ಬೆಂಗಳೂರು: ರಾಜ್ಯ ಸರ್ಕಾರದಿಂದ ನಿಗದಿತ ಕಾಲಮಿತಿಯೊಳಗೆ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಸಿದ್ರೆ ಶೇ.5ರಷ್ಟು ರಿಯಾಯಿತಿ ನೀಡಿವುದಾಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ಜನತೆಗೆ ಗುಡ್ ನ್ಯೂಸ್ ನೀಡಲಾಗಿದೆ.
ಹೌದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಈ ರಿಯಾಯಿತಿ ಘೋಷಣೆ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆಯನ್ನು ಏಕ ಕಾಲಕ್ಕೆ ಪಾವತಿಸಿ ಶೇ.5ರಷ್ಟು ರಿಯಾಯಿತಿಯನ್ನು ಪಡೆಯಿರಿ ಅಂತ ತಿಳಿಸಿದೆ.
ಆರ್ಥಿಕ ವರ್ಷದ ಪ್ರಾರಂಭದ ಮೂರು ತಿಂಗಳು ಅಂದ್ರೆ ಏಪ್ರಿಲ್ ನಿಂದ ಜೂನ್ ಅಂತ್ಯ ಅಂದರೇ ದಿನಾಂಕ 0-06-2024ರ ಒಳಗಾಗಿ ತೆರಿಗೆ ಪಾವತಿಸಿ, ಶೇ.5ರಷ್ಟು ರಿಯಾಯಿತಿ ಪಡೆಯಿರಿ ಅಂತ ಹೇಳಿದೆ.
ಕಾಲಮಿತಿಯೊಳಗೆ ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಸಿ, ಶೇ. 5ರಷ್ಟು ರಿಯಾಯಿತಿ ಪಡೆಯಿರಿ.#rdpr #ruraldevelopment #panchayatraj #Propertytax #GramPanchayat #discount #BSK #RDWSD @CMofKarnataka @rdwsd_gok @readingkafka @PriyankKharge @eGovernanceRDPR @mopr_goi @MoRD_GoI @CommrMGNREGSK pic.twitter.com/KUdvgMGAjS
— Commissioner Panchayat Raj (@CommrPR) May 13, 2024
ಶಿವಮೊಗ್ಗ ಜಿಲ್ಲೆಯ ರೈತರೇ ಗಮನಿಸಿ: ಬರಪರಿಹಾರ ಬಂದಿಲ್ಲ ಅಂದ್ರೆ ‘ಈ ನಂಬರ್’ಗೆ ಕರೆ ಮಾಡಿ
BREAKING: ಕೆ.ಆರ್ ನಗರ ‘ಸಂತ್ರಸ್ತೆ ಕಿಡ್ನ್ಯಾಪ್’ ಕೇಸ್: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ