ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸೇವೆಗಾಗಿ ಮೆಟ್ರೋ ಸಂಪರ್ಕ ಬಲಪಡಿಸುವ ಸಲುವಾಗಿ ಹಳದಿ ಮಾರ್ಗದಲ್ಲಿ ಪರಿಚಯಿಸಲಾಗುತ್ತಿರುವ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆಗೊಳಿಸಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸೇವಾ ಸಂಸ್ಥೆಯಾಗಿದ್ದು, ಬೆಂಗಳೂರು ನಗರ ಹಾಗೂ ಹೊರ ವಲಯದ ಪ್ರಯಾಣಿಕರಿಗೆ ದಕ್ಷ, ಉತ್ತಮ, ಸುಲಭ ಸಾರಿಗೆ ಸೇವೆಯನ್ನು ಒದಗಿಸುವ ಧ್ಯೇಯದೊಂದಿಗೆ, ಪ್ರತಿದಿನ 6217 ಬಸ್ಸುಗಳಿಂದ 65,206 ಸುತ್ತುವಳಿಗಳನ್ನು 12.85 ಲಕ್ಷ ಕಿ.ಮೀ.ಗಳಲ್ಲಿ ಆಚರಣೆಗೊಳಿಸಲಾಗುತ್ತಿದೆ. ಪ್ರತಿದಿನ ಸರಾಸರಿ 44 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.
- ಈ ಹಿಂದೆ, ದಿನಾಂಕ 11-10-2023 ರಂದು ಕೆ.ಆರ್.ಪುರಂ ರೈಲ್ವೆ ನಿಲ್ದಾಣದ ಬಳಿ ಮತ್ತು ದಿನಾಂಕ 28-10-2023 ರಂದು ಬಿಟಿಎಂ ಲೇಔಟ್ ಬಸ್ ನಿಲ್ದಾಣದಿಂದ ಮೆಟ್ರೋ ಫೀಡರ್ ಬಸ್ಸುಗಳಿಗೆ ಚಾಲನೆ ನೀಡಿ, ಅಂದಿನಿಂದ ಈವರೆವಿಗೂ ವಿವಿಧ ಮೆಟ್ರೋ ನಿಲ್ದಾಣಗಳಿಂದ 45 ಮಾರ್ಗಗಳಲ್ಲಿ 214 ಅನುಸೂಚಿಗಳಿಂದ ಒಟ್ಟು 2750 ಮೆಟ್ರೊ ಫೀಡರ್ ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.
- ಪ್ರತಿ ದಿನ 20 ಲಕ್ಷಕ್ಕೂ ಅಧಿಕ ಸಾರ್ವಜನಿಕ ಪ್ರಯಾಣಿಕರು ಮೆಟ್ರೋ ಫೀಡರ್ ಸೇವೆಗಳಲ್ಲಿ ಉಪಯೋಗ ಪಡೆಯುತ್ತಿದ್ದಾರೆ.
- ಮೆಟ್ರೋ ಬಸ್ ನಿಲ್ದಾಣಗಳಲ್ಲಿ ಹಾಗೂ ಮೆಟ್ರೋ ರೈಲಿನಲ್ಲಿ QR Code ಆಧಾರಿತ ಮೆಟ್ರೀ ಫೀಡರ್ ಬಸ್ಸುಗಳ ವೇಳಾಪಟ್ಟಿ, ಲೈವ್ ಟ್ರ್ಯಾಕಿಂಗ್ ಮತ್ತು ಇತರೇ ಸಂಬಂಧಿತ ಮಾಹಿತಿಯನ್ನು ನೀಡುವ ಆಧುನಿಕ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.
- ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸೂರು ಮುಖ್ಯ ರಸ್ತೆಯಲ್ಲಿ 100 ಮಾರ್ಗಗಳಲ್ಲಿ 619 ಅನುಸೂಚಿಗಳಿಂದ 3000 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುತ್ತಿದೆ.
- ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ ನಿಂದ ನಗರದ ಪ್ರಮುಖ ಸ್ಥಳಗಳಿಗೆ 14 ಮಾರ್ಗಗಳಲ್ಲಿ 80 ಅನುಸೂಚಿಗಳಿಂದ 700 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುತ್ತಿದೆ. ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್ ಮಾರ್ಗವಾಗಿ 4 ಮಾರ್ಗಗಳಲ್ಲಿ 87 ಅನುಸೂಚಿಗಳಿಂದ 592 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುತ್ತಿದೆ.
- ಪ್ರಮುಖ ಸ್ಥಳಗಳಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಹಾಗೂ ಎಲೆಕ್ಟ್ರಾನಿಕ್ ಸಿಟಿಗೆ, ವಿಪ್ರೋಗೆ ನೈಸ್ ರಸ್ತೆಯಲ್ಲಿ 18 ಮಾರ್ಗಗಳಲ್ಲಿ, 60 ಅನುಸೂಚಿಗಳಿಂದ, 292 ಸುತ್ತುವಳಿಗಳನ್ನು ಆಚರಣೆಗೊಳಿಸುತ್ತಿದ್ದು, ಪ್ರತಿದಿನ ಸರಾಸರಿ 14,000 ಪ್ರಯಾಣಿಕರು ಈ ಮಾರ್ಗಗಳ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.
ಮೆಟ್ರೋ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆಗೊಳ್ಳಲಿರುವ ನೂತನ ಮಾರ್ಗಗಳ ವಿವರ:
- ಹಳದಿ ಮೆಟ್ರೋ ಮಾರ್ಗಕ್ಕೆ ಸಂಸ್ಥೆಯಿಂದ ಒಟ್ಟು 4 ಮಾರ್ಗಗಳಲ್ಲಿ 12 ಬಸ್ಸುಗಳಿಂದ 96 ಸುತ್ತುವಳಿಗಳನ್ನು ಮೆಟ್ರೋ ಫೀಡರ್ ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ.
- ಸದರಿ 4 ಮಾರ್ಗಗಳಲ್ಲಿ ಒಟ್ಟು 12 ಬಸ್ಸುಗಳಿಂದ 96 ಸುತ್ತುವಳಿಗಳನ್ನು ಆಚರಣೆಗೊಳಿಸುತ್ತಿದ್ದು, ಸದರಿ ಮಾರ್ಗಗಳಲ್ಲಿ ಹೊಸರೋಡ್, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಇನ್ಫೊಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ ಹಾಗೂ ಬೊಮ್ಮಸಂದ್ರ ಒಟ್ಟು 6 ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆಗಳ ಸೌಲಭ್ಯವನ್ನು ಪ್ರಾರಂಭಿಸಲಾಗುತ್ತಿದೆ.
ಕ್ರ ಸಂ. | ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ | ಬಸ್ಸುಗಳ ಸಂಖ್ಯೆ | ಸುತ್ತುವಳಿ ಸಂಖ್ಯೆ |
1
|
MF-22 | ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್
ಬಿಡುವ ವೇಳೆ: 0820, 0850, 0920, 0950, 1045, 1130, 1200, 1230, 1300, 1355, 1425, 1455, 1525, 1555, 1625, 1655. |
ಕೊಡತಿ ವಿಪ್ರೋ
ಬಿಡುವ ವೇಳೆ: 0710, 0740, 0810, 0840, 0935, 1030, 1100, 1130, 1200, 1230, 1300, 1330, 1425, 1455, 1525, 1555 |
ಎಲೆಕ್ಟ್ರಾನಿಕ್ಸ್ ಸಿಟಿ, ಕೋನಪ್ಪನ ಅಗ್ರಹಾರ, ಹೊಸರೋಡ್, ಕಸವನಹಳ್ಳಿ, ಕೈಕೊಂಡ್ರಹಳ್ಳಿ, ದೊಡ್ಡಕನ್ನಲ್ಲಿ | 04 | 32 |
2 | MF-22A | ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್
ಬಿಡುವ ವೇಳೆ: 0840, 0920, 0945, 1030, 1225, 1250, 1255, 1320, 1540, 1605, 1620, 1650 |
ಕೊಡತಿ ವಿಪ್ರೋ
ಬಿಡುವ ವೇಳೆ: 0805, 0835, 1025, 1100, 1125, 1155, 1350, 1420, 1440, 1510, 1705, 1735 |
ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಹುಸ್ಕೂರು ಗೇಟ್, ಚಿಂತಲ ಮಡಿವಾಳ, ಮುತ್ತಾನಲ್ಲೂರು ಕ್ರಾಸ್, ತಿಮ್ಮಸಂದ್ರ ಕ್ರಾಸ್ , ಚಂದಾಪುರ ಕ್ರಾಸ್ | 04 | 24 |
3 | MF-22B | ಬೊಮ್ಮಸಂದ್ರ (ಚಕ್ರ ಮಾರ್ಗ)
ಬಿಡುವ ವೇಳೆ: 0830, 0900, 0925, 0955, 1045, 1115, 1140, 1210, 1230, 1300, 1340, 1410, 1435, 1505, 1530, 1600, 1640, 1710, 1735, 1805
|
ಬೊಮ್ಮಸಂದ್ರ, ತಿರುಪಾಳ್ಯ ಕ್ರಾಸ್, ಎಸ್-ಮಾಂಡೋ-3, ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಗೋಡಿ, ಬೊಮ್ಮಸಂದ್ರ | 02 | 20 | |
4 | MF-22C | ಕೋನಪ್ಪನ ಅಗ್ರಹಾರ ( ಚಕ್ರ ಮಾರ್ಗ)
ಬಿಡುವ ವೇಳೆ: 0825, 0855, 0920, 0950, 1035, 1105, 1125, 1155, 1215, 1245, 1340, 1405, 1430, 1455, 1525, 1550, 1645, 1710, 1740, 1805
|
ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೋ ಗೇಟ್, ಎಸ್-ಮಾಂಡೋ-3, ತಿರುಪಾಳ್ಯ ಕ್ರಾಸ್, ಬೊಮ್ಮಸಂದ್ರ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೋನಪ್ಪನ ಅಗ್ರಹಾರ | 02 | 20 |