ಬೆಂಗಳೂರು : ರಾಜ್ಯದ ಜನತೆಯ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ Spinal Deformities ಸಮಸ್ಯೆಗಳ ಚಿಕಿತ್ಸಾತ್ಮಕ ಸೇವೆಗಳನ್ನು ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯ Unspecified Surgical Package ಅಡಿ ಸೇರ್ಪಡೆಗೊಳಿಸಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಈ ಷರತ್ತುಬದ್ಧ ಚಿಕಿತ್ಸಾತ್ಮಕ ಸೇವೆಗಳನ್ನು ಒದಗಿಸಲು ಆದೇಶಿಸಲಾಗಿದೆ.
ಮೇಲೆ ಓದಲಾದ ಕ್ರಮಾಂಕ (1) ರ ಸರ್ಕಾರಿ ಆದೇಶದಲ್ಲಿ ರಾಜ್ಯದ ಜನರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಒದಗಿಸಲು ಸಂಯೋಜಿತ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: ಆಇ 856 ವೆಚ್ಚ-5/2018, ದಿನಾಂಕ: 17-01-2019 ರಲ್ಲಿ ನೀಡಿರುವ ಸಹಮತಿ ಮೇರೆಗೆ ಮೇಲೆ ಓದಲಾದ ಕ್ರಮಾಂಕ (2) ರ ಪತ್ರದಲ್ಲಿ ಆಯುಷ್ಠಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಗೆ ಯಾವುದೇ ಆರ್ಥಿಕ ಹೊಣೆ ಇಲ್ಲದಂತೆ 36 ಚಿಕಿತ್ಸಾ ವಿಧಾನಗಳನ್ನು ಸೇರಿ ಒಟ್ಟು 1658 ಚಿಕಿತ್ಸಾ ವಿಧಾನದಲ್ಲಿ Unspecified Surgical Package ಅನ್ನು ಸೇರಿಸಲಾಗಿರುತ್ತದೆ
ಚಿಕಿತ್ಸಾ ವಿಧಾನಗಳಿಗೆ ಅನುಮತಿ ನೀಡಲಾಗಿರುತ್ತದೆ. 2 : 36 (3AU1.00001) ថ
ಮೇಲೆ ಓದಲಾದ ಕ್ರಮಾಂಕ (3)ರ ಏಕ-ಕಡತದಲ್ಲಿ ಮಕ್ಕಳಲ್ಲಿ ಕಂಡು ಬರುವಂತಹ Spinal Deformities ಸಮಸ್ಯೆಗಳ ಚಿಕಿತ್ಸಾತ್ಮಕ ಸೇವೆಗಳಿಗಾಗಿ NHM-RBSK ಕಾರ್ಯಕ್ರಮದಡಿಯಲ್ಲಿ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ( SAST) ವತಿಯಲ್ಲಿ ಅವಕಾಶವಿಲ್ಲದೇ ಇರುವುದರಿಂದ, ಸದರಿ Spinal Deformities ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಚಿಕಿತ್ಸಾತ್ಮಕ ಸೇವೆಗಳನ್ನು Ab-Ark ಯೋಜನೆಯ Unspecified Surgical Package ಅಡಿಯಲ್ಲಿ ಅಳವಡಿಸಿಕೊಂಡು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಕಾರ್ಯಗತಗೊಳಿಸಲು ಅನುಮೋದನೆ ಕೋರಿರುತ್ತಾರೆ.
Spinal Deformities ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಚಿಕಿತ್ಸಾತ್ಮಕ ಸೇವೆಗಳನ್ನು Ab-ArK ಯೋಜನೆಯಡಿ ಸೇರ್ಪಡೆ ಮಾಡಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 530 ಸಿಜಿಇ 2024 , №: 21.02.2025
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ರಾಜ್ಯದ ಜನರಿಗೆ Spinal Deformities ಚಿಕಿತ್ಸಾತ್ಮಕ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ ಯೋಜನೆಯ unspecified surgical package Spinal Deformities (scoliosis, kyphosis, lordosis, etc) ಚಿಕಿತ್ಸಾ ಕಾರ್ಯವಿಧಾನಗಳನ್ನು ಸೇರ್ಪಡೆ ಮಾಡಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ ಮುಖಾಂತರ ಚಿಕಿತ್ಸಾತ್ಮಕ ಸೇವೆಗಳನ್ನು ಒದಗಿಸಲು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಅನುಮೋದನೆ ನೀಡಿ ಆದೇಶಿಸಿದೆ.
ಷರತ್ತುಗಳು:-
1) Spinal Deformities ಚಿಕಿತ್ಸಾ ವಿಧಾನಗಳಿಗೆ ತಜ್ಞ ವೈದ್ಯರ ಸಮಿತಿಯ ಶಿಫಾರಸ್ಸಿನಂತೆ ಪ್ರತಿ ಶಸ್ತ್ರ ಚಿಕಿತ್ಸೆಗೆ ರೂ.1.5 ಲಕ್ಷಗಳನ್ನು ನಿಗಧಿಪಡಿಸಲಾಗಿದ್ದ, ಸದರಿ ಪ್ಯಾಕೇಜ್ ಹಾಗೂ ದರದ ನಿಗದಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯುವುದು.
2)ಸದರಿ ಚಿಕಿತ್ಸಾ ವಿಧಾನಗಳಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ನೋಂದಾವಣೆ ಮಾಡಲು ನಿಗಧಿಪಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
3) ಪ್ರಸ್ತಾಪಿತ ಚಿಕಿತ್ಸಾ ವಿಧಾನಗಳಿಗೆ ಪ್ರಸ್ತುತ ವಿಧಾನಗಳಂತೆ ಸರ್ಕಾರಿ ಆಸ್ಪತ್ರೆಗಳಿಗೆ ಅನುಮೋದಿತ ಪ್ಯಾಕೇಜ್ ದರದ ಶೇ.75 ರಷ್ಟು ಪಾವತಿಸತಕ್ಕದ್ದು.
4) ಸರ್ಕಾರಿ ಆದೇಶ ಸಂಖ್ಯೆ: ಆಕುಕ 69 ಸಿಜಿಇ 2018, ದಿನಾಂಕ: 15.11.2018 ರಲ್ಲಿನ ಉಳಿದ ಎಲ್ಲಾ ಅಂಶಗಳು ಸದರಿ ಚಿಕಿತ್ಸಾ ವಿಧಾನಗಳಿಗೂ ಅನ್ವಯವಾಗುತ್ತವೆ.
5 ) ಪ್ರಸ್ತಾಪಿತ ಕಾರ್ಯವಿಧಾನದ ಅಂದಾಜು ವೆಚ್ಚವು ಸಮಂಜಸವಾಗಿರತಕ್ಕದ್ದು ಮತ್ತು ಅದರ ಒಟ್ಟಾರೆ ಆರ್ಥಿಕ ಪರಿಣಾಮಗಳನ್ನು ಬಜೆಟ್‌ನಲ್ಲಿ ಒದಗಿಸಲಾದ ಅನುದಾನದಿಂದ ಪೂರೈಸತಕ್ಕದ್ದು.
6) ಸದರಿ ಪ್ಯಾಕೇಜ್ ಅಡಿಯಲ್ಲಿ ಯಾವುದೇ ಚಿಕಿತ್ಸಾ ಕ್ರಮವನ್ನು ಸೇರಿಸುವ ಅಥವಾ ಅನುಮೋದನೆ ನೀಡಿರುವ ಚಿಕಿತ್ಸಾಕ್ರಮಗೆಳನ್ನು ಕೈಬಿಡುವ ಸಂದರ್ಭ ಉಂಟಾದಲ್ಲಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: FD 665 EXP-5 2024, ದಿನಾಂಕ: 25.11.2024 ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.