ಬೆಂಗಳೂರು : 2023-24 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಒಳಗೊಂಡಂತೆ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರುಗಳಿಗೆ ಆಗಸ್ಟ್, 02 ರಿಂದ 12 ರವರೆಗೆ ಮೈಸೂರು ವಿಭಾಗ ಮಟ್ಟದ ‘ವಿಭಾಗದೊಳಗಿನ ಅಂತರ್ ಜಿಲ್ಲಾ ಕೋರಿಕೆ/ ಪರಸ್ಪರ ವರ್ಗಾವಣೆಯ ಆನ್ಲೈನ್ ಕೌನ್ಸಿಲಿಂಗ್ (ಖಔಗಓಆ ಖಔಃಓ) ಮಾದರಿಯಲ್ಲಿ ಸ್ಥಳ ನಿಯುಕ್ತಿಗೊಳಿಸಬೇಕಿದೆ.
ಅದರಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ಮೈಸೂರು ವಿಭಾಗದೊಳಗಿನ ಅಂತರ್ ಜಿಲ್ಲಾ ಕೋರಿಕೆ /ಪರಸ್ಪರ ವಗರ್ಾವಣೆಯ ಕೌನ್ಸ್ಲಿಂಗ್ (ಖಔಗಓಆ ಖಔಃಓ) ಮಾದರಿಯಲ್ಲಿ ಆಗಸ್ಟ್, 02 ರಿಂದ ಆಗಸ್ಟ್, 12 ರವರೆಗೆ ಬೆಳಗ್ಗೆ 9.30 ಗಂಟೆಯಿಂದ ಶಾಲಾ ಶಿಕ್ಷಣ ಇಲಾಖೆಯ ಉಪ ನಿದರ್ೇಶಕರು(ಆಡಳೀತ) ಕಚೇರಿಯಲ್ಲಿ ನಡೆಯಲಿದೆ.
ವೇಳಾಪಟ್ಟಿ ಅನುಸಾರ ಸಂಬಂಧಿಸಿದ ಶಿಕ್ಷಕರು ನಿಗಧಿತ ದಿನಾಂಕದಂದು ಕೌನ್ಸೆಲಿಂಗ್ಗೆ ಸಮಯಕ್ಕೆ ಸರಿಯಾಗಿ ಸೂಕ್ತ ದಾಖಲಾತಿಗಳೊಂದಿಗೆ ತಪ್ಪದೇ ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿದರ್ೇಶಕರಾದ ರಂಗಧಾಮಪ್ಪ ಅವರು ತಿಳಿಸಿದ್ದಾರೆ.
ಕೋರಿಕೆ ವಗರ್ಾವಣೆ: ಆಗಸ್ಟ್, 02 ರಂದು ಪ್ರಾಥಮಿಕ ಶಾಲಾ ವಿಭಾಗದ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು. ಪರಸ್ಪರ ವಗರ್ಾವಣೆ: ಆಗಸ್ಟ್, 03 ರಂದು ಸಹ ಶಿಕ್ಷಕರು.
ಕೋರಿಕೆ ವರ್ಗಾವಣೆ: ಆಗಸ್ಟ್, 06 ರಂದು ಪ್ರೌಢಶಾಲಾ ವಿಭಾಗದ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಸಹ ಶಿಕ್ಷಕರು, ಆಗಸ್ಟ್, 07 ರಂದು ಸಹ ಶಿಕ್ಷಕರು, ಆಗಸ್ಟ್, 8 ರಂದು ಸಹ ಶಿಕ್ಷಕರು. ಪರಸ್ಪರ ವಗರ್ಾವಣೆ: ಆಗಸ್ಟ್, 12 ರಂದು ಸಹ ಶಿಕ್ಷಕರು ಹಾಜರಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿದರ್ೇಶಕರಾದ ರಂಗಧಾಮಪ್ಪ ಅವರು ತಿಳಿಸಿದ್ದಾರೆ.
Top of Form