Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಸಿಲಿಂಡರ್ ಕೊರತೆಯಿಂದ ಆಟೋಮೊಬೈಲ್ ಇಂಡಸ್ಟ್ರಿ ಬಂದ್ : ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಉದ್ಯೋಗಿಗಳು!

22/03/2026 11:28 AM

​’ಅಮೆರಿಕ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ದೆಹಲಿ-ಮುಂಬೈ ಮೇಲೆ ಬಾಂಬ್ ಹಾಕುತ್ತೇವೆ’: ಮಾಜಿ ಪಾಕ್ ರಾಯಭಾರಿ ವಿಲಕ್ಷಣ ಹೇಳಿಕೆ

22/03/2026 11:15 AM

ಬೆಂಗಳೂರಲ್ಲಿ ಕಾರು ಡಿಫ್ಟ್ರಿಂಗ್ ಕೇಸ್ : ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಸೇರಿದ ಕಾರು ಸೀಜ್, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ!

22/03/2026 11:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನತೆಗೆ ಗುಡ್ ನ್ಯೂಸ್ : ಫೆಬ್ರವರಿ ವೇಳೆಗೆ `AC’ ಕೋರ್ಟಲ್ಲಿರುವ ಎಲ್ಲಾ ಕೇಸ್ ಇತ್ಯರ್ಥ
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಫೆಬ್ರವರಿ ವೇಳೆಗೆ `AC’ ಕೋರ್ಟಲ್ಲಿರುವ ಎಲ್ಲಾ ಕೇಸ್ ಇತ್ಯರ್ಥ

By kannadanewsnow5717/11/2024 7:58 AM

ಬೆಂಗಳೂರು : ಉಪ ವಿಭಾಗಾಧಿಕಾರಿ (ಎ.ಸಿ) ಕಂದಾಯ ನ್ಯಾಯಾಲಯದಲ್ಲಿ ಈ ಹಿಂದಿನ ಸರ್ಕಾರ ಉಳಿಸಿ ಹೋಗಿದ್ದ ಹಳೆಯ ತಕರಾರು ಅರ್ಜಿಗಳ ಪೈಕಿ ಶೇ.80ರಷ್ಟು ಪ್ರಕರಣಗಳನ್ನು ಕಳೆದ ಒಂದು ವರ್ಷದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಕಾರ್ಯ ವೈಖರಿಗೆ ಮೆಚ್ಚುಗೆ ಸೂಚಿಸಿದರು.

ಶನಿವಾರ ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ಮಾಸಿಕ ಸಭೆ ನಡೆಸಿ ಮಾತನಾಡಿದ ಅವರು, “ಎಸಿ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಸರ್ಕಾರ ನಿಗದಿಪಡಿಸಿರುವ ಕಾಲಮಿತಿ 6 ತಿಂಗಳು ಮಾತ್ರ. ಆದರೆ ಕಳೆದ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಕಂದಾಯ ನ್ಯಾಯಾಲಯಗಳ ಪ್ರಕರಣಗ ವಿಳಂಬದ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ. ಪರಿಣಾಮ ರೈತರು ತೀವ್ರ ತೊಂದರೆ ಒಳಗಾಗಬೇಕಾದ ಸ್ಥಿತಿ ಎದುರಾಗಿತ್ತು” ಎಂದು ವಿಷಾದಿಸಿದರು.

“ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಎಸಿ ನ್ಯಾಯಾಲಯದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ 59,339 ಪ್ರಕರಣಗಳು ವಿಲೇ ಆಗದೆ ಬಾಕಿ ಉಳಿದಿದ್ದವು. ಕಂದಾಯ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇ ಈ ರೀತಿಯಾಗಿ ಮಿತಿಮೀರಿ ವಿಳಂಭವಾಗುವುದರಿಂದ ಸಾಮಾನ್ಯ ಜನರಿಗೆ ತೀವ್ರ ತೊಂದರೆಯಾಗುತ್ತಿರುವುದನ್ನು ಗಮನಿಸಿದ ನಮ್ಮ ಸರ್ಕಾರ ಇದಕ್ಕೊಂದು ಪರಿಹಾರ ನೀಡಲು ತೀರ್ಮಾನಿಸಿತ್ತು. ಬಾಕಿ ಪ್ರಕರಣಗಳನ್ನು ವಿಲೇ ಮಾಡಬೇಕು ಎಂದು ಮಾನ್ಯ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಕಳೆದ ಒಂದು ವರ್ಷದಲ್ಲಿ ಬಾಕಿ ಪ್ರಕರಣಗಳ ವಿಲೇವಾರಿಯ್ನು ಅಭಿಯಾನ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ” ಎಂದರು

ಎಸಿ ನ್ಯಾಯಾಲಯಗಳಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಬಾಕಿ ಇದ್ದ 59,339 ಪ್ರಕರಣಗಳ ಪೈಕಿ ಕಳೆದ ಒಂದು ವರ್ಷದಲ್ಲಿ 44,545 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಹಾಲಿ ಬಾಕಿಯನ್ನು 14,794 ಕ್ಕೆ ಇಳಿಸಲಾಗಿದ್ದು, ಶೇ.80ಕ್ಕೂ ಹೆಚ್ಚು ಪ್ರಗತಿ ಸಾಧಿಸಲಾಗಿದೆ” ಎಂದು ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದರು.

“1 ರಿಂದ 5ವರ್ಷಗಳ ಅವಧಿಯಲ್ಲಿ ಬಾಕಿ ಉಳಿದಿದ್ದ 26,551 ಪ್ರಕರಣಗಳ ಪೈಕಿ 10,504 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಇನ್ನೂ 5 ವರ್ಷಕ್ಕೂ ಮೇಲ್ಪಟ್ಟ 32,787 ಪ್ರಕರಣಗಳನ್ನು ಈ ಹಿಂದಿನ ಸರ್ಕಾರ ಬಾಕಿ ಉಳಿಸಿಹೋಗಿತ್ತು. ಇದು ಆಡಳಿತ ಯಂತ್ರ ವೈಫಲ್ಯವಲ್ಲದೆ ಮತ್ತೇನು ಅಲ್ಲ. ಆದರೆ, ಈ ಪ್ರಕರಣಗಳನ್ನೂ ಕಳೆದ ಇಂದು ವರ್ಷದ ಅವಧಿಯಲ್ಲಿ 28,497 ಪ್ರಕರಣಗಳಿಗೆ ಮುಕ್ತಿ ನೀಡಲಾಗಿದೆ. ಕೇವಲ 4290 ಪ್ರಕರಣಗಳನ್ನು ಮಾತ್ರ ಉಳಿಸಲಾಗಿದೆ” ಎಂದು ಪ್ರಶಂಸಿಸಿದರು.

ಎಸಿ ಕಂದಾಯ ನ್ಯಾಯಾಲಯಗಳಲ್ಲಿನ ಪ್ರಕರಣಗಳ ಇತ್ಯರ್ಥಕ್ಕಾಗಿಯೇ ಸರ್ಕಾರ 18 ಜನ ವಿಶೇಷ ಉಪ ವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಕರಾರು ಅರ್ಜಿಗಳ ವಿಲೇವಾರಿಯನ್ನು ಎಲ್ಲಾ ಅಧಿಕಾರಿಗಳೂ ಇದೇ ವೇಗದಲ್ಲಿ ಮುಂದುವರೆಸಿದರೆ ಮುಂದಿನ ಜನವರಿ ಅಥವಾ ಫೆಬ್ರವರಿಯೊಳಗಾಗಿ ಎಲ್ಲಾ ಬಾಕಿ ಪ್ರಕರಣಗಳೂ ಇತ್ಯರ್ಥವಾಗಲಿದೆ. ಅಲ್ಲದೆ, ಉಪ ವಿಭಾಗಾಧಿಕಾರಿಗಳು ವಾರಕ್ಕೆ ನಾಲ್ಕು ಮತ್ತು ವಿಶೇಷ ಉಪ ವಿಭಾಗಾಧಿಕಾರಿಗಳು ಎರಡು ಪ್ರಕರಣವನ್ನು ವಿಲೇಗೊಳಿಸಬೇಕು” ಎಂದು ಅವರು ತಿಳಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಉಪಸ್ಥಿತರಿದ್ದರು.

Good news for the people of the state: All cases pending in AC court to be disposed of by February ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇಂದು ಎರಡು ಹೊಸ ʻವಂದೇ ಭಾರತ್ ರೈಲುʼಗಳಿಗೆ ಪ್ರಧಾನಿ ಮೋದಿ ಚಾಲನೆ
Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಸಿಲಿಂಡರ್ ಕೊರತೆಯಿಂದ ಆಟೋಮೊಬೈಲ್ ಇಂಡಸ್ಟ್ರಿ ಬಂದ್ : ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಉದ್ಯೋಗಿಗಳು!

22/03/2026 11:28 AM1 Min Read

ಬೆಂಗಳೂರಲ್ಲಿ ಕಾರು ಡಿಫ್ಟ್ರಿಂಗ್ ಕೇಸ್ : ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಸೇರಿದ ಕಾರು ಸೀಜ್, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ!

22/03/2026 11:08 AM1 Min Read

ಸಾಗರದ ಮಹಾಗಣಪತಿ ಜಾತ್ರೆಗೂ ತಟ್ಟಿದ ಎಲ್‌ಪಿಜಿ ಅಭಾವದ ಬಿಸಿ: ಕಟ್ಟಿಗೆ ಒಲೆಯೇ ಆಸರೆ!

22/03/2026 10:36 AM1 Min Read
Recent News

ಬೆಂಗಳೂರಲ್ಲಿ ಸಿಲಿಂಡರ್ ಕೊರತೆಯಿಂದ ಆಟೋಮೊಬೈಲ್ ಇಂಡಸ್ಟ್ರಿ ಬಂದ್ : ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಉದ್ಯೋಗಿಗಳು!

22/03/2026 11:28 AM

​’ಅಮೆರಿಕ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ದೆಹಲಿ-ಮುಂಬೈ ಮೇಲೆ ಬಾಂಬ್ ಹಾಕುತ್ತೇವೆ’: ಮಾಜಿ ಪಾಕ್ ರಾಯಭಾರಿ ವಿಲಕ್ಷಣ ಹೇಳಿಕೆ

22/03/2026 11:15 AM

ಬೆಂಗಳೂರಲ್ಲಿ ಕಾರು ಡಿಫ್ಟ್ರಿಂಗ್ ಕೇಸ್ : ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಸೇರಿದ ಕಾರು ಸೀಜ್, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ!

22/03/2026 11:08 AM

ಏರ್ ಇಂಡಿಯಾ ಕಠಿಣ ಫಿಟ್‌ನೆಸ್ ನಿಯಮ: ತೂಕ ಹೆಚ್ಚಾದರೆ ಕೆಲಸಕ್ಕೆ ಬ್ರೇಕ್, ಸಂಬಳಕ್ಕೂ ಕತ್ತರಿ!

22/03/2026 10:53 AM
State News
KARNATAKA

ಬೆಂಗಳೂರಲ್ಲಿ ಸಿಲಿಂಡರ್ ಕೊರತೆಯಿಂದ ಆಟೋಮೊಬೈಲ್ ಇಂಡಸ್ಟ್ರಿ ಬಂದ್ : ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಉದ್ಯೋಗಿಗಳು!

By kannadanewsnow0522/03/2026 11:28 AM KARNATAKA 1 Min Read

ಬೆಂಗಳೂರು : ಇರಾನ್ ಇಸ್ರೇಲ್ ಯುದ್ಧದ ಪರಿಣಾಮದಿಂದ ಇದೀಗ ಭಾರತದ ಡಿಫೆನ್ಸ್ ಹಾಗೂ ರೈಲ್ವೆ ವಲಯಕ್ಕೂ ಯುದ್ಧದ ಎಫೆಕ್ಟ್ ತಟ್ಟಿದೆ.…

ಬೆಂಗಳೂರಲ್ಲಿ ಕಾರು ಡಿಫ್ಟ್ರಿಂಗ್ ಕೇಸ್ : ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಸೇರಿದ ಕಾರು ಸೀಜ್, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ!

22/03/2026 11:08 AM

ಸಾಗರದ ಮಹಾಗಣಪತಿ ಜಾತ್ರೆಗೂ ತಟ್ಟಿದ ಎಲ್‌ಪಿಜಿ ಅಭಾವದ ಬಿಸಿ: ಕಟ್ಟಿಗೆ ಒಲೆಯೇ ಆಸರೆ!

22/03/2026 10:36 AM

ಯುಎನ್ಐ ಸುದ್ದಿ ಸಂಸ್ಥೆಯ ಮೇಲೆ ದಾಳಿಗೆ ಕೆಯುಡಬ್ಲ್ಯೂಜೆ ಖಂಡನೆ

22/03/2026 10:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.