ಶಿವಮೊಗ್ಗ: ಶಿವಮೊಗ್ಗ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಅಕ್ಟೋಬರ್.10ರಿಂದ ಸ್ಪೈಸ್ ಜೆಟ್ ಶಿವಮೊಗ್ಗದಿಂದ ಚೆನ್ನೈ ಮತ್ತು ಹೈದರಾಬಾದ್ ಗೆ ಎರಡು ಹೊಸ ನೇರ ವಿಮಾನ ಮಾರ್ಗಗಳನ್ನು ಪರಿಚಯಿಸಲಿದೆ. ಬುಕಿಂಗ್ ತೆರೆಯಲಾಗಿದೆ.
ಚೆನ್ನೈನಿಂದ ಪ್ರತಿದಿನ ಬೆಳಗ್ಗೆ 10.40ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 12.10ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ತಲುಪಲಿದೆ. ಶಿವಮೊಗ್ಗದಿಂದ ಮಧ್ಯಾಹ್ನ 12.35ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 2.05ಕ್ಕೆ ಹೈದರಾಬಾದ್ ತಲುಪಲಿದೆ.
ಹೈದರಾಬಾದ್ನಿಂದ ಮಧ್ಯಾಹ್ನ 2.40ಕ್ಕೆ ಹೊರಡುವ ವಿಮಾನ ಸಂಜೆ 4.10ಕ್ಕೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಸಂಜೆ 4.25ಕ್ಕೆ ಹೊರಟು ಸಂಜೆ 5.55ಕ್ಕೆ ಚೆನ್ನೈ ತಲುಪಲಿದೆ.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಈ ಹೊಸ ಮಾರ್ಗಗಳು ಶಿವಮೊಗ್ಗದಲ್ಲಿ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ಈ ಪ್ರದೇಶಕ್ಕೆ ತನ್ನ ಸೇವೆಗಳನ್ನು ವಿಸ್ತರಿಸಿದ್ದಕ್ಕಾಗಿ ಅವರು ಸ್ಪೈಸ್ ಜೆಟ್ ಗೆ ಕೃತಜ್ಞತೆ ಸಲ್ಲಿಸಿದರು.
UG NEET-2024ರ ಪರೀಕ್ಷೆ ಬರೆದವರಿಗೆ ಮಹತ್ವದ ಮಾಹಿತಿ: ಸೀಟು ಹಂಚಿಕೆ ವೇಳೆ ಈ ನಿಯಮಗಳ ಪಾಲನೆ ಕಡ್ಡಾಯ
ನಿಮಗಿದು ಗೊತ್ತಾ? ಭಾರತದ ‘ನೋಟು’ಗಳಲ್ಲಿ ಈ ವಿಶೇಷಗಳಿವೆ | Indian Currency Note