ಬೆಂಗಳೂರು : ರಾಜ್ಯದ ರೈತರಿಗೆ ಬರ ಪರಿಹಾರ ನೀಡುವ ಪ್ರಕ್ರಿಯೆ ಶುರುವಾಗಿದ್ದು, ಈ ನಡುವೆ ರಾಜ್ಯ ಸರ್ಕಾರವು ರೈತರಿಗೆ ಮಹತ್ವದ ಸೂಚನೆಯನ್ನು ನೀಡಿದೆ.
ರಾಜ್ಯದ ರೈತರಿಗೆ ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ ರಾಜ್ಯ ಸರ್ಕಾರದಿಂದ 2 ಸಾವಿರ ರೂ.ಗಳನ್ನು ಒದಗಿಸಲಾಗಿದೆ. ಆಧಾರ್ ಲಿಂಕ್ ಮಾಡಿದ ನಂತರ ಪರಿಹಾರದ ಹಣ ರೈತರಿಗೆ ತಲುಪಲಿದೆ. ಆಧಾರ್ ಲಿಂಕ್ ಆಗದ ರೈತರು ತಕ್ಷಣ ಲಿಂಕ್ ಮಾಡಿಸಬೇಕು ಅಂತ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಇದೇ ವೇಳೆ ಅವರು ಮಾತನಾಡಿಬೆಳೆನಷ್ಟಕ್ಕೆ ತಾತ್ಕಾಲಿಕವಾಗಿ 2 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ. ಅದನ್ನು ಶೀಘ್ರವೇ ಪಾವತಿ ಮಾಡಲಾಗುವುದು. ಸದ್ಯಕ್ಕೆ ಖಾತೆಗಳಿಗೆ ಆಧಾರ್ ಲಿಂಕ್ ಜೋಡಣೆಯಾಗಬೇಕಿರುವುದರಿಂದ ತಡವಾಗುತ್ತಿದೆ ಎಂದು ಹೇಳಿದರು. ಇನ್ನೂ ರಾಮಮಂದಿರ ಉದ್ಘಾಟನೆಯ ದಿನ ಸರ್ಕಾರಿ ರಜೆ ಘೋಷಣೆ ಮಾಡಬೇಕೆನ್ನುವ ಘೋಷಣೆಯನ್ನು ಮುಖ್ಯಮಂತ್ರಿ ತಳ್ಳಿಹಾಕಿದರು. ಕಾರ್ಯಕ್ರಮ ಮಾಡುತ್ತಿರುವುದು ಕೇಂದ್ರ ಸರ್ಕಾರ. ಅವರೇ ಸರ್ಕಾರದ ರಜೆ ಘೋಷಣೆ ಮಾಡಲಿ ಎಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದ ರೈತರಿಗೆ ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ ರಾಜ್ಯ ಸರ್ಕಾರದಿಂದ 2 ಸಾವಿರ ರೂ.ಗಳನ್ನು ಒದಗಿಸಲಾಗಿದೆ. ಆಧಾರ್ ಲಿಂಕ್ ಮಾಡಿದ ನಂತರ ಪರಿಹಾರದ ಹಣ ರೈತರಿಗೆ ತಲುಪಲಿದೆ. ಆಧಾರ್ ಲಿಂಕ್ ಆಗದ ರೈತರು ತಕ್ಷಣ ಲಿಂಕ್ ಮಾಡಿಸಬೇಕು.
– ಮುಖ್ಯಮಂತ್ರಿ @siddaramaiah #ಬರಪರಿಹಾರ…— CM of Karnataka (@CMofKarnataka) January 2, 2024