ಬೆಂಗಳೂರು : ಮಕ್ಕಳು ಸುಲಭವಾಗಿ ಕನ್ನಡದೊಂದಿಗೆ ಆಂಗ್ಲ ಭಾಷೆಯನ್ನೂ ಕಲಿಯಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ದ್ವಿಭಾಷಾ ನಿಘಂಟು ಅನ್ನು ಪರಿಚಯಿಸಿದೆ.
ವಿದ್ಯಾರ್ಥಿಗಳು ಕನ್ನಡ ಅಥವಾ ಇಂಗ್ಲಿಷ್ ಕಲಿಯುವಾಗ, ಕನ್ನಡದಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಯಾವುದೇ ಪದದ ಅರ್ಥವನ್ನು ತಿಳಿಯಲು ಈ ದ್ವಿಭಾಷಾ ನಿಘಂಟನ್ನು ಬಳಸಬಹುದು. ಮಕ್ಕಳಲ್ಲಿ ಶಬ್ಧ ಸಂಪತ್ತು ಮತ್ತು ಭಾಷಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹಾಗೂ ಎರಡೂ ಭಾಷೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ.
1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿರುವ ನಿಘಂಟಿಗಾಗಿ ಈ ಕೆಳಗಿನ ಪೋಸ್ಟರ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.