ಬೆಂಗಳೂರು: ಡಾ. ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆಯ ಎರಡನೇ ಹಂತದಲ್ಲಿ ʼಟೆನೆಕ್ಟ್ ಪ್ಲಸ್ʼ ಚುಚ್ಚುಮದ್ದನ್ನು ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದೆ. ಈ ಚುಚ್ಚುಮದ್ದು ಒಂದು ಬಾಟಲಿಗೆ ₹30 ಸಾವಿರ ದರ ಇದ್ದು, ಉಚಿತವಾಗಿ ನೀಡಲಾಗುತ್ತಿದೆ.
ಹೃದಯಾಘಾತಕ್ಕೆ ಒಳಗಾದವರಿಗೆ ಇಸಿಜಿ ಪರೀಕ್ಷೆ ನಡೆಸಿ, ಚುಚ್ಚುಮದ್ದು ಅಗತ್ಯವಿದ್ದಲ್ಲಿ ನೀಡಲಾಗುತ್ತಿದೆ. ತೃತೀಯ ಹಂತದ ಚಿಕಿತ್ಸೆಗೆ ʼಹಬ್ ಆಸ್ಪತ್ರೆʼಗಳಾಗಿ ನೋಂದಾಯಿತವಾಗಿರುವ ಜಯದೇವ ಹೃದ್ರೋಗ ಸಂಸ್ಥೆ ಸೇರಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಇದೇ ಚುಚ್ಚುಮದ್ದುಗಳಿಗೆ ರವಾನಿಸಲಾಗುತ್ತಿದೆ.
ಡಾ. ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆಯಡಿ ಕಳೆದ ಒಂದು ತಿಂಗಳಲ್ಲಿ 348 ಮಂದಿಯ ಜೀವ ರಕ್ಷಿಸಲಾಗಿದೆ. ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. 3 ಲಕ್ಷಕ್ಕೂ ಅಧಿಕ ಮಂದಿಗೆ ಇಸಿಜಿ ಪರೀಕ್ಷೆ ಮಾಡಿಸಲಾಗಿದೆ.
ಡಾ. ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆಯ ಎರಡನೇ ಹಂತದಲ್ಲಿ ʼಟೆನೆಕ್ಟ್ ಪ್ಲಸ್ʼ ಚುಚ್ಚುಮದ್ದನ್ನು ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದೆ. ಈ ಚುಚ್ಚುಮದ್ದು ಒಂದು ಬಾಟಲಿಗೆ ₹30 ಸಾವಿರ ದರ ಇದ್ದು, ಉಚಿತವಾಗಿ ನೀಡಲಾಗುತ್ತಿದೆ.
ಹೃದಯಾಘಾತಕ್ಕೆ ಒಳಗಾದವರಿಗೆ ಇಸಿಜಿ ಪರೀಕ್ಷೆ ನಡೆಸಿ, ಚುಚ್ಚುಮದ್ದು… pic.twitter.com/x8VuRPqe7b
— DIPR Karnataka (@KarnatakaVarthe) November 28, 2024
GOOD NEWS: ರಾಜ್ಯ ಸರ್ಕಾರಿ ನೌಕರರು, ನಿವೃತ್ತರ ತುಟ್ಟಿಭತ್ಯೆ ಶೇ.2.25ರಷ್ಟು ಹೆಚ್ಚಳ | DA Hike
BREAKING: ಕಾಶ್ಮೀರ ಕಣಿವೆಯಲ್ಲಿ ಭೂಕಂಪ | Earthquake In Kashmir Valley