Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಫಿಟ್ನೆಸ್’ನಲ್ಲಿ ಹೊಸ ಟ್ರೆಂಡ್ ; 6-6-6 ನಡಿಗೆಯಿಂದ ಸುಲಭವಾಗಿ ತೂಕ ಇಳಿಸಿಕೊಳ್ಬೋದು.! ಹೇಗೆ ಗೊತ್ತಾ.?

05/06/2025 10:04 PM

BREAKING : ಪ್ರಮಾಣೀಕರಿಸದ ಉತ್ಪನ್ನ ಮಾರಾಟ ; ಅಮೆಜಾನ್, ಫ್ಲಿಪ್‌ಕಾರ್ಟ್ ವಿರುದ್ಧ ಕೇಂದ್ರದಿಂದ ಮೊಕದ್ದಮೆ ದಾಖಲು

05/06/2025 9:47 PM

‘HDFC’ ಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್ ; ಈ ದಿನ ‘UPI ಸೇವೆ’ಗಳು ಸ್ಥಗಿತ.!

05/06/2025 9:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಜನತೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಗುಡ್ ನ್ಯೂಸ್ | Namma Clinic
KARNATAKA

ಸಾಗರದ ಜನತೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಗುಡ್ ನ್ಯೂಸ್ | Namma Clinic

By kannadanewsnow0904/06/2025 10:01 PM

ಶಿವಮೊಗ್ಗ: ಸಾಗರದ ಜನರಿಗೆ ಮತ್ತಷ್ಟು ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಹತ್ವದ ಹೆಜ್ಜೆ ಇರಿಸಿದ್ದಾರೆ. ಅದೇ ಇಂದು ನಗರದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸುವ ಮೂಲಕ ಜನರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ನಮ್ಮ ಕ್ಲಿನಿಕ್ ಅನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಸಾಗರದ ಬಿಹೆಚ್ ರಸ್ತೆಯ ಟಿವಿಎಸ್ ಶೋ ರೂಂ ಹಿಂಭಾಗದಲ್ಲಿ ನಮ್ಮ ಕ್ಲಿನಿಕ್ ಸಾರ್ವಜನಿಕರ ಸೇವೆಗೆ ಶಾಸಕರು ಲೋಕಾರ್ಪಣೆಗೊಳಿಸಿದರು.

ಈ ಬಳಿಕ ಮಾತನಾಡಿದಂತ ಅವರು ಸಾಗರದ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲೇ ನಮ್ಮ ಕ್ಲಿನಿಕ್ ತೆರೆಯಲಾಗಿದೆ. ಸಾಗರ ತಾಲ್ಲೂಕಿನ ವಿವಿಧ ಊರುಗಳಿಂದ ಆಗಮಿಸುವವರಿಗೆ ಬಸ್ ನಿಲ್ದಾಣದ ಸಮೀಪದಲ್ಲೇ ನಮ್ಮ ಕ್ಲಿನಿಕ್ ನಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ಸಿಗುವಂತ ಕೆಲಸ ಮಾಡಲಾಗಿದೆ.  ‘ನಮ್ಮ ಕ್ಲಿನಿಕ್‌’ಗಳಲ್ಲಿ ತಲಾ ಒಬ್ಬರು ವೈದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಡಿ-ದರ್ಜೆ ನೌಕರರು ಇರಲಿದ್ದಾರೆ. ಒಟ್ಟು 12 ಆರೋಗ್ಯ ಸೇವೆಗಳ ಪ್ಯಾಕೇಜ್ ಲಭ್ಯವಿದ್ದು, ಬಡವರು, ಕೂಲಿ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ ಇದು ಸಂಜೀವಿನಿಯಾಗಲಿದೆ ಎಂದರು.

ನಮ್ಮ ಕ್ಲಿನಿಕ್ ನಲ್ಲಿ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಗರ್ಭಿಣಿಯರು, ವೃದ್ಧರಿಗೂ, ಅನಾರೋಗ್ಯ ಪೀಡಿದರು ಉಚಿತವಾಗಿ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಅಸಹಾಯಕರು ಬಡವರಿಗೆ ಅನುಕೂಲ ಆಗಲಿ ಎಂದು ರಾಜ್ಯದ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್ ಗಳನ್ನ ತೆರೆಯಲಾಗಿದೆ. ‘ನಮ್ಮ ಕ್ಲಿನಿಕ್‌’ಗಳು ನಗರ ಪ್ರದೇಶದ ಬಡ, ದುರ್ಬಲ ವರ್ಗದ ಜನರಿಗೆ ಗುಣಮಟ್ಟದ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒಳಗೊಂಡಿದೆ. ಉಚಿತ ರೆಫರಲ್ ಸೇವೆಗಳನ್ನು ಒದಗಿಸುವ ಮುಖಾಂತರ ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಆರೋಗ್ಯ ಸೇವೆಗಳನ್ನು ಪಡೆಯಲು ತಗುಲುವ ವೆಚ್ಚ ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದರು.

ಈ ಕ್ಲಿನಿಕ್‌ಗಳು ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸಲಿವೆ. ನಿರೀಕ್ಷಣಾ ಸ್ಥಳ, ಹೊರ ರೋಗಿಗಳ ತಪಾಸಣೆ ಕೊಠಡಿ, ಚುಚ್ಚು ಮದ್ದು ನೀಡುವ ಕೊಠಡಿ, ಪ್ರಯೋಗಶಾಲೆ, ಔಷಧಿ ದಾಸ್ತಾನು ಮತ್ತು ವಿತರಣಾ ಕೊಠಡಿ, ಅಡಳಿತ ಕಚೇರಿ, ಹೀಗೆ ಪ್ರತ್ಯೇಕ ಕೊಠಡಿಗಳಿವೆ. ಆಸ್ಪತ್ರೆ ಸಿಬ್ಬಂದಿ, ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಾಮಾನ್ಯವಾಗಿರುವ ನೆಗಡಿ, ಕೆಮ್ಮಿನ ಜೊತೆಗೆ ಬಿ.ಪಿ, ಮಧುಮೇಹ ಮುಂತಾದ ಕಾಯಿಲೆಗಳ ತಪಾಸಣೆ ಹಾಗೂ ಪರೀಕ್ಷೆಯೂ ಆಗುತ್ತದೆ. ಔಷಧಿಯನ್ನೂ ಉಚಿತವಾಗಿ ನೀಡಲಾಗುತ್ತದೆ. ಇದಲ್ಲದೇ ಪ್ರಯೋಗಾಲಯದ ವ್ಯವಸ್ಥೆ ಕೂಡ ಇದ್ದು, ಬಿಪಿ, ಶುಗರ್ ಚೆಕ್ ಮಾಡುತ್ತಾರೆ. ಸಾಗರ ನಗರದ ಜನರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷ ಸವಿತಾ ವಾಸು, ಸದಸ್ಯರಾದಂತ ಗಣಪತಿ ಮಂಡಗಳಲೆ, ಮಧು ಮಾಲತಿ, ಕಲಸೆ ಚಂದ್ರಪ್ಪ, ಡಿಹೆಚ್ಓ ನಟರಾಜ್ ನಾಯ್ಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಸಂತ ಬಿ ಈಶ್ವರಗೆರೆ.., ಸಂಪಾದಕರು

BREAKING: ರಾಜ್ಯದಲ್ಲಿಂದು ಕೊರೋನಾಗೆ ಮತ್ತಿಬ್ಬರು ಬಲಿ: 153 ಜನರಿಗೆ ಸೋಂಕು ದೃಢ | Covid19 Update

ಸಂಸ್ಕೃತದಲ್ಲಿ 125ಕ್ಕೆ 125 ಅಂಕ ತೆಗೆದ ‘ಮುಸ್ಲೀಂ ವಿದ್ಯಾರ್ಥಿನಿ’ಗೆ ಬೈಕ್ ಗಿಫ್ಟ್ ಕೊಟ್ಟ ‘ಸಚಿವ ಜಮೀರ್ ಅಹ್ಮದ್’

Share. Facebook Twitter LinkedIn WhatsApp Email

Related Posts

ಹೀಗೆ ಕುಲದೇವತೆಯನ್ನು ಪೂಜಿಸಿ, ನಿಮ್ಮೆಲ್ಲಾ ಇಷ್ಟಾರ್ಥ ಸಿದ್ಧಿ ಗ್ಯಾರಂಟಿ

05/06/2025 6:54 PM3 Mins Read

ಡಿಸಿಎಂ ಡಿಕೆಶಿ ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

05/06/2025 6:31 PM3 Mins Read

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ

05/06/2025 6:29 PM2 Mins Read
Recent News

ಫಿಟ್ನೆಸ್’ನಲ್ಲಿ ಹೊಸ ಟ್ರೆಂಡ್ ; 6-6-6 ನಡಿಗೆಯಿಂದ ಸುಲಭವಾಗಿ ತೂಕ ಇಳಿಸಿಕೊಳ್ಬೋದು.! ಹೇಗೆ ಗೊತ್ತಾ.?

05/06/2025 10:04 PM

BREAKING : ಪ್ರಮಾಣೀಕರಿಸದ ಉತ್ಪನ್ನ ಮಾರಾಟ ; ಅಮೆಜಾನ್, ಫ್ಲಿಪ್‌ಕಾರ್ಟ್ ವಿರುದ್ಧ ಕೇಂದ್ರದಿಂದ ಮೊಕದ್ದಮೆ ದಾಖಲು

05/06/2025 9:47 PM

‘HDFC’ ಬ್ಯಾಂಕ್ ಗ್ರಾಹಕರಿಗೆ ಬಿಗ್ ಅಲರ್ಟ್ ; ಈ ದಿನ ‘UPI ಸೇವೆ’ಗಳು ಸ್ಥಗಿತ.!

05/06/2025 9:34 PM

Interesting Fact : ಇದು ವಿಶ್ವದ ಅತಿ ಉದ್ದದ ರಸ್ತೆ, ಯಾವುದೇ ಯು-ಟರ್ನ್ ಇಲ್ಲದೇ 14 ದೇಶಗಳ ಮೂಲಕ ಹಾದು ಹೋಗುತ್ತೆ

05/06/2025 9:24 PM
State News
KARNATAKA

ಹೀಗೆ ಕುಲದೇವತೆಯನ್ನು ಪೂಜಿಸಿ, ನಿಮ್ಮೆಲ್ಲಾ ಇಷ್ಟಾರ್ಥ ಸಿದ್ಧಿ ಗ್ಯಾರಂಟಿ

By kannadanewsnow0905/06/2025 6:54 PM KARNATAKA 3 Mins Read

ಅನ್ಯ ದೇವತೆಗಳನ್ನು ಪೂಜಿಸುವುದಕ್ಕಿಂತ ಕುಲದೇವತೆಯನ್ನು ಪೂಜಿಸಿದರೆ ನಮ್ಮ ಬದುಕು ಹಸನಾಗುತ್ತದೆ ಎನ್ನುತ್ತಾರೆ. ಅದಕ್ಕಾಗಿ ಬೇರೆ ದೇವತೆಗಳನ್ನು ಪೂಜಿಸಬಾರದೇ ಎಂದು ಕೇಳಿದರೆ…

ಡಿಸಿಎಂ ಡಿಕೆಶಿ ಮನುಷ್ಯತ್ವ ಇಲ್ಲದ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

05/06/2025 6:31 PM

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ

05/06/2025 6:29 PM

ಜೂ.21ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ: ‘KUWJ’ಯಿಂದ ಕೆ.ವಿ ಪ್ರಭಾಕರ್ ಗೆ ಆಹ್ವಾನ

05/06/2025 6:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.