ಕರ್ನಾಟಕ ಪ.ಜಾತಿ ಮತ್ತು ಪ.ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದಡಿ 2025-26ನೇ ಸಾಲಿನಲ್ಲಿ ಪ.ಜಾತಿ ಮತ್ತು ಪ.ಪಂಗಡದ ಅಲೆಮಾರಿ ಜನಾಂಗದವರಿಗೆ ಸ್ವಯಂ ಉದ್ಯೋಗಕ್ಕೆ ನೇರ ಸಾಲ, ಮೈಕ್ರೋ ಕ್ರೆಡಿಟ್ ಪ್ರೇರಣಾ, ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆ, ಉದ್ಯಮಾಶೀಲತಾ ಯೋಜನೆಗಳು ಮತ್ತು ಇತರೆ ಉದ್ದೇಶಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದ್ದು, ಅರ್ಜಿಯನ್ನು ಸೇವಾ ಸಿಂಧು ಪೋರ್ಟ್ಲ್ ಮೂಲಕ ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬೆಂಗಳೂರು ಒನ್‌ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ಆನ್‌ಲೈನ್ ಮೂಲಕ http://sevasindhu.karnataka.gov.in ಈ ವೆಬ್‌ಲಿಂಕ್ ಮೂಲಕ ನೇರವಾಗಿ / ಗ್ರಾಮ ಓನ್, ಕರ್ನಾಟಕ ಓನ್, ಬೆಂಗಳೂರು ಓನ್ ಸೇವಾ ಕೇಂದ್ರಗಳಲ್ಲಿ ಸಲ್ಲಿಸಲು 10.09.2025 ಕೊನೆಯ ದಿನಾಂಕ ಆಗಿರುತ್ತದೆ.
ನಿಗಮಗಳ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು : ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಹಾಗೂ ಕಳೆದ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಉದ್ಯಮಶೀಲತಾ ಯೋಜನೆಯಡಿ ಕನಿಷ್ಟ 21 ವರ್ಷದಿಂದ ಗರಿಷ್ಟ 50 ವರ್ಷದೊಳಗಿನ ವಯೋಮಾನದವರಾಗಿರಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆಸರ್ಕಾರ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು.
ಮೈಕ್ರೋಕ್ರೆಡಿಟ್(ಪ್ರೇರಣಾ) ಯೋಜನೆ(ಮಹಿಳಾ ಸ್ವಸಹಾಯ ಗುಂಪುಗಳಿಗೆ) ಸದಸ್ಯರಿಗೆ ಕನಿಷ್ಟ 21 ರಿಂದ 60 ವರ್ಷ ವಯೋಮಾನದವರಾಗಿರಬೇಕು. ಈ ಯೋಜನೆಯಡಿ ಸೌಲಭ್ಯ ಪಡೆಯಲು ಕನಿಷ್ಟ 10 ಮಹಿಳೆಯರು ಸ್ವಸಹಾಯ ಗುಂಪಿನಲ್ಲಿ ಸದಸ್ಯರಿರತಕ್ಕದ್ದು, ಸಂಘದ ಸದಸ್ಯರು ಬಿ.ಪಿ.ಎಲ್ ಪಡಿತರ ಚೀಟಿ ಮತ್ತು ಆದಾರ್ ಕಾರ್ಡ್ ಹೊಂದಿರಬೇಕು. ಸ್ವಸಹಾಯ ಸಂಘಗಳು ಸಕ್ಷಮ ಪ್ರಾಧಿಕಾರಗಳಿಂದ ನೊಂದಣಿಯಾಗಿರಬೇಕು ಹಾಗೂ ಸಂಘದ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ಘಟಕವೆಚ್ಚ ರೂ.2.50 ಲಕ್ಷಗಳಾಗಿದ್ದು, ರೂ.1,50,000 ಸಹಾಯಧನ ಹಾಗೂ ರೂ.1,00,000 ಅಂಚಿನ ಸಾಲ ಆಗಿರುತ್ತದೆ.
ಉದ್ಯಮಶೀಲತಾ ಯೋಜನೆಯಡಿ ಸೌಲಭ್ಯ ಪಡೆಯಲು ಗ್ರಾಮಾಂತರ ಪ್ರದೇಶದಲ್ಲಿ ವಾರ್ಷಿಕ ಆದಾಯ ರೂ.1.50 ಲಕ್ಷ ಹಾಗೂ ನಗರ ಪ್ರದೇಶದಲ್ಲಿ ರೂ.2 ಲಕ್ಷ ಮೀರಬಾರದು. ಉದ್ಯಮಶೀ¯ತಾ ಅಭಿವೃದ್ದಿ ಯೋಜನೆಯಡಿ ಸ್ವಯಂ ಉದ್ಯೋಗಕ್ಕಾಗಿ ವ್ಯಾಪಾರ/ಇತರೆ ಉದ್ಯಮಗಳಿಗೆ ಬ್ಯಾಂಕ್‌ಸಾಲದ ಮೊತ್ತಕ್ಕೆ ಪೈಕಿ ಕನಿಷ್ಟ ಶೇ.70ರಷ್ಟು/ಗರಿಷ್ಟ ರೂ.1 ಲಕ್ಷ, ಘಟಕವೆಚ್ಚದ ಮೊತ್ತಕ್ಕೆ ಶೇ.70 ರಷ್ಟು/ಗರಿಷ್ಟ ರೂ.2 ಲಕ್ಷ ಸಹಾಯಧನ ಹಾಗೂ ಟ್ಯಾಕ್ಸಿ/ಸರಕುಸಾಗಾಣಿಕೆ ವಾಹನ ಉದ್ದೇಶಗಳಿಗೆ ಬ್ಯಾಂಕ್ ಸಾಲದ ಮೊತ್ತಕ್ಕೆ ಕನಿಷ್ಟ ಶೇ.75ರಷ್ಟು/ಗರಿಷ್ಟ ರೂ.4 ಲಕ್ಷ ಸಹಾಯಧನವನ್ನು ಮಂಜೂರು ಮಾಡಲಾಗುತ್ತದೆ.
ವಾಹನಗಳಿಗೆ ಸೌಲಭ್ಯ ಪಡೆಯಲು ಫಲಾಪೇಕ್ಷಿಗಳು ಡ್ರೆöÊವಿಂಗ್ ಲೈಸೆನ್ಸ್ ಹೊಂದಿರಬೇಕು, ಕೊಳವೆಬಾವಿ ಸೌಲಭ್ಯ ಪಡೆಯಲು ಕನಿಷ್ಟ 1 ಎಕರೆ ಖುಷ್ಕಿ ಜಮೀನು ಹೊಂದಿರಬೇಕು ಹೆಚ್ಚಿನ ಮಾಹಿತಿಯನ್ನು ಸಂಬAಧಿತ ನಿಗಮದ ಜಿಲ್ಲಾ ಕಚೇರಿ ಮತ್ತು ನಿಗಮಗಳ ವೆಬ್‌ಸೈಟ್‌ನಲ್ಲಿ / ಕಲ್ಯಾಣಮಿತ್ರ ಸಹಾಯವಾಣಿ 9482-300-400 ಸಂಪರ್ಕಿಸುವುದು.
ಅಗತ್ಯ ದಾಖಲಾತಿಗಳೊಂದಿಗೆ ಆಯಾ ನಿಗಮದ ವ್ಯಾಪ್ತಿಗೆ ಒಳಪಡುವ ಜನಾಂಗದವರು ನಿಗದಿತ ದಿನಾಂಕ ದೊಳಗೆ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಕೋರಿದೆ. ಅಂತಿಮ ದಿನಾಂಕದ ನಂತರ ಸಾಲದ ಅರ್ಜಿ ಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.