ಶಿವಮೊಗ್ಗ: ಸಾಗರದ ಜನತೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಸಾಗರ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣ ಮೇಲ್ದರ್ಜೆಗೆ ಏರಿಸಲು ಬರೋಬ್ಬರಿ 3 ಕೋಟಿ ಅನುದಾನವನ್ನು ಸರ್ಕಾರದಿಂದ ತಂದಿದ್ದಾರೆ. ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ 1 ಕೋಟಿ ಅನುದಾನ ಮಂಜೂರಾತಿ ಪಡೆದಿದ್ದರೇ, ಸಾರಿಗೆ ಇಲಾಖೆಯಿಂದ 2 ಕೋಟಿ ಅನುದಾನವನ್ನು ನೀಡಲಾಗಿದೆ. ಈ ಮೂಲಕ ಸಾಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಹೈಟೆಕ್ ಆಗಿ ಮೇಲ್ದರ್ಜೆಗೆ ಏರಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ನಗರ ಭೂ ಸಾರಿಗೆ ನಿರ್ದೇಶನಾಲಯದ ವಿಶೇಷಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಾಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಮೇಲ್ದರ್ಜೆಗೆ ಏರಿಸಲು ಕೋರಿದ್ದರು. ಅವರ ಮನವಿಯನ್ನು ಪುರಸ್ಕರಿಸಿರುವಂತ ಸರ್ಕಾರವು 3 ಕೋಟಿ ವೆಚ್ಚದಲ್ಲಿ ಸಾಗರದ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣ ಮೇಲ್ದರ್ಜೆಗೆ ಏರಿಸಲು ಅನುಮತಿಸಿರುವುದಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ.?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇವರು ಸಾಗರದಲ್ಲಿರುವ ಕ.ರಾ.ರ.ಸಾ. ನಿಗಮದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಯೋಜನಾ ಪ್ರಸ್ತಾವನೆ, ಅಂದಾಜು ವೆಚ್ಚ, ಅರ್ಜಿ, ವರದಿ ಮುಂತಾದ ವಿವರಗಳೊಂದಿಗೆ ರಾಜ್ಯ ನಗರ ಸಾರಿಗೆ ನಿಧಿಯ ಪೋರ್ಟಲ್‌ನಲ್ಲಿ ಸಹಾಯಾನುದಾನ ಕೋರಿ ಪುಸ್ತಾವನೆ ಸಲ್ಲಿಸಿರುತ್ತಾರೆ. ಈ ಯೋಜನೆಯಡಿ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವುದಲ್ಲದೆ, ಕಾಯುವ ಕೋಣೆ, ಪಾರ್ಕಿಂಗ್ ಸೌಲಭ್ಯದ ಸುಧಾರಣೆ, ಕಾಂಪೌಂಡ್ ಗೋಡ, ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಳ ನೀರು ಕೊಯ್ತು ವ್ಯವಸ್ಥೆ ಸೌಲಭ್ಯಗಳು ಒಳಗೊಂಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಸದರಿ ಯೋಜನೆಗೆ ರೂ.3.00 ಕೋಟಿ ಮೊತ್ತವನ್ನು ರಾಜ್ಯ ನಗರ ಸಾರಿಗೆ ನಿಧಿಯಡಿ ಸಹಾಯಾನುದಾನವಾಗಿ ಬಿಡುಗಡ ಮಾಡಲು ಕೋರಿದ್ದು, ಈ ಯೋಜನೆಯ ತಾಂತ್ರಿಕ ವಿನ್ಯಾಸ ರಚನೆ ಹಾಗೂ ಅಂದಾಜು ವೆಚ್ಚಗಳನ್ನು ಪರಿಶೀಲಿಸಲಾಗಿದ್ದು, ಪರಿಷ್ಕೃತ ಯೋಜನಾ ಅಂದಾಜು ಒಟ್ಟು ವೆಚ್ಚ ರೂ.2,97,15,000/- ಮೊತ್ತದ ಪೈಕಿ ರಾಜ್ಯ ನಗರ ಸಾರಿಗೆ ನಿಧಿಯಡಿ ರೂ.1.00 ಕೋಟಿ ಮೊತ್ತದ ಸಹಾಯಾನುದಾನ ಒದಗಿಸಲು ನಿರ್ಧರಿಸಲಾಗಿದೆ.
ಸದರಿ ಯೋಜನೆಗೆ ರಾಜ್ಯ ನಗರ ಸಾರಿಗೆ ನಿಧಿಯಡಿ ರೂ.1.00 ಕೋಟಿ ಮೊತ್ತವನ್ನು ಭರಿಸಲು ಅನುಮೋದನೆಯನ್ನು ನೀಡಲು ತೀರ್ಮಾನಿಸಲಾಗಿದೆ. ಅಂತೆಯೇ ಈ ಆದೇಶ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸಾಗರದಲ್ಲಿರುವ ಕ.ರಾ.ರ.ಸಾ.ನಿಗಮದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೊಳ್ಳಲು ಒಟ್ಟು ಅಂದಾಜು ವೆಚ್ಚ ರೂ 2,97,15,000/- ಮೊತ್ತದ ಪ್ರತಿ ರೂ.1.00 ಕೋಟಿ (ಒಂದು ಕೋಟಿ ರೂಪಾಯಿಗಳು ಮಾತ್ರ) ಮೊತ್ತವನ್ನು ರಾಜ್ಯ ನಗರ ಸಾರಿಗೆ ನಿಧಿಯಿಂದ ಒದಗಿಸಲು ಅನುಮೋದನೆಯನ್ನು ಈ ಕೆಳಕಂಡ ಷರತ್ತಿಗೊಳಪಟ್ಟು ನೀಡಲಾಗಿದೆ.
1. ಮಂಜೂರಾಗಿರುವ ರಾಜ್ಯ ನಗರ ಸಾರಿಗೆ ನಿಧಿಯಡಿ ಸಹಾಯಾನುದಾನವನ್ನು ಕಂತುಗಳಲ್ಲಿ ಹಣವನ್ನು ಬಿಡುಗಡೆಗೊಳಿಸಲಾಗುವುದು.
2. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ತಮ್ಮ ಪಾಲಿನ ಮೊತ್ತವಾದ ರೂ. 1,97,15,000/- ಗಳನ್ನು ಯೋಜನೆಗೆ ವಿನಿಯೋಗಿಸಿಕೊಂಡು ಆರ್ಥಿಕ ಪ್ರಗತಿ ವರದಿಯಲ್ಲಿ ವೆಚ್ಚವನ್ನು ನಮೂದಿಸತಕ್ಕದ್ದು.
3. ಸದರಿ ಯೋಜನೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಮೊದಲನೆಯ ಕಂತಿನ ಹಣ ಬಿಡುಗಡೆಗಾಗಿ ಕೋರಿಕೆ ಪ್ರಸ್ತಾವನೆಯನ್ನು ಸಲ್ಲಿಸುವಾಗ KTPP Act ಮತ್ತು ನಿಯಮಗಳನ್ವಯ ಗುತ್ತಿಗೆದಾರರಿಗೆ ವಹಿಸಲಾಗಿರುವ ಕಾಮಗಾರಿ ವಿವರಗಳಾದ (1) ಗುತ್ತಿಗೆ ಕರಾರು ಪತ್ರದ ಪ್ರತಿ (2) ಕಾರ್ಯಾದೇಶ ಪತ್ರದ ಪ್ರತಿಯನ್ನು ಸಲ್ಲಿಸತಕ್ಕದ್ದು.
4. ಎರಡನೆಯ ಹಾಗೂ ಮುಂದಿನ ಕಂತಿನ ಹಣ ಬಿಡುಗಡೆಗಾಗಿ ಬಳಕೆ ಪ್ರಮಾಣ ಪತ್ರ, ಆರ್ಥಿಕ ಹಾಗೂ ಭೌತಿಕ ಪ್ರಗತಿ ವರದಿಯನ್ನು, ನಿರ್ಮಾಣ ಹಂತದ ಛಾಯಾಚಿತ್ರಗಳೊಂದಿಗೆ ಕೋರಿಕೆಯನ್ನು ಸಲ್ಲಿಸತಕ್ಕದ್ದು.
5. ಆರ್ಥಿಕ ಮತ್ತು ಭೌತಿಕ ಪ್ರಗತಿ ವರದಿಯನ್ನು ನಿಯತವಾಗಿ ಮುಕ್ತಾಯಗೊಂಡ ಪ್ರತಿ ಮಾಹಗೂ ಕಡ್ಡಾಯವಾಗಿ ಸಲ್ಲಿಸತಕ್ಕದ್ದು ಎಂದು ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
‘ಕಾವೇರಿ ಆರತಿ’ ವೀಕ್ಷಿಸುವ ಪ್ರವಾಸಿಗರಿಗೆ ಉಚಿತವಾಗಿ ‘ತಾಯಿ ಕಾವೇರಿ ಲಾಡು ಪ್ರಸಾದ’