ಬೆಂಗಳೂರು: ಯಜಮಾನಿ ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆಯ ಜೂನ್ ತಿಂಗಳ ಹಣವಷ್ಟೇ ಜಮಾ ಮಾಡಲಾಗಿದೆ. ಜುಲೈ ತಿಂಗಳ ಹಣವನ್ನು ಜಮಾ ಮಾಡಿಲ್ಲ. ಅಲ್ಲದೇ ಆಗಸ್ಟ್ ತಿಂಗಳ ಹಣ ಕೂಡ ವರ್ಗಾವಣೆ ಮಾಡುವುದಿದೆ. ಇದೀಗ ಗೃಹ ಲಕ್ಷ್ಮೀ ಯೋಜನೆಯ ಹಣ ಜಮಾ ವಿಳಂಬದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಗ್ ಅಪ್ ಡೇಟ್ ನೀಡಿದ್ದಾರೆ. ಆ ಬಗ್ಗೆ ಮುಂದೆ ಓದಿ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಪ್ರತಿ ತಿಂಗಳು ಗೃಹ ಲಕ್ಷ್ಮೀ ಯೋಜನೆಗಾಗಿ ರೂ.2,400 ಕೋಟಿ ಖರ್ಚಾಗುತ್ತಿದೆ. ಮಂಡ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಬಾಕಿ ಹಣ ವರ್ಗಾವಣೆಗೆ ಡಿಪಿಟಿಗೆ ಪುಷ್ ಮಾಡಲಾಗಿತ್ತು. ಆದರೇ ಮೂರು ದಿನಗಳು ಆದರೂ ಕೆಲವರಿಗೆ ಹಣ ವರ್ಗಾವಣೆಯಾಗಿಲ್ಲ ಎಂದರು.
ಕೆಲವು ಜಿಲ್ಲೆಗಳ ಯಜಮಾನಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆ ಹಣ ಜಮಾ ಮಾಡಲಾಗಿದೆ. ಬಾಕಿ ಜಮಾ ಆಗದಂತ ಯಜಮಾನಿಯರ ಖಾತೆಗೆ ಇನ್ನೂ ನಾಲ್ಕೈದು ದಿನಗಳಲ್ಲಿ ಆಗಲಿದೆ. ಅವರಿಗೆ ಜಮಾ ಮಾಡೋದಕ್ಕೆ ಬ್ಯಾಂಕ್ ಗಳಿಗೂ ಕಳಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಜೂನ್ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಜುಲೈ ತಿಂಗಳ ಹಣ ಮಾತ್ರ ಕೆಲವರಿಗೆ ಬಾಕಿ ಇದೆ. ಆ ಹಣವನ್ನು ಇನ್ನೆರಡು ದಿನಗಳಲ್ಲಿ ಯಜಮಾನಿಯರ ಖಾತೆಗೆ ಜಮಾ ಮಾಡಲಾಗುತ್ತದೆ. ಇದಲ್ಲದೇ ಆಗಸ್ಟ್ ತಿಂಗಳ ಹಣವನ್ನು ಕೂಡ ಯಜಮಾನಿಯರ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ತಿಳಿಸಿದರು.
ಹಣ ಜಮಾ ಆಗೋದಕ್ಕೆ ತಡವಾಗುತ್ತಿರುವುದಕ್ಕೆ ದೊಡ್ಡ ಮೊತ್ತದ ಹಣ ಆಗಿರುವುದೇ ಕಾರಣವಾಗಿದೆ. ಹಣ ದೊರೆಯದಂತ ಯಜಮಾನಿಯರ ಖಾತೆಗೆ ಇನ್ನೆರಡು ದಿನಗಳಲ್ಲಿ ಜಮಾ ಆಗಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.