Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೌದಿ ಅರೇಬಿಯಾದ ವಾಯುನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ: ಅಮೆರಿಕದ ಸೈನಿಕರಿಗೆ ಗಾಯ, ಯುದ್ಧದ ಭೀತಿ ತೀವ್ರ!

28/03/2026 7:59 AM

ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ : `ಪೌತಿ ಖಾತೆ’ ಪ್ರಕ್ರಿಯೆ ಮತ್ತಷ್ಟು ಸರಳ, 13 ಅಂಶಗಳ ಮಾರ್ಗಸೂಚಿ ಪ್ರಕಟ !

28/03/2026 7:49 AM

ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ಹಬ್ಬ: 10 ತಂಡಗಳು, 84 ಪಂದ್ಯಗಳು; ಚಾಂಪಿಯನ್ ಪಟ್ಟಕ್ಕಾಗಿ ಶುರುವಾಯ್ತು ಮಹಾಯುದ್ಧ!

28/03/2026 7:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ : `ಪೌತಿ ಖಾತೆ’ ಪ್ರಕ್ರಿಯೆ ಮತ್ತಷ್ಟು ಸರಳ, 13 ಅಂಶಗಳ ಮಾರ್ಗಸೂಚಿ ಪ್ರಕಟ !
KARNATAKA

ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ : `ಪೌತಿ ಖಾತೆ’ ಪ್ರಕ್ರಿಯೆ ಮತ್ತಷ್ಟು ಸರಳ, 13 ಅಂಶಗಳ ಮಾರ್ಗಸೂಚಿ ಪ್ರಕಟ !

By kannadanewsnow5728/03/2026 7:49 AM

ಬೆಂಗಳೂರು: ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಆಸ್ತಿಯನ್ನು (ಜಮೀನು) ಅವರ ವಾರಸುದಾರರ ಹೆಸರಿಗೆ ವರ್ಗಾಯಿಸುವ ‘ಪೌತಿ ಖಾತೆ’ ಪ್ರಕ್ರಿಯೆಯನ್ನು ಕಂದಾಯ ಇಲಾಖೆ ಮತ್ತಷ್ಟು ಸರಳೀಕರಣಗೊಳಿಸಿದೆ. ಇ-ಪೌತಿ ತಂತ್ರಾಂಶದಲ್ಲಿ ಉಂಟಾಗುತ್ತಿದ್ದ ಗೊಂದಲಗಳನ್ನು ನಿವಾರಿಸಲು ಮತ್ತು ರೈತರಿಗೆ ತ್ವರಿತವಾಗಿ ಸೇವೆ ಒದಗಿಸಲು ಇಲಾಖೆಯು 13 ಅಂಶಗಳ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಜಮೀನಿನ ಮೂಲ ಮಾಲೀಕರು ಮರಣ ಹೊಂದಿದ ನಂತರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆಯಾಗದಿದ್ದರೆ ಬ್ಯಾಂಕ್ ಸಾಲ, ಪ್ರಕೃತಿ ವಿಕೋಪದ ಪರಿಹಾರ, ಬೆಳೆ ವಿಮೆ ಹಾಗೂ ‘ಪಿಎಂ ಕಿಸಾನ್’ ಯೋಜನೆಯ ಸೌಲಭ್ಯಗಳು ಸಿಗುವುದಿಲ್ಲ. ಈ ಸಮಸ್ಯೆಯನ್ನು ತಪ್ಪಿಸಲು ಮ್ಯುಟೇಶನ್ ಪ್ರಕ್ರಿಯೆಯನ್ನು ಇದೀಗ ಸುಲಭಗೊಳಿಸಲಾಗಿದೆ.

ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು:

ದಾಖಲೆಗಳ ಸಲ್ಲಿಕೆ: ಅಟಲ್ ಜೀ ಜನಸ್ನೇಹಿ ಕೇಂದ್ರದಿಂದ ಮರಣ ಪ್ರಮಾಣಪತ್ರ ಹಾಗೂ ವಂಶವೃಕ್ಷವನ್ನು ಪಡೆದು ತಂತ್ರಾಂಶದಲ್ಲಿ ನಮೂದಿಸಬೇಕು. ಒಂದು ವೇಳೆ ದಾಖಲೆಗಳಿಲ್ಲದಿದ್ದರೆ, ನೋಟರಿ ಸಮಕ್ಷಮ ಅಫಿಡವಿಟ್ ಸಲ್ಲಿಸಿ ವಂಶವೃಕ್ಷ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ವಿಡಿಯೋ ಮಹಜರು ಕಡ್ಡಾಯ: ಡೆತ್ ಸರ್ಟಿಫಿಕೇಟ್ ಇಲ್ಲದ ಸಂದರ್ಭದಲ್ಲಿ, ಆಧಾರ್ ಮತ್ತು ರೇಷನ್ ಕಾರ್ಡ್ ಪರಿಶೀಲಿಸಿ, ವಾರಸುದಾರರಿಂದ ಅಫಿಡವಿಟ್ ಪಡೆದು ಗ್ರಾಮ ಆಡಳಿತಾಧಿಕಾರಿಗಳು (VAO) ‘ವಿಡಿಯೋ ಮಹಜರು’ ಮಾಡಿ ಇ-ಪೌತಿ ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು.

ಗ್ರಾಮಸಭೆ ಮೂಲಕ ಪರಿಹಾರ: ಮರಣ ಪ್ರಮಾಣಪತ್ರ, ಆಧಾರ್, ಪಡಿತರ ಚೀಟಿ ಯಾವುದೂ ಇಲ್ಲದಿದ್ದರೆ, ಗ್ರಾಮಸ್ಥರ ಮಹಜರಿನೊಂದಿಗೆ ಕುಟುಂಬ ಸದಸ್ಯರ ನೋಟರಿ ಪ್ರಮಾಣಪತ್ರ ಮತ್ತು ಆಧಾರ್ ಪಡೆದು ಖಾತೆ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ರೈತರಿಗೆ ಸಿಗುವ ಪ್ರಮುಖ ವಿನಾಯಿತಿಗಳು:

ಶುಲ್ಕ ಮನ್ನಾ: ಇ-ಪೌತಿ ಖಾತೆ ಮಾಡಲು ವಿಧಿಸಲಾಗುತ್ತಿದ್ದ 35 ರೂ. ಮ್ಯುಟೇಶನ್ ಶುಲ್ಕವನ್ನು ಸಂಪೂರ್ಣವಾಗಿ ವಿನಾಯಿತಿ ಮಾಡಲಾಗಿದೆ.

15 ದಿನಗಳಲ್ಲಿ ಖಾತೆ: ಎಲ್ಲಾ ವಾರಸುದಾರರು ಆಧಾರ್ ಇ-ಕೆವೈಸಿ (e-KYC) ನೀಡಿದರೆ, ಕೇವಲ 15 ದಿನಗಳ ಒಳಗೆ ಖಾತೆ ವರ್ಗಾವಣೆಯಾಗಲಿದೆ.

ಪೂರ್ವ ನಕ್ಷೆ ಅಗತ್ಯವಿಲ್ಲ: ಇ-ಪೌತಿ ಖಾತೆಗೆ ಮ್ಯುಟೇಶನ್ ಪೂರ್ವ ನಕ್ಷೆ (11E Sketch) ಮಾಡಿಸುವ ಅಗತ್ಯವಿರುವುದಿಲ್ಲ.

ಪಾಲುಪಟ್ಟಿ: ಜಂಟಿ ಇದಿರು ವಿಭಾಗ ಅಥವಾ ಪಾಲುಪಟ್ಟಿ ಆಧಾರದ ಮೇಲೂ ಮ್ಯುಟೇಶನ್ಗೆ ಅವಕಾಶ ನೀಡಲಾಗಿದೆ.

ತಕರಾರು ಬಂದರೆ ಇತ್ಯರ್ಥ ಹೇಗೆ?

ಇ-ಪೌತಿಯಲ್ಲಿ ಹಕ್ಕು ಬದಲಾವಣೆಗೆ ನಮೂನೆ-12 ಮತ್ತು 21ನ್ನು ಹೊರಡಿಸಲಾಗುತ್ತಿದ್ದು, ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ಇರುತ್ತದೆ.

ತಕರಾರುಗಳು ಬಂದರೆ ಅವುಗಳನ್ನು ತಹಶೀಲ್ದಾರ್ (ಗ್ರೇಡ್-1 ಮತ್ತು ಗ್ರೇಡ್-2) ಅವರು RRCMS ತಂತ್ರಾಂಶದ ಮೂಲಕ ನಿಯಮಾನುಸಾರ ಕೇವಲ ಒಂದು ತಿಂಗಳೊಳಗೆ ಇತ್ಯರ್ಥಪಡಿಸಬೇಕು.

ಒಬ್ಬರು ಒಪ್ಪದಿದ್ದರೂ ತಕರಾರು: ವಾರಸುದಾರರ ಪೈಕಿ ಯಾರಾದರೂ ಒಬ್ಬರು ಆಧಾರ್ ಇ-ಕೆವೈಸಿ ನೀಡಲು ನಿರಾಕರಿಸಿದರೆ, ಅದನ್ನು ತಂತ್ರಾಂಶದಲ್ಲಿ ‘ತಕರಾರು’ ಎಂದೇ ಪರಿಗಣಿಸಲಾಗುತ್ತದೆ. 15 ದಿನಗಳ ನೋಟಿಸ್ ಅವಧಿ ಮುಗಿದ ಬಳಿಕ ಪ್ರಕರಣವು ತಹಶೀಲ್ದಾರ್ ನ್ಯಾಯಾಲಯಕ್ಕೆ (RRCMS) ವರ್ಗಾವಣೆಯಾಗುತ್ತದೆ.

ವಿಚಾರಣೆ ಬಳಿಕವೂ ಜಂಟಿ ಪಹಣಿಗೆ ಒಮ್ಮತ ಮೂಡದಿದ್ದರೆ, ಪಹಣಿಯ ಕಾಲಂ 11ರಲ್ಲಿ ‘ಉತ್ತರಾಧಿಕಾರಿಗಳ ತಕರಾರು ಇದ್ದು, ಪೌತಿ ಖಾತೆಗೆ ಒಪ್ಪಿಲ್ಲ’ ಎಂದು ನಮೂದಿಸಲಾಗುತ್ತದೆ.

ಗ್ರಾಮ ಆಡಳಿತಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಆಧಾರ್ ಸೀಡಿಂಗ್ ಮಾಡುವಾಗಲೇ ಮೃತಪಟ್ಟವರನ್ನು ಗುರುತಿಸಿ ಇ-ಪೌತಿ ತಂತ್ರಾಂಶದಲ್ಲಿ ದಾಖಲಿಸುತ್ತಿದ್ದು, ಈ ಹೊಸ ಮಾರ್ಗಸೂಚಿಯಿಂದ ಲಕ್ಷಾಂತರ ರೈತ ಕುಟುಂಬಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

13-point guidelines have been published! good news for the state's farmers: The Pauti account process has been simplified further
Share. Facebook Twitter LinkedIn WhatsApp Email

Related Posts

ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಇಲ್ಲಿದೆ ‘ಸೂಪರ್ ಟ್ರಿಕ್’: ಟ್ಯಾಂಕ್ ಒಳಗಿಳಿಯದೆಯೇ ಕೇವಲ 2 ನಿಮಿಷದಲ್ಲಿ ಕ್ಲೀನ್!

28/03/2026 7:38 AM2 Mins Read

ALERT : `ಗ್ಯಾಸ್ ಸಿಲಿಂಡರ್’ ಬಳಸುವ ಮುನ್ನ ಎಚ್ಚರ : ತಪ್ಪದೇ ಈ ರೀತಿ ಚೆಕ್ ಮಾಡಿಕೊಳ್ಳಿ ಅದರ ‘ಎಕ್ಸ್‌ ಪೈರಿ ಡೇಟ್’!

28/03/2026 7:34 AM2 Mins Read

BREAKING : 2025ನೇ ಸಾಲಿನ `ಮುಖ್ಯಮಂತ್ರಿಗಳ ಪೊಲೀಸ್ ಪದಕ’ ಪ್ರಕಟ: ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

28/03/2026 7:23 AM2 Mins Read
Recent News

ಸೌದಿ ಅರೇಬಿಯಾದ ವಾಯುನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ: ಅಮೆರಿಕದ ಸೈನಿಕರಿಗೆ ಗಾಯ, ಯುದ್ಧದ ಭೀತಿ ತೀವ್ರ!

28/03/2026 7:59 AM

ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ : `ಪೌತಿ ಖಾತೆ’ ಪ್ರಕ್ರಿಯೆ ಮತ್ತಷ್ಟು ಸರಳ, 13 ಅಂಶಗಳ ಮಾರ್ಗಸೂಚಿ ಪ್ರಕಟ !

28/03/2026 7:49 AM

ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ಹಬ್ಬ: 10 ತಂಡಗಳು, 84 ಪಂದ್ಯಗಳು; ಚಾಂಪಿಯನ್ ಪಟ್ಟಕ್ಕಾಗಿ ಶುರುವಾಯ್ತು ಮಹಾಯುದ್ಧ!

28/03/2026 7:48 AM

ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಇಲ್ಲಿದೆ ‘ಸೂಪರ್ ಟ್ರಿಕ್’: ಟ್ಯಾಂಕ್ ಒಳಗಿಳಿಯದೆಯೇ ಕೇವಲ 2 ನಿಮಿಷದಲ್ಲಿ ಕ್ಲೀನ್!

28/03/2026 7:38 AM
State News
KARNATAKA

ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ : `ಪೌತಿ ಖಾತೆ’ ಪ್ರಕ್ರಿಯೆ ಮತ್ತಷ್ಟು ಸರಳ, 13 ಅಂಶಗಳ ಮಾರ್ಗಸೂಚಿ ಪ್ರಕಟ !

By kannadanewsnow5728/03/2026 7:49 AM KARNATAKA 2 Mins Read

ಬೆಂಗಳೂರು: ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಆಸ್ತಿಯನ್ನು (ಜಮೀನು) ಅವರ ವಾರಸುದಾರರ ಹೆಸರಿಗೆ ವರ್ಗಾಯಿಸುವ ‘ಪೌತಿ ಖಾತೆ’ ಪ್ರಕ್ರಿಯೆಯನ್ನು ಕಂದಾಯ ಇಲಾಖೆ…

ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಇಲ್ಲಿದೆ ‘ಸೂಪರ್ ಟ್ರಿಕ್’: ಟ್ಯಾಂಕ್ ಒಳಗಿಳಿಯದೆಯೇ ಕೇವಲ 2 ನಿಮಿಷದಲ್ಲಿ ಕ್ಲೀನ್!

28/03/2026 7:38 AM

ALERT : `ಗ್ಯಾಸ್ ಸಿಲಿಂಡರ್’ ಬಳಸುವ ಮುನ್ನ ಎಚ್ಚರ : ತಪ್ಪದೇ ಈ ರೀತಿ ಚೆಕ್ ಮಾಡಿಕೊಳ್ಳಿ ಅದರ ‘ಎಕ್ಸ್‌ ಪೈರಿ ಡೇಟ್’!

28/03/2026 7:34 AM

BREAKING : 2025ನೇ ಸಾಲಿನ `ಮುಖ್ಯಮಂತ್ರಿಗಳ ಪೊಲೀಸ್ ಪದಕ’ ಪ್ರಕಟ: ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

28/03/2026 7:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.