ಬೆಂಗಳುರು : ರೈತರು ಕಡ್ಡಾಯವಾಗಿ ಆಧಾರ ಸಂಖ್ಯೆ ಜೋಡಿಸಿದ್ದಲ್ಲಿ ಮಾತ್ರ 10 ಹೆಚ್ಪಿ ವರೆಗಿನ ಕೃಷಿ ಪಂಪ್ಸೆಟ್ಗಳಿಗೆ ಮಾತ್ರ ಸಬ್ಸಿಡಿ ಲಭ್ಯವಿರುತ್ತದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಜಾಲದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುವುದು ಅಥವಾ ವಿದ್ಯುತ್ ಕಳ್ಳತನ ಮಾಡುವುದು ಕಾನೂನುಬಾಹಿರ ಹಾಗೂ ಅದರಿಂದ ವಿದ್ಯುತ್ ಅವಘಡಗಳು ಸಂಭವಿಸಬಹುದು.ವಿದ್ಯುತ್ ಕಳ್ಳತನ ಪ್ರಯತ್ನದ ನಡುವೆ ವಿದ್ಯುತ್ ಅಪಘಾತ ಸಂಭವಿಸಿ ಪ್ರಾಣಹಾನಿಯಾಗುತ್ತಿವೆ.
ನಿಮ್ಮ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಅವಶ್ಯಕತೆಯಿದ್ದಲ್ಲಿ, ಹೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗ ಕಚೇರಿಗೆ ಭೇಟಿ ನೀಡಿ ಅಧೀಕೃತವಾಗಿ ಹೊಸ ಸಂಪರ್ಕ ಪಡೆಯಿರಿ ಎಂದು ತಿಳಿಸಲಾಗಿದ್ದು, ವಿದ್ಯುತ್ ಜಾಲಕ್ಕೆ ಅಕ್ರಮ ಕೃಷಿ ಪಂಪ್ಸೆಟ್ಗಳು ಜೋಡಣೆಗೊಂಡಲ್ಲಿ ವಿದ್ಯುಚ್ಛಕ್ತಿ ಕಾಯ್ದೆ 2003ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಜಾಲದ ಹೊರತಾಗಿ ಕುಸುಮ್ ಬಿ ಯೋಜನೆಯಡಿ ಸೋಲಾರ್ ವಿದ್ಯುತ್ ಬಳಸಿ. ಈ ಯೋಜನೆಯಡಿ ರಾಜ್ಯ ಸರ್ಕಾರದಿಂದ ಶೇ.50, ಕೇಂದ್ರ ಸರ್ಕಾರದಿಂದ ಶೇ.30 ಸಬ್ಸಿಡಿ ಲಭ್ಯ.ಕೇವಲ ಶೇ.20 ರಷ್ಟು ಹಣ ಮಾತ್ರ ರೈತರು ಭರಿಸಬೇಕು.








