ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಎನ್ನುವಂತೆ 10 ತಾಲ್ಲೂಕಿನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಆಯುಷ್ ಆಯುಕ್ತರು ಪುಸ್ತಾವನೆ ಸಲ್ಲಿಸಿ, ತಾಲ್ಲೂಕು ಆಸ್ಪತ್ರೆಗಳಲ್ಲಿ ಯೋಗ ಮತ್ತು ಪುಕೃತಿ ಚಿಕಿತ್ಸೆ ಕೇಂದ್ರಗಳನ್ನು ತೆರೆಯಲು ಕೇಂದ್ರ ಪುರಸ್ಕೃತ ಯೋಜನೆಯಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (NRHM) ದಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದೊಂದಿಗೆ 2009-10ರಿಂದ ರಾಜ್ಯದ 10 ತಾಲ್ಲೂಕಾ ಆಸ್ಪತ್ರೆಗಳಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಆರೋಗ್ಯ ಇಲಾಖೆ ಮತ್ತು ಅಧ್ಯಕ್ಷರು, ಶಾಂತಿವನ ಟ್ರಸ್ ಧರ್ಮಸ್ಥಳರವರ ನಡುವೆ 10 ವರ್ಷದ ಅವಧಿಗೆ MOU ಮಾಡಿಕೊಳ್ಳಲಾಗಿತ್ತು.ತದನಂತರ ಐದು ವರ್ಷಗಳಿಗೆ MoU ಮುಂದುವರೆದು 2022ಕ್ಕೆ ಮುಕ್ತಾಯಗೊಂಡಿರುತ್ತದೆ. ಅಲ್ಲದೇ, ಏಪ್ರಿಲ್- 2022 ರಿಂದ ಆಗಸ್ಟ್-2024 ರವರೆಗೆ ಸದರಿ ಕೇಂದ್ರಗಳನ್ನು ಶಾಂತಿವನ ಟ್ರಸ್ ರವರು ನಿರ್ವಹಿಸಿರುತ್ತಾರೆ.
ದಿನಾಂಕ:28-11-2024 ರಂದು ನಡೆದ ಸಭೆಯ ನಡವಳಿಯ ನಿರ್ಣಯದಲ್ಲಿ ಸದರಿ ಯೋಗ ಮತ್ತು ಪುಕೃತಿ ಚಿಕಿತ್ಸಾ ಕೇಂದ್ರಗಳನ್ನು ಆಯುಷ್ ಇಲಾಖೆಯ ಸುಪರ್ದಿಗೆ ಪಡೆದು ಇಲಾಖಾ ವತಿಯಿಂದ ಮುಂದುವರೆಸುವಂತೆ ಹಾಗೂ ಅಪೂರ್ಣಗೊಂಡಿರುವ ಇನ್ನುಳಿದ 10 ಯೋಗ ಮತ್ತು ಪಕೃತಿ ಚಿಕಿತ್ಸಾ ಕೇಂದ್ರಗಳನ್ನು ಸಹ ಲಭ್ಯವಿರುವ ಅನುದಾನ ಬಳಸಿಕೊಂಡು ಕಾರ್ಯಾರಂಭಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿರುತ್ತದೆ. ಶಾಂತಿವನ ಟ್ರಸ್ಟ್ ರವರೊಂದಿಗೆ ಲಭ್ಯವಿರುವ Carpus Fund ಇಲಾಖೆಗೆ ಪಡೆದು ಕೇಂದ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಲು ಸೂಚಿಸಲಾಗಿರುತ್ತದೆ.
ಆದುದರಿಂದ, ಸದರಿ ಯೋಗ ಮತ್ತು ಪುಕೃತಿ ಚಿಕಿತ್ಸಾ ಕೇಂದ್ರಗಳನ್ನು ಆಯುಷ್ ಇಲಾಖೆಯ ವತಿಯಿಂದ ನಿರ್ವಹಿಸುವುದರಿಂದ ಪತಿ ಯೋಗ ಮತ್ತು ಪುಕೃತಿ ಚಿಕಿತ್ಸಾ ಕೇಂದ್ರಕ್ಕೆ 06 ಸಿಬ್ಬಂದಿಗಳಂತೆ (ವೈದ್ಯಾಧಿಕಾರಿ – 01, ಥೆರಪಿಸ್ಟ್(ಪುರುಷ ಮತ್ತು ಮಹಿಳೆ)-02, ಅಟೆಂಡರ್ (ಪುರುಷ ಮತ್ತು ಮಹಿಳೆ)-02, Multipurpose Worker-01) ಒಟ್ಟು 20 ಕೇಂದ್ರಗಳಿಗೆ 120 ಗುತ್ತಿಗೆ ಹುದ್ದೆಗಳನ್ನು ಸೃಜಿಸಲು ಹಾಗೂ ಸದರಿ ಗುತ್ತಿಗೆ ಹುದ್ದೆಗಳಿಗೆ ಅವಶ್ಯವಿರುವ ವೇತನ ಅನುದಾನವನ್ನು ರಾಷ್ಟ್ರೀಯ ಆಯುಷ್ ಯೋಜನೆಯಡಿ 2025-26 ಸಾಲಿನ ಕ್ರಿಯಾಯೋಜನೆಯಲ್ಲಿ ಒದಗಿಸಿಕೊಳ್ಳಲಾಗುವುದು ಮತ್ತು ಕೇಂದ್ರಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಕಾಲಕಾಲಕ್ಕೆ ಗುತ್ತಿಗೆ ಹುದ್ದೆಗಳನ್ನು ನೇಮಕಾತಿ ಮಾಡಲಾಗುವುದೆಂದು ತಿಳಿಸಿ. ಸದರಿ 120 ಗುತ್ತಿಗೆ ಹುದ್ದೆಗಳನ್ನು ಸೃಜಿಸಿ ಆದೇಶಿಸುವಂತೆ ಕೋರಿದ್ದರು.
ಮುಂದುವರೆದು, 20 ಯೋಗ ಪುಕೃತಿ ಚಿಕಿತ್ಸಾ ಕೇಂದ್ರಗಳಲ್ಲಿ, ಶಾಂತಿವನ ಟ್ರಸ್ಟ್‌ನ ಸಮನ್ವಯದೊಂದಿಗೆ ಈ ಹಿಂದೆ ಕೇವಲ 10 ಕೇಂದ್ರಗಳನ್ನು ಮಾತ್ರ ಪ್ರಾರಂಭಿಸಲಾಗಿತ್ತು. 10 ಕೇಂದ್ರಗಳಿಗೆ ಮಾನವ ಸಂಪನ್ಮೂಲ/ಉಪಭೋಗ್ಯ ವಸ್ತುಗಳಿಗೆ NAM ಅಡಿಯಲ್ಲಿ ಅನುದಾನಕ್ಕಾಗಿ ಭಾರತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಈ ಕೇಂದ್ರಗಳನ್ನು ಅನುಮೋದನೆ ದೊರೆತ ನಂತರ ನಡೆಸಲಾಗುತ್ತದೆ. ಇತರ 10 ಕೇಂದ್ರಗಳಿಗೆ ಸಂಬಂಧಿಸಿದಂತೆ, ಹತ್ತಿರದ ಸರ್ಕಾರಿ ವೈದ್ಯಕೀಯ ಅಧಿಕಾರಿಯ ಸೇವೆಗಳನ್ನು ಆಯುಷ್ ಆರೋಗ್ಯ ಸೌಲಭ್ಯದೊಂದಿಗೆ ಬಳಸಿಕೊಂಡು ಬಳಕೆದಾರರ ಶುಲ್ಕಗಳ ಮೂಲಕ ಇವುಗಳಿಗೆ ಹಣ ಒದಗಿಸಬಹುದು ಎಂದು ಪ್ರಸ್ತಾಪಿಸಲಾಗಿದೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆಯಡಿ ಈ ಕೆಳಕಂಡ 10 ಯೋಗ ಮತ್ತು ಪುಕೃತಿ ಚಿಕಿತ್ಸಾ ಕೇಂದ್ರಗಳನ್ನು (ಸದರಿ ಕೇಂದ್ರಗಳಿಗೆ ಅವಶ್ಯವಾಗುವ ಅನುದಾನಕ್ಕೆ ಸಂಬಂಧಿಸಿದಂತೆ) ರಾಜ್ಯ ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ಕೋರಬಾರದೆಂಬ ಷರತ್ತುಗಳಿಗೊಳಪಟ್ಟು ತೆರೆಯಲು ಅನುಮತಿ ನೀಡಿ ಆದೇಶಿಸಿದೆ.
ಯಾವ ಜಿಲ್ಲೆಯ ಯಾವ ತಾಲ್ಲೂಕಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಓಪನ್ ಗೊತ್ತಾ?
- ಬೆಳಗಾವಿ- ನಿಪ್ಪಾಣಿ
- ಬೆಳಗಾವಿ- ಬೈಲಹೊಂಗಲ
- ಬಾಗಲಕೋಟೆ- ಬಾದಾಮಿ
- ಬಾಗಲಕೋಟೆ – ಮುಧೋಳ
- ಗದಗ- ಗಜೇಂದ್ರಗಡ
- ಕೊಪ್ಪಳ- ಕೂಕನೂರು
- ಹಾವೇರಿ – ರಾಣೆಬೆನ್ನೂರು
- ವಿಜಯಪುರ- ಬಸವನ ಬಾಗೇವಾಡಿ
- ಬೆಂಗಳೂರು ಗ್ರಾಮಾಂತ- ದೇವನಹಳ್ಳಿ
- ಮೈಸೂರು – ಹೆಚ್.ಡಿ ಕೋಟೆ
ಇತರೆ 10 ಕೇಂದ್ರಗಳಿಗೆ ಸಂಬಂಧಿಸಿದಂತೆ ಇನ್ನೊಂದು ಪ್ರತ್ಯೇಕವಾಗಿ ಆದೇಶ ಹೊರಡಿಸಲಾಗುವುದು.
ಈ ಆದೇಶವನ್ನು ಆರ್ಥಿಕ ಇಲಾಖೆಯು ಟಿಪ್ಪಣಿ ಸಂಖ್ಯೆ:ಆಇ 321 ವೆಚ್ಚ-5/2025, ದಿನಾಂಕ:01.09.2025ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
BREAKING: ನಾವು ಜಾತಿಗಣತಿ ಸಮೀಕ್ಷೆಯನ್ನು ಮುಂದೂಡಲ್ಲ: ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ
ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ