ಬೆಂಗಳೂರು : ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ ಬಡಾವಣೆ ಆಸ್ತಿದಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಗ್ರಾಮೀಣ ರೆವಿನ್ಯೂ ಸೈಟ್ ಗೂ ಇ-ಖಾತಾ ನೀಡಲು ಮುಂದಾಗಿದೆ.
ಹೌದು, ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆವಿನ್ಯೂ ಸೈಟ್ಗಳ ಮಾಲೀಕರಿಗೆ ಸರ್ಕಾರ ಶೀಘ್ರದಲ್ಲಿಯೇ ಇ-ಖಾತಾ ಗ್ಯಾರಂಟಿ ನೀಡಲಿದೆ. ಗ್ರಾಮ ಪಂಚಾಯಿತಿಯಲ್ಲೂ 11ಬಿ ಅನ್ವಯ ಬಿ-ಖಾತಾ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ನಿರ್ಧರಿಸಿದೆ.
ಈ ಸಂಬಂಧ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತಂದಿದ್ದು, ಕರಡು ಬಿಡುಗಡೆ ಮಾಡಿದೆ. ತಿಂಗಳ ಅಂತ್ಯಕ್ಕೆ ಗ್ರಾಮ ಪಂಚಾಯಿತಿಯ ಪಂಚತಂತ್ರ 2.0 ತಂತ್ರಾಂಶದಲ್ಲಿ 11ಬಿ ಹೆಸರಿನಲ್ಲಿ ಇ-ಖಾತಾ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪಂಚತಂತ್ರ-2.0ರಲ್ಲಿ 1.40 ಲಕ್ಷ ಆಸ್ತಿ ನೋಂದಣಿ ಆಗಿದ್ದು, ಇ-ಸ್ವತ್ತು ಒಳಗೆ 44 ಲಕ್ಷ ಆಸ್ತಿಗೆ ಇ-ಖಾತಾ ನೀಡಲಾಗಿತ್ತು. ಉಳಿದ 96 ಲಕ್ಷ ಆಸ್ತಿಗಳಿಗೂ ಇ-ಖಾತಾ ಸಿಗಲಿದೆ. ಇದರ ಜತೆಗೆ ಹೊಸ ನಿರ್ಮಾಣವಾಗಿರುವ ಅಕ್ರಮ ಲೇಔಟ್ಗಳಲ್ಲಿ ಲಕ್ಷಾಂತರ ಸೈಟ್ಗಳು ಇ-ಸ್ವತ್ತು ತಂತ್ರಾಂಶದಲ್ಲಿ 11ಬಿ ಸಿಗಲಿದೆ.