ಬೆಂಗಳೂರು : ರಾಜ್ಯ ಸರ್ಕಾರವು ಗ್ರಾಮೀಣ ಜನತೆಗೆ ಸಿಹಿಸುದ್ದಿ ನೀಡಿದ್ದು, ನಾಡ ಕಛೇರಿಯ 44 ಸೇವೆಗಳು ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರದಲ್ಲಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000 ಕ್ಕೆ ಕರೆಮಾಡಿ. ಪಂಚಮಿತ್ರ ಸಹಾಯವಾಣಿ- ಸದಾ ನಿಮ್ಮೊಂದಿಗೆ.
ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಈಗ ನಾಡಕಚೇರಿ ಸೇವೆಗಳು ಲಭ್ಯ, ಜಾತಿ ಮತ್ತು ಆದಾಯ ಪ್ರಮಾಣಕ್ಕೆ ಅಲೆದಾಡುವ ಅಗತ್ಯವಿಲ್ಲ, ನಾಡಕಚೇರಿಯ 44 ಸೇವೆಗಳು ಬಾಪೂಜಿ ಸೇವಾಕೇಂದ್ರಗಳಲ್ಲಿ ಸಿಗಲಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಬಾಪೂಜಿ ಸೇವಾ ಕೇಂದ್ರಗಳಲ್ಇ 85 ಸೇವೆಗಳು ಲಭ್ಯವಿವೆ.