Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಿಹಾರ ರಾಜಕಾರಣದಲ್ಲಿ ಹೊಸ ಯುಗ: ಏಪ್ರಿಲ್ 10ರಂದು ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ!

06/04/2026 9:00 AM

ಮನೆ ಮಂದಿಯೆಲ್ಲಾ ಬೇರೆ ಬೇರೆ `ಮೊಬೈಲ್ ರೀಚಾರ್ಜ್’ ಮಾಡಿಸೋದು ಬಿಡಿ: ಈ ಫ್ಯಾಮಿಲಿ ಪ್ಲಾನ್‌ ನಿಂದ ತಿಂಗಳಿಗೆ ಉಳಿಸಿ ಸಾವಿರಾರು ರೂಪಾಯಿ!

06/04/2026 8:59 AM

GOOD NEWS : ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ಕ್ಕೆ ಅವಕಾಶ.!

06/04/2026 8:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿಗೆ `ಕಾಲಮಿತಿ’ ನಿಗದಿಪಡಿಸಿ ಸರ್ಕಾರ ಆದೇಶ.!
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿಗೆ `ಕಾಲಮಿತಿ’ ನಿಗದಿಪಡಿಸಿ ಸರ್ಕಾರ ಆದೇಶ.!

By kannadanewsnow5709/03/2026 6:09 AM

ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಅಧೀನ ಸಂಸ್ಥೆಗಳ ಸೇವೆ ಮತ್ತು ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರು / ಮನವಿಗಳನ್ನು ತ್ವರಿತ/ಗುಣಾತ್ಮಕ ವಿಲೇವಾರಿಗೆ ಕಾಲಮಿತಿಯನ್ನು ನಿಗಧಿಪಡಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?

ಮೇಲೆ ಓದಲಾದ ಕ್ರಮಾಂಕ (1)ರಲ್ಲಿನ ಸರ್ಕಾರದ ಆದೇಶದಲ್ಲಿ, ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ, ಏಕೀಕೃತ ಸಾರ್ವಜನಿಕ ದೂರು ನಿವಾರಣಾ ತಂತ್ರಾಂಶ (Integrated Public Grievances Redressal System) ಅನುಷ್ಠಾನಗೊಳಿಸಲಾಗಿದ್ದು, ಸದರಿ ಆದೇಶದಲ್ಲಿ ಸಾರ್ವಜನಿಕ ಕುಂದುಕೊರತೆಗಳಿಗೆ ಸಂಬಂಧಿಸಿದಂತ ಸ್ವೀಕೃತವಾಗುವ ಮನವಿಗಳನ್ನು ವಿಲೇವಾರಿಗೊಳಿಸಲು ಮೂರು ಹಂತದಲ್ಲಿ ಅನುಷ್ಠಾನಾಧಿಕಾರಿಗಳನ್ನು ಈ. ಕೆಳಕಂಡಂತೆ ನೇಮಿಸಲಾಗಿದೆ. ಸದರಿ ಅನುಷ್ಠಾನಾಧಿಕಾರಿಗಳು ಸರ್ಕಾರವು ನಿಗಧಿಪಡಿಸಿರುವ ಅವಧಿಯೊಳಗೆ ದೂರು/ಮನವಿಗಳನ್ನು ವಿಲೇವಾರಿಗೊಳಿಸಲು ಆದೇಶಿಸಲಾಗಿದೆ.

  1. Last Mile Functionaries- LMF (Caseworker) 07 ದಿನಗಳು
  2. Level-2 Officer – L2 (Gazetted Officer) 07 ದಿನಗಳು
  3. Level-1 Officer- L3 (Group-A Officer) 07 ದಿನಗಳು

ಮೇಲೆ ಓದಲಾದ ಕ್ರಮಾಂಕ (2)ರಲ್ಲಿನ ಕೇಂದ್ರ ಸರ್ಕಾರದ ಆದೇಶದಲ್ಲಿ, ಸಾರ್ವಜನಿಕ ಕುಂದುಕೊರತೆ/ದೂರುಗಳನ್ನು ವಿಲೇವಾರಿಗೊಳಿಸಲು 30 ದಿನಗಳ ಕಾಲಮಿತಿಯನ್ನು ನಿಗಧಿಗೊಳಿಸಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸರ್ಕಾರವು ಸಾರ್ವಜನಿಕ ದೂರುಗಳ ನಿರ್ವಹಣೆಗೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ, 30 ದಿನಗಳ ಕಾಲಮಿತಿಯನ್ನು ಪಾಲನೆ ಮಾಡಲಾಗುತ್ತಿದೆ.

ಮೇಲೆ ಓದಲಾದ ಕ್ರಮಾಂಕ (3)ರಲ್ಲಿನ ಕೇಂದ್ರ ಸರ್ಕಾರದ ಆದೇಶದಲ್ಲಿ CPGRAMSನಲ್ಲಿ ಸ್ವೀಕೃತವಾಗುವ ಸಾರ್ವಜನಿಕ ದೂರು/ಕುಂದುಕೊರತೆಗಳು ವಿಲೇವಾರಿಗೆ ಸಂಬಂಧಿಸಿದಂತೆ, 21 ದಿನಗಳ ಕಾಲಮಿತಿಯನ್ನು ನಿಗಧಿಗೊಳಿಸಿದೆ.

ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಸ್ವೀಕೃತವಾಗುವ ಸಾರ್ವಜನಿಕ ಕುಂದುಕೊರತೆ ಮತ್ತು ದೂರುಗಳನ್ನು ವಿಲೇವಾರಿಗೊಳಿಸಲು 21 ದಿನಗಳ ಕಾಲಮಿತಿಯನ್ನು ನಿಗಧಿಪಡಿಸಲು ಸರ್ಕಾರವು ನಿರ್ಧರಿಸಿದ್ದು, ಅದರಂತೆ, ಈ ಕೆಳಕಂಡ ಆದೇಶ.

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ವಯ ರಾಜ್ಯದ ವಿವಿಧ ಇಲಾಖೆಗಳು, ಅಧೀನ ಇಲಾಖೆಗಳು, ಸ್ನಾಯತ್ತ ಸಂಸ್ಥೆಗಳು, ನಿಗಮಗಳು, ಮಂಡಳಿಗಳು, ಪ್ರಾಧಿಕಾರಗಳು, ಅನುದಾನಿತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಸಾರ್ವಜನಿಕ ಉದ್ದಿಮೆಗಳು ಸೇರಿದಂತೆ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ ಹಾಗೂ ಅರೆಸರ್ಕಾರಿ ಸಂಸ್ಥೆಗಳಲ್ಲಿನ ಸೇವೆಗಳು ಹಾಗೂ ಯೋಜನೆಗಳಿಗೆ ಸಂಬಂಧಿಸಿದಂತೆ IPGRS ಹಾಗೂ CPGRAMSನಲ್ಲಿ ಸ್ವೀಕೃತವಾಗುವ ಸಾರ್ವಜನಿಕ ಕುಂದುಕೊರತೆಗಳನ್ನು ಹಾಗೂ ಮನವಿಗಳನ್ನು ತ್ವರಿತವಾಗಿ, ಗುಣಾತ್ಮಕವಾಗಿ ಹಾಗೂ ನಾಗರೀಕರಿಗೆ ತೃಪ್ತಿಕರವಾಗಿ ಆಯಾ ವಿಷಯಗಳ ಬಗೆಗಿನ ಕಾಯ್ದೆ, ನಿಯಮ ಹಾಗೂ ಸರ್ಕಾರಿ ಆದೇಶೆಗಳನುಸಾರ ಪರಿಣಾಮಕಾರಿಯಾಗಿ ವಿಲೇಗೊಳಿಸಲು ಈ ಕೆಳಕಂಡಂತೆ 21 ದಿನಗಳ ಕಾಲಮಿತಿಯನ್ನು ನಿಗದಿಗೊಳಿಸಿ ಆದೇಶಿಸಿದ. ಗರಿಷ್ಠ

  1. L1 ಹಂತದ ಕ್ಷೇತ್ರದ ಅನುಷ್ಟಾನಾಧಿಕಾರಿಗೆ – 07 ದಿನಗಳು
  2. L2 ಹಂತದ ಕ್ಷೇತ್ರದ ಅನುಷ್ಟಾನಾಧಿಕಾರಿಗೆ – 07 ದಿನಗಳು
  3. L3 ಹಂತದ ಕ್ಷೇತ್ರದ ಅನುಷ್ಠಾನಾಧಿಕಾರಿಗೆ – 07 ದಿನಗಳು

 ಜನಸ್ಪಂದನ-ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯ (Integrated Public Grievance Redressal System – iPGRS) ಮ್ಯಾಪ್ ಆಗಿರುವ L1, L2 & L3 ಹಂತದ ಅಧಿಕಾರಿಗಳಿಗೆ ಮೇಲಿನಂತೆ ಕಾಲಾವಧಿಯನ್ನು ನಿಗದಿಪಡಿಸಲು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಇ-ಆಡಳಿತ ಕೇಂದ್ರ, ಇವರು ಅಗತ್ಯ ಕ್ರಮವಹಿಸುವುದು.

 ಜನಸ್ಪಂದನ-ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ತಂತ್ರಾಂಶದಲ್ಲಿ ದಾಖಲಾಗುವ ಎಲ್ಲಾ ಸಾರ್ವಜನಿಕ ಕುಂದುಕೊರತೆ/ಮನವಿಗಳನ್ನು ಹಾಗೂ CPGRAMSನಲ್ಲಿ ದಾಖಲಾಗಿ IPGRS ನಲ್ಲಿ ಬಿತ್ತರಿಸಲಾಗುವ ಎಲ್ಲಾ ಸಾರ್ವಜನಿಕ ಕುಂದುಕೊರತೆ/ಮನವಿಗಳನ್ನು ಗುಣಾತ್ಮಕವಾಗಿ ವಿಲೇ ಮಾಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಆಯಾ ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಯವರು ಹಾಗೂ ಇಲಾಖಾ ಮುಖ್ಯಸ್ಮರ ಜವಾಬ್ದಾರಿಯಾಗಿರುತ್ತದೆ.

Good news for the people of the state: Government orders setting a 'time limit' for the speedy disposal of public complaints!
Share. Facebook Twitter LinkedIn WhatsApp Email

Related Posts

GOOD NEWS : ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ಕ್ಕೆ ಅವಕಾಶ.!

06/04/2026 8:48 AM1 Min Read

BIG NEWS : ಏಪ್ರಿಲ್ 8 ಕ್ಕೆ `ಕರ್ನಾಟಕ ದ್ವಿತೀಯ PUC’ ಫಲಿತಾಂಶ ಪ್ರಕಟ |Karnataka PUC Result

06/04/2026 8:25 AM1 Min Read

BIG NEWS : `ಲೋಕ ಅದಾಲತ್ ತೀರ್ಪು’ ಪ್ರಶ್ನಾತೀತವಲ್ಲ : ಹೈಕೋರ್ಟ್ ಮಹತ್ವದ ಆದೇಶ

06/04/2026 7:44 AM1 Min Read
Recent News

ಬಿಹಾರ ರಾಜಕಾರಣದಲ್ಲಿ ಹೊಸ ಯುಗ: ಏಪ್ರಿಲ್ 10ರಂದು ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ!

06/04/2026 9:00 AM

ಮನೆ ಮಂದಿಯೆಲ್ಲಾ ಬೇರೆ ಬೇರೆ `ಮೊಬೈಲ್ ರೀಚಾರ್ಜ್’ ಮಾಡಿಸೋದು ಬಿಡಿ: ಈ ಫ್ಯಾಮಿಲಿ ಪ್ಲಾನ್‌ ನಿಂದ ತಿಂಗಳಿಗೆ ಉಳಿಸಿ ಸಾವಿರಾರು ರೂಪಾಯಿ!

06/04/2026 8:59 AM

GOOD NEWS : ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ಕ್ಕೆ ಅವಕಾಶ.!

06/04/2026 8:48 AM

ALERT : ಈ ಕೊಲೆಸ್ಟ್ರಾಲ್ ಔಷಧಿಯಿಂದ `ಕಿಡ್ನಿ’ ವೈಫಲ್ಯದ ಭೀತಿ : ಶಾಕಿಂಗ್ ಮಾಹಿತಿ ಬಹಿರಂಗ.!

06/04/2026 8:40 AM
State News
KARNATAKA

GOOD NEWS : ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ಕ್ಕೆ ಅವಕಾಶ.!

By kannadanewsnow5706/04/2026 8:48 AM KARNATAKA 1 Min Read

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಲು ಸಜ್ಜಾಗಿದೆ. ರಾಜ್ಯದಲ್ಲಿ ‘ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ’ಯನ್ನು…

BIG NEWS : ಏಪ್ರಿಲ್ 8 ಕ್ಕೆ `ಕರ್ನಾಟಕ ದ್ವಿತೀಯ PUC’ ಫಲಿತಾಂಶ ಪ್ರಕಟ |Karnataka PUC Result

06/04/2026 8:25 AM

BIG NEWS : `ಲೋಕ ಅದಾಲತ್ ತೀರ್ಪು’ ಪ್ರಶ್ನಾತೀತವಲ್ಲ : ಹೈಕೋರ್ಟ್ ಮಹತ್ವದ ಆದೇಶ

06/04/2026 7:44 AM

ನೀವು ಪ್ರತಿದಿನ 4 ಬೇವಿನ ಎಲೆಗಳನ್ನು ತಿಂದರೆ ಸಾಕು ಸಕಲ ರೋಗಗಳೂ ಮಟಾಷ್!

06/04/2026 7:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.