ಶಿವಮೊಗ್ಗ: ಸಾಗರ ತಾಲ್ಲೂಕಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಂಪರ್ ಗಿಫ್ಟ್ ನೀಡಿದ್ದಾರೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಮನವಿಯ ಮೇರೆಗೆ ಬರೋಬ್ಬರಿ 50 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದಾರೆ. ಈ ಅನುದಾನದಲ್ಲಿ ಸಾಗರ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಕರ್ನಾಟಕ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಾಗರ ವಿಧಾನಸಭಾ ಕ್ಷೇತ್ರವು ಸಂಪೂರ್ಣ ಮಲೆನಾಡು ಪ್ರದೇಶವಾಗಿದ್ದು, ಮಳೆಗಾಲದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಬಹುತೇಕ ಭಾಗ ಶರಾವತಿ ಹಿನ್ನೀರಿನ ಪ್ರದೇಶವಾಗಿರುವುದರಿಂದ ಕೆರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮಳೆಗಾಲದಲ್ಲಿ ಕೆರೆಕೋಡಿಗಳು ನೆರೆ ಪ್ರವಾಹದ ಪರಿಸ್ಥಿತಿ ಅಲ್ಲದೆ, ಮಕ್ಕಳು, ಹಳ್ಳಕೊಳ್ಳಗಳನ್ನು ದಾಟಿ ಹೋಗಬೇಕಾಗಿರುತ್ತದೆ. ಇದಕ್ಕೆ ಕಾಲುಸಂಕ, ತಡೆಗೋಡೆ, ಚೆಕ್ ಡ್ಯಾಂ, ಬ್ಯಾರೇಜ್ ಮತ್ತು ಸೇತುವೆ ನಿರ್ಮಾಣದ ಅವಶ್ಯಕತೆ ಇರುತ್ತದೆ. ಆದುದ್ದರಿಂದ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ರೂ.60.00 ಕೋಟಿ ಅನುದಾನವನ್ನು ಮಂಜೂರು ಮಾಡಿ, ಸದರಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಪತ್ರದಲ್ಲಿ ಕೋರಿದ್ದಾಗಿ ತಿಳಿಸಿದ್ದಾರೆ.
ಸದರಿ ಪತ್ರದ ಮೇಲೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ‘ನಾವು ಅವರಿಗೆ 50 ಕೋಟಿ ಕಾಮಗಾರಿಗೆ ಅನುಮೋದನೆ ಮಂಡಳಿ ಸಭೆಯಲ್ಲಿ ಅನುಮೋದನೆ ಮಾಡಿದ್ದೇವೆ. ಅದರಲ್ಲಿ ಈ ಕಾಮಗಾರಿಗಳಿಗೆ ಅನುಮೋದನೆ ನೀಡಿ” ಎಂದು ಷರಾ ನಮೂದಿಸಿರುತ್ತಾರೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ರೈತರ/ಸಾರ್ವಜನಿಕರ ಹಿತದೃಷ್ಟಿಯಿಂದ ಸದರಿ ಕಾಮಗಾರಿಗಳನ್ನು ಕೈಗೊಳ್ಳುವುದು ಅವಶ್ಯವಿರುವುದಾಗಿ ಶಾಸಕರು, ಸಾಗರ ವಿಧಾನಸಭಾ ಕ್ಷೇತ್ರ ಇವರು ತಿಳಿಸಿರುವ ಹಿನ್ನಲೆಯಲ್ಲಿ ಹಾಗೂ ಉಪಮುಖ್ಯಮಂತ್ರಿಯವರ ನಿರ್ದೇಶನದನ್ವಯ ರೈತರ/ಸಾರ್ವಜನಿಕರ ಹಿತದೃಷ್ಟಿಯಿಂದ ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಕಾಲುಸಂಕ, ತಡೆಗೋಡೆ, ಚೆಕ್ ಡ್ಯಾಂ, ಬ್ಯಾರೇಜ್ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವುದು ಅವಶ್ಯವಿರುವ ಹಿನ್ನಲೆಯಲ್ಲಿ ನಿಗಮದ ಆರ್ಥಿಕ ಪ್ರತ್ಯಾಯೋಜನೆಯ ಕಂಡಿಕೆ-1,02 (iii) ರನ್ವಯ ನಿಗಮದ ನಿರ್ದೇಶಕರ ಮಂಡಳಿಗೆ ಅಧಿಕಾರವಿರುವುದರಿಂದ ಪ್ರಸ್ತುತ ಮಂಡಳಿ ಸಭೆಯು ಜರುಗದಿರುವ ಹಿನ್ನಲೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಮಾನ್ಯ ಉಪಮುಖ್ಯಮಂತ್ರಿಯವರಿಂದ ಅನುಮೋದನೆ ದೊರಕಿಸಿಕೊಡುವಂತೆ ಉಲ್ಲೇಖಿತ (2)ರ ಈ ಕಛೇರಿ ಪತ್ರದಲ್ಲಿ ಸರ್ಕಾರವನ್ನು ಕೋರಲಾಗಿರುತ್ತದೆ ಎಂದಿದ್ದಾರೆ.
ಅದರನ್ವಯ ಉಲ್ಲೇಖಿತ (3)ರ ಸರ್ಕಾರದ ಪತ್ರದಲ್ಲಿ ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ, ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳ ಕಾಲುಸಂಕ, ತಡೆಗೋಡೆ. ಚೆಕ್ ಡ್ಯಾಂ, ಬ್ಯಾರೇಜ್ ಮತ್ತು ಸೇತುವೆ ನಿರ್ಮಾಣ ಇತ್ಯಾದಿ ರೂ.60.00 ಕೋಟಿ ಮೊತ್ತದ 236 ಕಾಮಗಾರಿಗಳನ್ನು ಕೈಗೊಳ್ಳುವ ಪ್ರಸ್ತಾವನೆಗೆ ಉಪಮುಖ್ಯಮಂತ್ರಿಯವರು ಅನುಮೋದನೆ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಸದರಿ ವಿಷಯವಾಗಿ ನಿಯಮಾನುಸಾರ ಮುಂದಿನ ಕ್ರಮವಹಿಸುವಂತೆ ಸೂಚಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ, ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳ ಕಾಲುಸಂಕ, ತಡೆಗೋಡೆ. ಚೆಕ್ ಡ್ಯಾಂ, ಬ್ಯಾರೇಜ್ ಮತ್ತು ಸೇತುವೆ ನಿರ್ಮಾಣ ಇತ್ಯಾದಿ (234 ಸಂಖ್ಯೆ) ಕಾಮಗಾರಿಗಳನ್ನು 2025-26ನೇ ಸಾಲಿನ ಲೆಕ್ಕ ಶೀರ್ಷಿಕೆ 4701 ರಡಿ ಕೈಗೆತ್ತಿಕೊಂಡು, ನಿಗಮದ ನಿರ್ದೇಶಕರ ಮಂಡಳಿಯ ಘಟನೋತ್ತರ ಅನುಮೋದನೆ ಪಡೆಯುವ ಮತ್ತು ಸಂಬಂಧಪಟ್ಟ ಯೋಜನೆಯ ಪರಿಷ್ಕೃತ ಅಂದಾಜಿನಲ್ಲಿ ಅಳವಡಿಸಿಕೊಳ್ಳುವ ನಿಬಂಧನೆ ಹಾಗೂ ವಾರ್ಷಿಕ ಕಾರ್ಯಕ್ರಮ ಪಟ್ಟಿಯಲ್ಲಿ ಅಳವಡಿಸಿಕೊಂಡು ಅನುಮೋದನೆ ಪಡೆಯುವ ಷರತ್ತಿಗೊಳಪಟ್ಟು ರೂ.50.00 ಕೋಟಿಗಳಿಗೆ ಅನುಮೋದನೆ ನೀಡಲಾಗಿದ್ದು, ಸದರಿ ಕಾಮಗಾರಿಗಳನ್ನು ಪ್ಯಾಕೇಜ್‌ವರು (ಸೂಕ್ತ ಪ್ಯಾಕೇಜ್‌ಗಳನ್ನು ತಯಾರಿಸಿ, ಪ್ರತಿ ಪ್ಯಾಕೇಜ್‌ನ ಮೊತ್ತ ರೂ.5.00 ಕೋಟಿ ಮೀರದಂತೆ) ಟೆಂಡರ್ ಆಹ್ವಾನಿಸಲು ಇಲಾಖಾ | ನಿಗಮದ ನಿಯಮಾನುಸಾರ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು, ಸಾಗರ ನಗರದ ಬಸವನಹೊಳೆ ಡ್ಯಾಂ ಹೂಳು ತೆಗೆಯುವುದು ಹಾಗೂ ಅಭಿವೃದ್ಧಿ ಕಾಮಗಾರಿಯ ರೂ. 10.00 ಕೋಟಗಳ ವಿವರವಾದ ಯೋಜನಾ ವರದಿಯನ್ನು ತಯಾರಿಸಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವಂತೆ ಸಹ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಯಾವೆಲ್ಲ ಕಾಮಗಾರಿ ಕೈಗೊಳ್ಳಲು ಅನುಮೋದನೆ ಗೊತ್ತಾ? ಇಲ್ಲಿದೆ ಲೀಸ್ಟ್
ರಾಜ್ಯದ ರೈತರಿಗೆ ಮಹತ್ವದ ಮಾಹಿತಿ: ಈಗ ಜಮೀನಿನ ದಾಖಲೆ ‘ಆನ್ ಲೈನ್’ನಲ್ಲಿ ಲಭ್ಯ, ಜಸ್ಟ್ ಹೀಗೆ ಮಾಡಿ