Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪಾಕಿಸ್ತಾನದಲ್ಲಿ ಹಳಿತಪ್ಪಿದ ತೇಜ್ ಗಮ್ ಎಕ್ಸ್ ಪ್ರೆಸ್ ರೈಲು: 25ಕ್ಕೂ ಹೆಚ್ಚು ಜನರಿಗೆ ಗಾಯ

25/03/2026 6:00 PM

BREAKING : ಸಹಾಯಕ್ಕಾಗಿ ಭಾರತಕ್ಕೆ ಧನ್ಯವಾದ ಹೇಳಿದ ‘ಇರಾನ್’, ಬಳಿಕ ಸದ್ದಿಲ್ಲದೆ ಪೋಸ್ಟ್ ಡಿಲೀಟ್!

25/03/2026 5:59 PM

BREAKING: ‘ಹೋಟೆಲ್ ಬಿಲ್’ಗಳಲ್ಲಿ ‘ಗ್ಯಾಸ್ ಚಾರ್ಜ್’ ವಸೂಲಿ ಮಾಡುವಂತಿಲ್ಲ: ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ

25/03/2026 5:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನತೆಗೆ ಗುಡ್‌ನ್ಯೂಸ್‌ : ಯುಗಾದಿ ಹಬ್ಬಕ್ಕೆ ಸಿಗಲಿದೆ `ಇಂದಿರಾ ಕಿಟ್’.!
KARNATAKA

ರಾಜ್ಯದ ಜನತೆಗೆ ಗುಡ್‌ನ್ಯೂಸ್‌ : ಯುಗಾದಿ ಹಬ್ಬಕ್ಕೆ ಸಿಗಲಿದೆ `ಇಂದಿರಾ ಕಿಟ್’.!

By kannadanewsnow5710/01/2026 5:25 AM

ರಾಮನಗರ: ಇಂದಿರಾ ಕಿಟ್ ಸೌಲಭ್ಯ ಮುಂದಿನ ಯುಗಾದಿ ಹಬ್ಬದ ವೇಳೆಗೆ ಜನರಿಗೆ ಸಿಗಲಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ  ಯಲುವಳ್ಳಿ ಎನ್. ರಮೇಶ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ “ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ”ಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಒಬ್ಬ ವ್ಯಕ್ತಿಗೆ 10 ಕೆ.ಜಿ. ಅಕ್ಕಿಯನ್ನು ಕೊಟ್ಟರೆ ಒಂದು ಕುಟುಂಬಕ್ಕೆ 30 ರಿಂದ 40 ಕೆ.ಜಿ. ಅಕ್ಕಿ ಮಾಸಿಕ ಸಿಗುವುದರಿಂದ ಅಷ್ಟು ಪ್ರಮಾಣದ ಅಕ್ಕಿಯನ್ನು ಜನರು ಸದುಪಯೋಗಪಡಿಸಿಕೊಳ್ಳುತ್ತಿಲ್ಲ, ದುರ್ಬಳಕೆಗೆ ಅವಕಾಶವಾಗುತ್ತದೆ.

ಕೆಲವರು ಅವಶ್ಯಕತೆಗಿಂತ ಹೆಚ್ಚಿಗೆ ಅನ್ನ ಮಾಡಿ ನಾಯಿಗಳಿಗೆ ಅನ್ನ ಹಾಕುವುದನ್ನು ನನ್ನ ಸ್ವಗ್ರಾಮದಲ್ಲೆ ಗಮನಿಸಿದ್ದೇನೆ. ಈ ಬಗ್ಗೆ ದೃಶ್ಯಾವಳಿಗಳನ್ನು ಮಾಡಿಕೊಂಡು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಗಮನಕ್ಕೆ ನಾನು ತಂದಿದ್ದೆ ಇದನ್ನು ಪರಿಗಣಿಸಿದ ಸಮಿತಿಯು ಈ ಮಾಹೆಯಿಂದ ಇಂದಿರಾ ಕಿಟ್ ಸೌಲಭ್ಯ ಜನರಿಗೆ ನೀಡಲು ನಿರ್ಧಾರ ಮಾಡಲಾಗಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಬರುವ ಯುಗಾದಿಯಿಂದ ಇಂದಿರಾ ಕಿಟ್ ನ್ನು ಸಾರ್ವಜನಿಕರಿಗೆ ವಿತರಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಸಮಿತಿಯು ನಿರ್ಧರಿಸಿದೆ ಅದರಂತೆ ಯುಗಾದಿಗೆ ಈ ಸೌಲಭ್ಯ ಸಿಗಲಿದೆ ಎಂದು ಭರವಸೆ ನೀಡಿದರು.

ಗ್ಯಾರಂಟಿ ಯೋಜನೆಗಳು ಶೇ. 100 ರಷ್ಟು ಪ್ರಗತಿಯನ್ನು ಸಾಧಿಸಬೇಕು. ಜಿಲ್ಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಉತ್ತಮ ಪ್ರಗತಿ ಸಾಧಿಸಿದ್ದಾರೆ. ಕೆಲವು ಯೋಜನೆಗಳಲ್ಲಿ ಪ್ರಗತಿ ಸಾಧಿಸಿದ್ದರೂ ಸಹ ಜನರಿಗೆ ಅದರ ಅರಿವಿಗೆ ಬಾರದಿರುವುದು. ವಿಷಾದನೀಯ. ಇದಕ್ಕೆ ಉತ್ತಮ ನಿದರ್ಶನವೆಂದರೆ ಗೃಹಲಕ್ಷ್ಮಿ ಯೋಜನೆಯ ಆರಂಭದಿಂದ ಕೆಲವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿದೆ. ಆದರೆ ಸದರಿ ಬ್ಯಾಂಕಿನಲ್ಲಿ ಆ ಫಲಾನುಭವಿಗಳು ಸಾಲ ಪಡೆದಿರುವುದರಿಂದ ಸದರಿ ಸಾಲಕ್ಕೆ ಹಣವು ಜಮೆ ಆಗಿದೆ. ಇದು ಅವರ ಅರಿವಿಗೆ ಬಾರದೆ ಹಣ ಬಂದಿಲ್ಲ ಎಂದು ಅಪಪ್ರಚಾರ ಮಾಡಿರುವುದು ಕಂಡುಬಂದಿದೆ. ಅಂತಹ  ಇನ್ನಿತರ ಪ್ರಕರಣಗಳನ್ನು ಗುರ್ತಿಸಿ ಫಲಾನುಭವಿಗಳಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಉತ್ತಮವಾಗಿ ಜಾರಿಯಾಗಿ ಜನರ ಮನಸೊರೆಗೊಂಡಿವೆ. ಈ ಎಲ್ಲ ಉಪಕ್ರಮಗಳನ್ನು ಹೊರತು ಪಡಿಸಿ ಯಾವುದೇ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅರ್ಹ ಫಲಾನುಭವಿಯು ವಂಚಿತರಾಗಿದ್ದಲ್ಲಿ ಅಂತಹವರನ್ನು ಈ ಯೋಜನೆಗಳ ವ್ಯಾಪ್ತಿಗೆ ತರಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

ಈ ವರೆಗೆ ಜಿಲ್ಲೆಯ ಯಾವುದೇ ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಯೋಜನೆಗಳನ್ನು ಪಡೆದುಕೊಳ್ಳುವಂತೆ ಗ್ಯಾರಂಟಿ ಯೋಜನೆ ಜಾರಿಯ ಅಧ್ಯಕ್ಷರು ಈ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ವೈ.ನವೀನ್  ಭಟ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರುಗಳಾದ ಆದಿರೆಡ್ಡಿ, ರಾಮಕೃಷ್ಣಪ್ಪ, ಸದಸ್ಯರಾದ ಜಯರಾಮ್, ನಾರಾಯಣಸ್ವಾಮಿ, ನಿರ್ಮಲ ಗಂಗಾಧರ್, ಎಂ.ಕೆ ವೇಣುಗೋಪಾಲ್, ರಾಧಾಕೃಷ್ಣ, ಹೆಚ್.ಎಂ. ಮುನಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಇಂದಿರಾ ಕಿಟ್‌ನಲ್ಲಿ ಪ್ರಸ್ತಾಪಿಸಲಾದ ವಸ್ತುಗಳು:

1 ರಿಂದ 2 ಸದಸ್ಯರಿರುವ ಕುಟುಂಬಗಳು:

0.5 ಕೆಜಿ ತೊಗರಿ ಬೇಳೆ, 0.5 ಲೀಟರ್ ಅಡುಗೆ ಎಣ್ಣೆ, 0.5 ಕೆಜಿ ಸಕ್ಕರೆ, 0.5 ಕೆಜಿ ಉಪ್ಪು, ಹೆಚ್ಚುವರಿ 0.25 ಕೆಜಿ ತೊಗರಿ ಬೇಳೆ

3 ರಿಂದ 4 ಸದಸ್ಯರಿರುವ ಕುಟುಂಬಗಳು:

1 ಕೆಜಿ ತೊಗರಿ ಬೇಳೆ, 1 ಲೀಟರ್ ಅಡುಗೆ ಎಣ್ಣೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು, ಹೆಚ್ಚುವರಿ 0.5 ಕೆಜಿ ತೊಗರಿ ಬೇಳೆ

5 ಅಥವಾ ಹೆಚ್ಚಿನ ಸದಸ್ಯರಿರುವ ಕುಟುಂಬಗಳು:

1.5 ಕೆಜಿ ತೊಗರಿ ಬೇಳೆ, 1.5 ಲೀಟರ್ ಅಡುಗೆ ಎಣ್ಣೆ, 1.5 ಕೆಜಿ ಸಕ್ಕರೆ, 1.5 ಕೆಜಿ ಉಪ್ಪು, ಹೆಚ್ಚುವರಿ 0.75 ಕೆಜಿ ತೊಗರಿ ಬೇಳೆ

Good news for the people of the state: 'Indira Kit' will be available for the Ugadi festival!
Share. Facebook Twitter LinkedIn WhatsApp Email

Related Posts

ವಿಧಾನಸಭೆಯಲ್ಲಿ ‘ಸಿಎಂ’ ಚರ್ಚೆಯ ಕಚಗುಳಿ: ಅಶೋಕ್ ಕಾಲೆಳೆದ ಸಿದ್ದರಾಮಯ್ಯ, ಡಿಕೆಶಿ ಹೆಸರಿನ ಬಗ್ಗೆ ಚಾಣಾಕ್ಷ ಮೌನ!

25/03/2026 5:39 PM2 Mins Read

ಬೆಂಗಳೂರು ಮಂದಿಗೆ ಕೈಗೆಟುಕುವ ದರದಲ್ಲಿ ಆಹಾತ ವಿತರಿಸುವ ‘ಟೋಯಿಂಗ್‌’ ಆಪ್‌ ಬಿಡುಗಡೆ

25/03/2026 4:50 PM2 Mins Read

ಬೆಂಗಳೂರಿನ ಸರ್ವಜ್ಞನಗರದಲ್ಲಿ ‘ಹಸಿರು ಕ್ರಾಂತಿ’: ‘ಸಚಿವ ಕೆ.ಜೆ. ಜಾರ್ಜ್’ ಅವರ ದೂರದೃಷ್ಟಿಯ ಫಲವಿದು!

25/03/2026 4:43 PM2 Mins Read
Recent News

BREAKING: ಪಾಕಿಸ್ತಾನದಲ್ಲಿ ಹಳಿತಪ್ಪಿದ ತೇಜ್ ಗಮ್ ಎಕ್ಸ್ ಪ್ರೆಸ್ ರೈಲು: 25ಕ್ಕೂ ಹೆಚ್ಚು ಜನರಿಗೆ ಗಾಯ

25/03/2026 6:00 PM

BREAKING : ಸಹಾಯಕ್ಕಾಗಿ ಭಾರತಕ್ಕೆ ಧನ್ಯವಾದ ಹೇಳಿದ ‘ಇರಾನ್’, ಬಳಿಕ ಸದ್ದಿಲ್ಲದೆ ಪೋಸ್ಟ್ ಡಿಲೀಟ್!

25/03/2026 5:59 PM

BREAKING: ‘ಹೋಟೆಲ್ ಬಿಲ್’ಗಳಲ್ಲಿ ‘ಗ್ಯಾಸ್ ಚಾರ್ಜ್’ ವಸೂಲಿ ಮಾಡುವಂತಿಲ್ಲ: ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ

25/03/2026 5:53 PM

BREAKING : ಪಶ್ಚಿಮ ಏಷ್ಯಾ ಉದ್ವಿಗ್ನತೆ ಕುರಿತು ಸರ್ವಪಕ್ಷ ಸಭೆ ಆರಂಭ ; ಟಿಎಂಸಿ ಬಹಿಷ್ಕಾರ, ರಾಹುಲ್ ಗಾಂಧಿ ಗೈರು

25/03/2026 5:49 PM
State News
KARNATAKA

ವಿಧಾನಸಭೆಯಲ್ಲಿ ‘ಸಿಎಂ’ ಚರ್ಚೆಯ ಕಚಗುಳಿ: ಅಶೋಕ್ ಕಾಲೆಳೆದ ಸಿದ್ದರಾಮಯ್ಯ, ಡಿಕೆಶಿ ಹೆಸರಿನ ಬಗ್ಗೆ ಚಾಣಾಕ್ಷ ಮೌನ!

By kannadanewsnow0925/03/2026 5:39 PM KARNATAKA 2 Mins Read

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಇಂದಿನ ಕಲಾಪವು ಕೇವಲ ಗಂಭೀರ ಚರ್ಚೆಗಳಿಗೆ ಮಾತ್ರವಲ್ಲದೆ, ರಾಜಕೀಯ ಕಾಲೆಳೆಯುವಿಕೆ, ಭವಿಷ್ಯದ ಮುಖ್ಯಮಂತ್ರಿ ಅಭ್ಯರ್ಥಿಗಳ ಕುರಿತಾದ…

ಬೆಂಗಳೂರು ಮಂದಿಗೆ ಕೈಗೆಟುಕುವ ದರದಲ್ಲಿ ಆಹಾತ ವಿತರಿಸುವ ‘ಟೋಯಿಂಗ್‌’ ಆಪ್‌ ಬಿಡುಗಡೆ

25/03/2026 4:50 PM

ಬೆಂಗಳೂರಿನ ಸರ್ವಜ್ಞನಗರದಲ್ಲಿ ‘ಹಸಿರು ಕ್ರಾಂತಿ’: ‘ಸಚಿವ ಕೆ.ಜೆ. ಜಾರ್ಜ್’ ಅವರ ದೂರದೃಷ್ಟಿಯ ಫಲವಿದು!

25/03/2026 4:43 PM

ರಾಜ್ಯದಲ್ಲಿ ಖಾಯಂ ನಿರೀಕ್ಷೆಯಲ್ಲಿದ್ದ ಹೊರಗುತ್ತಿಗೆ ನೌಕರರಿಗೆ ಬಿಗ್ ಶಾಕ್: ಸಾಧ್ಯವಿಲ್ಲ ಎಂದ ಸಿಎಂ ಸಿದ್ಧರಾಮಯ್ಯ

25/03/2026 4:35 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.