ಬೆಂಗಳೂರು: ರಾಜ್ಯ ಸರ್ಕಾರದಿಂದ ಎನ್ ಹೆಚ್ ಎಂ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಹೊರ ಬಿದ್ದಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಸೇವೆಯನ್ನು 2025-26ನೇ ಸಾಲಿಗೆ ಮುಂದುವರೆಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಇಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರು ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಅದರಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ ಅನುಷ್ಠಾನ ಯೋಜನೆ (ಆರ್.ಓ.ಪಿ) ಉಲ್ಲೇಖ (1) ರಂತೆ ಅನುಮೋದನೆಯಾಗಿದ್ದು, ಈ ಹಿಂದೆ ಅನುಸರಿಸಿದ ಪದ್ಧತಿಯಂತೆ ಪ್ರಸ್ತುತ ಜಾರಿಯಲ್ಲಿರುವ ಕಾರ್ಯಕ್ರಮಗಳು / ಚಟುವಟಿಕೆಗಳು ಅನುಷ್ಠಾನಕ್ಕೆ ತೊಂದರೆ ಆಗದಂತೆ ಕ್ರಮವಹಿಸುವ ಸಲುವಾಗಿ ಎಲ್ಲಾ ರಾಜ್ಯ / ಕೇಂದ್ರಾಡಳಿತ ಹಾಗೂ ಜಾರಿಯಲ್ಲಿರುವ ಕಾರ್ಯಕ್ರಮಗಳು / ಚಟುವಟಿಕೆಗಳನ್ನು ಎನ್.ಹೆಚ್.ಎಂ ಅಡಿಯಲ್ಲಿ 2025-26ನೇ ಸಾಲಿನಲ್ಲಿ ಮಾರ್ಗಸೂಚಿ ಮತ್ತು ನಿಬಂಧನೆಯೊಂದಿಗೆ ಮುಂದುವರೆಸಲು ಅನುಮತಿ ನೀಡಲಾಗಿದೆ ಎಂದಿದ್ದಾರೆ.
2024-25ನೇ ಸಾಲಿನಲ್ಲಿನ ನಿಬಂಧನೆಯಂತೆ ಮಾನವ ಸಂಪನ್ಮೂಲ ಸಿಬ್ಬಂದಿಯ ಪರಿಷ್ಕೃತ ಕಾರ್ಯಕ್ಷಮತೆ ಮೌಲ್ಯಮಾಪನ ಪಟ್ಟಿಯನ್ವಯ ಕಾರ್ಯಸಾಧನೆಯನ್ನು ಪರಾಮರ್ಶಿಸಿ ಪಡೆದ ಒಟ್ಟು ಶೇಕಡವಾರು ಆಧಾರದನ್ವಯ 2025-26ನೇ ಸಾಲಿಗೆ ಮುಂದುವರೆಸಲು ಸೂಚಿಸಲಾಗಿದೆ.
ಕಾರ್ಯಕ್ಷಮತೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ದಕ್ಷತೆಯನ್ನು ತರಲು ಕಾರ್ಯಕ್ಷಮತೆಯ ಮೌಲ್ಯಮಾಪನದಲ್ಲಿ ಸೂಚಿಸಿದ ಕಾರ್ಯಕ್ರಮಾಧಿಕಾರಿಗಳು ಜಿಲ್ಲಾ/ರಾಜ್ಯ ಮಟ್ಟದಲ್ಲಿ ಕ್ರಮವಹಿಸಿದ್ದು, ಸಿಬ್ಬಂದಿಗಳು ಪಡೆದ ಒಟ್ಟು ಶೇಕಡವಾರು ಆಧಾರದನ್ವಯ ಸೇವಾ ಅವಧಿಯನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮ ನಿರ್ವಹಣಾ ಮತ್ತು ಸೇವಾ ವಿತರಣಾ ಸಿಬ್ಬಂದಿಗಳ ಕಾರ್ಯಕ್ಷಮತೆ ಮೌಲ್ಯಮಾಪನದಲ್ಲಿ ಪಡೆದ ಅಂಕಗಳನ್ವಯ ಹಾಗೂ ರಾಜ್ಯ ಸಮಿತಿ ಅನುಮೋದನೆಯಂತೆ ಸೇವಾವಧಿ ವಿಸ್ತರಣೆಯನ್ನು ಈ ಕೆಳಗಿನಂತೆ ನೀಡಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಒಂದು ದಿನದ ವಿರಾಮ ನೀಡಿ, ದಿನಾಂಕ: 02.08.2025 ರಿಂದ ದಿನಾಂಕ: 31.03.2026 ಹಾಗೂ ಅತೃಪ್ತಿಕರ (Unsatisfactory) ಕಾರ್ಯಕ್ಷಮತೆ ಹೊಂದಿದ ಸಿಬ್ಬಂದಿಗಳಿಗೆ ಮೂರು ತಿಂಗಳ ಸೇವಾ ಅವಧಿಯನ್ನು 02.08.2025 ರಿಂದ 31.10.2025ರವರೆಗೆ ನಿಯಾಮಾನುಸಾರ ರಾಷ್ಟ್ರೀಯ ಆರೋಗ್ಯ ಅಭಿಯಾನದ ಷರತ್ತುಗಳನ್ವಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಅನುಮೋದನೆಯೊಂದಿಗೆ ಆದೇಶ ಹೊರಡಿಸಲು ಸೂಚಿಸಿದೆ.
ಈ ಸುತ್ತೋಲೆಯು ಹೊರಗುತ್ತಿಗೆ ಆಧಾರದ ಮೇಲೆ (Outsource) ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ. ಮುಂದುವರೆದು, ಸದರಿ ಸುತ್ತೋಲೆಯು NHM ವತಿಯಿಂದ ಕೋವಿಡ್-19ಗಾಗಿ ತಾತ್ಕಾಲಿಕವಾಗಿ ನೇಮಕಾತಿಗೊಂಡಿರುವ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.
ರಾಜ್ಯ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ ನೌಕರರ ಹಿತವನ್ನು ಕಾಯುವ ನಿಟ್ಟಿನಲ್ಲಿ NHM ಸಿಬ್ಬಂದಿಗಳನ್ನು ಮುಂದುವರೆಸಿದ ಆದೇಶವನ್ನು ಸರಕಾರ ಹೊರಡಿಸಿದೆ. ಈ ಕಾರ್ಯವನ್ನು ಮಾಡಿದಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ, ಅಭಿಯಾನ ನಿರ್ದೇಶಕರಿಗೆ ಹಾಗೂ ಇತರೆ ಅಧಿಕಾರಿಗಳಿಗೆ KSHCOEA BMS ಸಂಘದ ರಾಜ್ಯಾಧ್ಯಕ್ಷರಾದ ಶ್ರೀಕಾಂತ ಸ್ವಾಮಿ ಧನ್ಯವಾದವನ್ನು ಸಲ್ಲಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಧರ್ಮಸ್ಥಳ ಕೇಸ್: ಅನಾಮಿಕ ಕೊಟ್ಟ ‘ತಲೆ ಬುರುಡೆ’ ಬಗ್ಗೆ ತನಿಖೆ ಏಕಿಲ್ಲ- ಹೈಕೋರ್ಟ್ ವಕೀಲರ ಪ್ರಶ್ನೆ
BREAKING: ಸಾಗರದ ತಾಯಿ-ಮಕ್ಕಳ ಆಸ್ಪತ್ರೆಯ ‘ಜನರೇಟರ್ ಕದ್ದೊಯ್ದ’ವರ ವಿರುದ್ಧ ‘FIR’ ದಾಖಲು