ಬೆಂಗಳೂರು: ನಗರದ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಈ ನೂತನ ಮಾರ್ಗದಲ್ಲಿ ಹೊಸದಾಗಿ ಹವಾನಿಯಂತ್ರಿತ ಎಲೆಕ್ಟ್ರಿಕ್ ವಜ್ರ ವೇಗದೂತ (Express Service) ಬಸ್ ಸಂಚಾರವನ್ನು ಆರಂಭಿಸಲಾಗುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ, ಕೆಂಪೇಗೌಡ ಬಸ್ ನಿಲ್ದಾಣದಿಂದ ಸೆಂಟ್ರಲ್ ಟಾಕೀಸ್, ಮಲ್ಲೇಶ್ವರ್ಂ 8ನೇ ಕ್ರಾಸ್, ಗೋವರ್ಧನ ಟಾಕೀಸ್, ಗೊರಗುಂಟೆಪಾಳ್ಯ, ಅರಶಿನಕುಂಟೆ ಮಾರ್ಗವಾಗಿ ನೆಲಮಂಗಲ ಬಸ್ ನಿಲ್ದಾಣಕ್ಕೆ Express (Limited Stop) ಸೇವೆಗಳನ್ನು ದಿನಾಂಕ 03.11.2025 ರಿಂದ ಜಾರಿಗೆ ಬರುವಂತೆ ಮಾರ್ಗಸಂಖ್ಯೆ ವಿ-258ಸಿ ರಲ್ಲಿ 06 ಹವಾನಿಯಂತ್ರಿತ ಎಲೆಕ್ಟ್ರಿಕ್ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತದೆ.
ಹೀಗಿದೆ ಮಾರ್ಗದ ವೇಳಾ ಪಟ್ಟಿ ವಿವರಗಳು
| ಮಾರ್ಗಸಂಖ್ಯೆ ವಿ-258ಸಿ ವೇಳಾಪಟ್ಟಿ (ನಿರ್ಗಮನ ಸಮಯ) | ||
| ಕೆಂಪೇಗೌಡ ಬಸ್ ನಿಲ್ದಾಣ | ಮಾರ್ಗ | ನೆಲಮಂಗಲ ಬಸ್ ನಿಲ್ದಾಣ | 
| 0600, 0640, 0710, 0740, 0820, 0850, 0930, 1005, 1035, 1105, 1205, 1305, 1440, 1530, 1600, 1630, 1700, 1730, 1800, 1850, 1940, 2040 | ಸೆಂಟ್ರಲ್ ಟಾಕೀಸ್, ಮಲ್ಲೇಶ್ವರ್ಂ 8ನೇ ಕ್ರಾಸ್, ಗೋವರ್ಧನ ಟಾಕೀಸ್, ಗೊರಗುಂಟೆಪಾಳ್ಯ, ಅರಶಿನಕುಂಟೆ | 0735, 0810, 0845, 0915, 0955, 1025, 1110, 1140, 1210, 1240, 1400, 1500, 1620, 1705, 1735, 1805, 1835, 1910, 2000, 2040, 2120, 2200 | 
ಬೇರುಮಟ್ಟದಲ್ಲಿ ನೌಕರರೇ ಸರ್ಕಾರವಿದ್ದಂತೆ, ಪಂಚ ತತ್ವಗಳ ಅಡಿಯಲ್ಲಿ ಕೆಲಸ ಮಾಡಬೇಕು: ಸಚಿವ ಪ್ರಿಯಾಂಕ್ ಖರ್ಗೆ
BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ ನಿಗದಿ
 
		



 




