒಣ ಹವಾಮಾನ ವಲಯಗಳ 24 ಬರ ಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನ ಮಾಡಲಾಗುವುದು. ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು, ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು. ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ಕೆ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ, ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಕೃಷಿ ಭಾಗ್ಯ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Stone Fencing), ಹೊಂಡದಿಂದ ನೀರು ಎತ್ತಲು ಡೀಸೆಲ್/ಪೆಟ್ರೋಲ್/ಸೋಲಾರ್ ಪಂಪ್ ಸೆಟ್, ನೀರನ್ನು ಬೆಳೆಗೆ ಘಟಕಗಳನ್ನು ಒದಗಿಸಲು ಹಾಯಿಸಲು ಸೂಕ್ಷ್ಮ(ತುಂತುರು/ಹನಿ) ಯೋಜಿಸಲಾಗುತ್ತಿದೆ.

ಫಲಾನುಭವಿಯ ಆಯ್ಕೆ ಮಾನದಂಡಗಳು:

ಕ್ಷೇತ್ರ ಪರಿಶೀಲನೆಯಲ್ಲಿ ಅರ್ಹಗೊಂಡ ರಾಜ್ಯದ 5 ಕೃಷಿ ಹವಾಮಾನ ಒಣ ವಲಯದ (ಅಚ್ಚು ಕಟ್ಟು ಪ್ರದೇಶ ಹೊರತುಪಡಿಸಿ) ಎಲ್ಲಾ ಆಸಕ್ತ ರೈತರು ಯೋಜನೆಗೆ ಅರ್ಹರಾಗಿರುತ್ತಾರೆ.

ರೈತರ ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರ್ ನಲ್ಲಿ ಕನಿಷ್ಠ 1 ಎಕರೆ a (single land parcel).

ಕೃಷಿ ಭಾಗ್ಯ ಯೋಜನೆಯ ಪೂರ್ಣ ಪ್ಯಾಕೇಜ್‌ನ ಘಟಕಗಳನ್ನು ಅನುಷ್ಠಾನಗೊಳಿಸಲು ಆಸಕ್ತಿಯಿರುವಂತಹ ರೈತರನ್ನು ಮಾತ್ರ ಆಯ್ಕೆ ಮಾಡಿ ಕ್ಷೇತ್ರ ಪರಿಶೀಲನೆ ಕೈಗೊಳ್ಳಲಾಗುವುದು.

ಹಿಂದಿನ ಸಾಲುಗಳಲ್ಲಿ ಕೃಷಿ ಭಾಗ್ಯ ಯೋಜನೆ ಅಥವ ಇನ್ಯಾವುದೇ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಸದರಿ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ

ಪರಿಶಿಷ್ಟ ಜಾತಿ/ಪ.ಪಂಗಡ ರೈತರು ಸರ್ಕಾರದ ನಿರ್ದಿಷ್ಟ ಅನುಪಾತದನ್ವಯ ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ರೈತರು ಕಡ್ಡಾಯವಾಗಿ ಫ್ರೂಟ್ಸ್ (FRUITS) ಪೋರ್ಟಲ್‌ನಲ್ಲಿ ನೋಂದಣಿಯಾಗಿ FID ಸಂಖ್ಯೆ ಹೊಂದಿರಬೇಕು.

ಆಧಾರ್ ಕಾರ್ಡ್, ಆರ್‌ಟಿಸಿ (RTC) ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಕೆ-ಕಿಸಾನ್ (K-Kisan) ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು.

ಕೃಷಿ ಯಂತ್ರೋಪಕರಣ ಪಡೆದವರು 7 ವರ್ಷಗಳ ನಂತರ ಹಾಗೂ ಟಾರ್ಪಾಲಿನ್ ಪಡೆದವರು 3 ವರ್ಷಗಳ ನಂತರ ಮತ್ತೆ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.

Good news for the state's farmers: You will get these 21 facilities from the government!
Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಯ ಗಮನಕ್ಕೆ : ನಿಮ್ಮ ಮನೆ, ಸೈಟ್‌ ಗೆ `ಇ-ಸ್ವತ್ತು’ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

02/04/2026 6:40 AM2 Mins Read

ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ 1,164 ಕೋಟಿ ರೂ. ತೆರಿಗೆ ಸಂಗ್ರಹ : ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

02/04/2026 6:38 AM1 Min Read

ಪುರುಷರೇ ಎಚ್ಚರ: ಈ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಬೇಡ .!

02/04/2026 6:30 AM2 Mins Read
Recent News

ಅಮೆರಿಕ ಅಧ್ಯಕ್ಷರ ಹೇಳಿಕೆ ‘ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ’: ಕದನ ವಿರಾಮ ಕೋರಿದ್ದ ಟ್ರಂಪ್ ವಾದವನ್ನು ತಳ್ಳಿಹಾಕಿದ ಇರಾನ್!

02/04/2026 7:08 AM

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ 21 ಸೌಲಭ್ಯಗಳು.!

02/04/2026 7:05 AM

ಗಡಿ ಕಾಯುವ ಯೋಧರಿಗೆ ಶತ್ರುಗಳಿಗಿಂತ ‘ಜೀವನಶೈಲಿ ಕಾಯಿಲೆ’ಗಳೇ ದೊಡ್ಡ ಸವಾಲು: ಸೈನ್ಯದಲ್ಲಿ ಮಧುಮೇಹ ಪ್ರಕರಣಗಳ ಏರಿಕೆ ಕಂಡು ಬೆಚ್ಚಿಬಿದ್ದ ಕೇಂದ್ರ ಸರ್ಕಾರ!

02/04/2026 7:02 AM

‘ನ್ಯಾಟೋ’ ಮೈತ್ರಿಕೂಟದಿಂದ ಹೊರಬರಲು ಅಧ್ಯಕ್ಷ ಟ್ರಂಪ್ ಚಿಂತನೆ; ಮಧ್ಯಪ್ರಾಚ್ಯ ಯುದ್ಧದ ಬೆನ್ನಲ್ಲೇ ಅಮೆರಿಕದ ಅಚ್ಚರಿಯ ನಡೆ!

02/04/2026 6:55 AM
State News
KARNATAKA

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ 21 ಸೌಲಭ್ಯಗಳು.!

By kannadanewsnow5702/04/2026 7:05 AM KARNATAKA 5 Mins Read

ಬೆಂಗಳೂರು: ರಾಜ್ಯ ಕೃಷಿ ಇಲಾಖೆಯು ರೈತರ ಆರ್ಥಿಕ ಸಬಲೀಕರಣಕ್ಕಾಗಿ ಮತ್ತು ಕೃಷಿಯಲ್ಲಿ ಆಧುನಿಕತೆಯನ್ನು ಉತ್ತೇಜಿಸಲು ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ…

ರಾಜ್ಯದ ಜನತೆಯ ಗಮನಕ್ಕೆ : ನಿಮ್ಮ ಮನೆ, ಸೈಟ್‌ ಗೆ `ಇ-ಸ್ವತ್ತು’ ಮಾಡಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

02/04/2026 6:40 AM

ರಾಜ್ಯದ ಗ್ರಾಮಪಂಚಾಯಿತಿಗಳಲ್ಲಿ 1,164 ಕೋಟಿ ರೂ. ತೆರಿಗೆ ಸಂಗ್ರಹ : ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

02/04/2026 6:38 AM

ಪುರುಷರೇ ಎಚ್ಚರ: ಈ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಬೇಡ .!

02/04/2026 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.