ಬೆಂಗಳೂರು : ರಾಜ್ಯದಲ್ಲಿ ಡಿಪ್ಲೋಮ ವ್ಯಾಸಂಗ ಪೂರ್ಣಗೊಳಿಸಿ ಉತ್ತೀರ್ಣರಾಗಿರುವ ಅರ್ಹ ವಿದ್ಯಾರ್ಥಿಗಳ ಉದ್ಯೋಗಾವಕಾಶದ ಬಗ್ಗೆ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಡಿಪ್ಲೋಮ ವ್ಯಾಸಂಗ ಪೂರ್ಣಗೊಳಿಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ Uniforce Technologies Consulting Pvt Ltd. Bengaluru d Toyota Kirloskar ಕಂಪನಿಯ ಬೆಂಗಳೂರು ಶಾಖೆಯಲ್ಲಿ ಉದ್ಯೋಗವಕಾಶ ಕಲ್ಪಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಪಾಲಿಟೆಕ್ನಿಕ್ ಸಂಸ್ಥೆಗಳ Placement Officer ಗಳು ಈ ಕೆಳಕಂಡ ಡಿಪ್ಲೋಮ ಪ್ರೊಗ್ರಾಮ್ ಗಳಲ್ಲಿ ಡಿಪ್ಲೋಮ ವ್ಯಾಸಂಗ ಪೂರ್ಣಗೊಳಿಸಿ ಉತ್ತೀರ್ಣರಾಗಿರುವ ಅರ್ಹ ವಿದ್ಯಾರ್ಥಿಗಳ (ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳುಳ್ಳ) ವಿವರವಾದ ಪಟ್ಟಿಯನ್ನು prakashsjep@gmail.com, Pavithra@uftech.com,gayathri@uftech.com, ಮಿಂಚಂಚೆ ವಿಳಾಸಗಳಿಗೆ ಶೀಘ್ರವಾಗಿ ಕಳುಹಿಸುವಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಸಂಸ್ಥೆಗಳ ಪ್ರಾಂಶುಪಾಲರುಗಳಿಗೆ ಸೂಚಿಸಲಾಗಿದೆ.