ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ 16 ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ತರಗತಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ವಿಶೇಷ ಪ್ರಯತ್ನದಿಂದ ಸಾಗರ ತಾಲ್ಲೂಕಿನ 16 ಸರ್ಕಾರಿ ಶಾಲೆಗಳಲ್ಲಿ 2025-26 ನೇ ಸಾಲಿನಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆಗೆ ಸರ್ಕಾರ ಅನುಮತಿ ಸಿಕ್ಕಂತೆ ಆಗಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ನಡವಳಿಯನ್ನು ಹೊರಡಿಸಿದ್ದು, ರಾಜ್ಯದ ಪ್ರಸ್ತುತ 4134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2025-26ನೇ ಸಾಲಿನಿಂದ 1ನೇ ತರಗತಿಯಿಂದ ಪ್ರಸ್ತುತ ನಡೆಯುತ್ತಿರುವ ಕನ್ನಡ, ಇತರೆ ಮಾಧ್ಯಮದ ಜೊತೆಗೆ ಹೊಸದಾಗಿ ಆಂಗ್ಲ ಮಾಧ್ಯಮ ದ್ವಿಭಾಷಾ ಮಾಧ್ಯಮ ತರಗಳಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾರಂಭಿಸಲು ಅನುಮತಿ ನೀಡಿ ಆದೇಶಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ, ಬಿಳಲುಕೊಪ್ಪ, ಸರ್ಕಾರಿ ಪ್ರೌಢಶಾಲೆ, ಹೊಸೂರು-ಗುಡ್ಡೇರಿ ಮತ್ತು ಸರ್ಕಾರಿ ಪ್ರೌಢ ಶಾಲೆ, ಹೆದ್ದೂರುಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಕನ್ನಡ, ಇತರೆ ಮಾಧ್ಯಮದ ಜೊತೆಗೆ ಹೊಸದಾಗಿ ಆಂಗ್ಲ ಮಾಧ್ಯಮದ ದ್ವಿಭಾಷಾ ತರಗತಿಗಳನ್ನು ಸ್ಥಳೀಯವಾಗಿ ಲಭ್ಯವಿರು ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾರಂಭಿಸಲು ಅನುಮತಿ ನೀಡಿ ಆದೇಶಲಾಗಿದೆ.
ಇದಲ್ಲದೇ ಸಾಗರ ತಾಲ್ಲೂಕಿನ 16 ಶಾಲೆಗಳಲ್ಲಿ ಕನ್ನಡ, ಇತರೆ ಭಾಷೆಯ ಜೊತೆಗೆ ದ್ವಿಭಾಷಾ ಮಾಧ್ಯಮವಾಗಿ ಆಂಗ್ಲಾ ಮಾಧ್ಯಮದಲ್ಲೂ ತರಗತಿ ಆರಂಭಕ್ಕೆ ಅನುಮತಿ ನೀಡಲಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳಲ್ಲೂ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಮಕ್ಕಳಿಗೆ ಸಿಗುವಂತೆ ಸಾಗರ ತಾಲ್ಲೂಕು ಶಾಸಕ ಗೋಪಾಲಕೃಷ್ಣ ಬೇಳೂರು ಸಿಗುವಂತೆ ಮಾಡಿದ್ದಾರೆ.
ಸಾಗರ ತಾಲ್ಲೂಕಿನ ಯಾವೆಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದ ಆರಂಭ?
- ನಾಗವಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
- ಬರದವಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
- ಮಾಸೂರಿನ GHS ಶಾಲೆ
- ಮಾಲ್ವೆಯ GHPS ಶಾಲೆ
- ಬಿಳಿಸಿರಿ GHPS ಶಾಲೆ
- ಹೆಬ್ಬರಿಗೆ GHPS ಶಾಲೆ
- ನರಸೀಪುರ GLPS ಶಾಲೆ
- ಆನಂದಪುರಂ GLPS ಶಾಲೆ
- ಯಡೆಹಳ್ಳಿ GHPS ಶಾಲೆ
- ಗೆಣಸಿನಕುಣಿ GHPS ಶಾಲೆ
- ರಾಮನಗರ-ಯಳಗಳಲೆ GHPS ಶಾಲೆ
- ಟ್ಯಾಂಕ್ ಸಾಗರ್ GHPS ಶಾಲೆ
- ಸಣ್ಣಮನೆ ಎಕ್ಸ್ ಟೇನ್ಷನ್ ಸಾಗರ GHPS ಶಾಲೆ
- GGHPS ಉರ್ದು ಗಾಂಧಿನಗರ ಶಾಲೆ
- GGHPS ಉರ್ದು ಅರಳಿಕಟ್ಟೆ ಸಾಗರ
- ಸರ್ಕಾರಿ ಶ್ರೀ ಸಿದ್ದೇಶ್ವರ HPS ಸಾಗರ ಶಾಲೆ
ಒಟ್ಟಾರೆಯಾಗಿ 2025-26ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಪ್ರಸ್ತುತ ಇರುವ ಕನ್ನಡ, ಇತರೆ ಮಾಧ್ಯಮದ ಜೊತೆಗೆ ಸಾಗರ ತಾಲ್ಲೂಕಿನ 16 ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ದ್ವಿಭಾಷಾ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರದಿಂದ ಅನುಮತಿ ಸಿಕ್ಕಂತೆ ಆಗಿದೆ. ಈ ಮೂಲಕ ತಮ್ಮ ಮಕ್ಕಳನ್ನು ಆಂಗ್ಲಾ ಮಾಧ್ಯಮದಲ್ಲಿ ಓದಿಸಬೇಕು ಎನ್ನುವಂತ ಪೊಷಕರಿಗೆ ಸಂತಸದ ಸುದ್ದಿ ಸಿಕ್ಕಂತೆ ಆಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು