ಶಿವಮೊಗ್ಗ: ಸಾಗರ ತಾಲ್ಲೂಕಿನ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ, ಸಾಗರ ಸಮೀಪದ ಕೆಳದಿ ಕೆರೆಯಲ್ಲಿ ಜಲಕ್ರೀಡೆ, ಜಲಸಾಹಸಕ್ಕೆ ಪ್ರವಾಸೋದ್ಯಮ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.
ಈ ಸಂಬಂಧ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಪ್ರಕಟಣೆಯನ್ನು ಹೊರಡಿಸಿದ್ದು, ಶಿವಮೊಗ್ಗ, ಶಿಕಾರಿಪುರ, ಸಾಗರ, ಸೊರಬ, ಹೊಸನಗರ ತಾಲ್ಲೂಕಿನ ಒಟ್ಟು 7 ಕೆರೆಗಳಲ್ಲಿ ಜಲಕ್ರೀಡೆ ಮತ್ತು ಜಲ ಸಾಹಸ ಪ್ರವಾಸೋದ್ಯ ಚಟುವಟಿಕೆಗಳಿಗೆ ಅನುಮತಿಸಲಾಗಿದೆ ಎಂದಿದೆ.
ಇದಲ್ಲದೇ Rafting, ಕಯಾಕಿಂಗ್, ಕನೋಯಿಂಗ್, ವಿಂಡ್ ಸರ್ಫಿಂಗ್, ಜೆಟ್ ಸ್ಕೀ, ವಾಟರ್ ಜಾರ್ಬಿಂಗ್, ನಾನ್ ಮೋಟರೈಸಡ್ ಚಟುವಟಿಕೆ ಕೈಗೊಳ್ಳಲು 2 ವರ್ಷಗಳ ಅವಧಿಗೆ ಟೆಂಡರ್ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಕೆರೆಯಲ್ಲಿ ಜಲಕ್ರೀಡೆಗೆ ಅನುಮತಿ.?
- ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ ಬಸವಣ್ಣನ ಕೆರೆ
- ಶಿಕಾರಿಪುರ ತಾಲ್ಲೂಕಿನ ದೂಪದಹಳ್ಳಿ ದೊಡ್ಡಕೆರೆ
- ಶಿಕಾರಿಪುರ ತಾಲ್ಲೂಕಿನ ತಾಳಗುಂದ ಹಿರೇಕೆರೆ
- ಸಾಗರ ತಾಲ್ಲೂಕಿನ ಕೆಳದಿ ಕೆರೆ
- ಸೊರಬ ತಾಲ್ಲೂಕಿನ ಕುಬಟೂರು ಕೆರೆ
- ಶಿವಮೊಗ್ಗ ತಾಲ್ಲೂಕಿನ ಗೋಪಿನಶೆಟ್ಟಿಕೊಪ್ಪ ದೊಡ್ಡಕೆರೆ
- ಹೊಸನಗರ ತಾಲ್ಲೂಕಿನ ಹುಂಚಾ ಮುತ್ತಿನ ಕೆರೆ
ಈ ಮೇಲ್ಕಂಡ ಕೆರೆಯಲ್ಲಿ ಜಲಕ್ರೀಡೆಗೆ ಪ್ರವಾಸೋದ್ಯಮ ಇಲಾಖೆ ಅನುಮತಿ ನೀಡಿದ್ದು, ಟೆಂಡರ್ ಮೂಲಕ ಸೇವೆಯನ್ನು ಪಡೆಯಲು ಇ-ಪ್ರೋಕ್ಯೂರಮೆಂಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಎ-ಬ್ಲಾಕ್, 3ನೇ ತಿರುವು, ಗೋಪಾಲಗೌಡ ಬಡಾವಣೆ, ಶಿವಮೊಗ್ಗ-577205, ದೂರವಾಣಿ ಸಂಖ್ಯೆ: 08182 251444 ಗೆ ಕರೆ ಮಾಡಿ ಪಡೆಯಬಹುದಾಗಿದೆ. ಟೆಂಡರ್ ಪ್ರಕ್ರಿಯೆಯ ವಿವರ, ದಾಸ್ತಾವೇಜುಗಳನ್ನು https://www.eproc.karnataka.gov.in/eprocportal/pages/index.jsp ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು