Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬೆಟ್ಟಿಂಗ್ ಪ್ರಕರಣ: ಗೂಗಲ್, ಮೆಟಾಗೆ ಇಡಿ ನೋಟಿಸ್ | Betting app cases

19/07/2025 10:10 AM

BREAKING : ಕನ್ನಡಧ್ವಜಕ್ಕೆ ಮತ್ತೆ ಹಕ್ಕು ಮಂಡಿಸಿದ ರಾಜ್ಯ ಸರ್ಕಾರ : ಕನ್ನಡ ಬಾವುಟಕ್ಕೆ ಮಾನ್ಯತೆ ಕೊಡುವಂತೆ ಪತ್ರ.!

19/07/2025 10:10 AM

ಅತ್ಯಾಚಾರ ಆರೋಪಿಗಳು ರಕ್ತದ ಮಾದರಿ ನೀಡಲು ನಿರಾಕರಿಸಿದರೆ ಪೊಲೀಸರು ಬಲಪ್ರಯೋಗ ಮಾಡಬಹುದು: ದೆಹಲಿ ಹೈಕೋರ್ಟ್

19/07/2025 10:06 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ : ಉಚಿತ ಶೂ, ಸಾಕ್ಸ್‌ ವಿತರಣೆಗೆ ರಾಜ್ಯ ಸರ್ಕಾರ ಆದೇಶ
KARNATAKA

ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ : ಉಚಿತ ಶೂ, ಸಾಕ್ಸ್‌ ವಿತರಣೆಗೆ ರಾಜ್ಯ ಸರ್ಕಾರ ಆದೇಶ

By kannadanewsnow5730/05/2024 5:48 AM

ಬೆಂಗಳೂರು : 2024-25ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತವಾಗಿ ಒದಗಿಸಲಾಗುತ್ತಿರುವ ಶೂ ಮತ್ತು ಸಾಕ್ಸ್ ಖರೀದಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

2024-25ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲ್ಪಡುತ್ತಿರುವ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 42.65 ಲಕ್ಷ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಒಟ್ಟು ರೂ.121.00 ಕೋಟಿಗಳ ವೆಚ್ಚದಲ್ಲಿ ಉಚಿತವಾಗಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ಅಥವಾ ಪಾದರಕ್ಷೆ ಏತರಿಸಬೇಕಾಗಿದೆ.

ಷರತ್ತುಗಳು:-

1. ಅರ್ಹ ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆ ದಾಖಲಿಸಿ, ಉತ್ತಮ ಗುಣಮಟ್ಟದ ಪಾದರಕ್ಷೆಯನ್ನು ಸ್ಥಳೀಯವಾಗಿ ಖರೀದಿಸಿ, ವಿತರಣೆ ಮಾಡುವ ಜವಾಬ್ದಾರಿಯನ್ನು ಸಂಬಂಧಿಸಿದ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ)ಗೆ ವಹಿಸುವುದು.

2. ಒಂದು ಜೊತೆ ಕಪ್ಪು ಬಣ್ಣದ ಶೂ ಗಳನ್ನು ಹಾಗೂ ಎರಡು ಜೊತೆ ಬಿಳಿ ಬಣ್ಣದ ಸಾಕ್ಸ್ಗಳನ್ನು ಖರೀದಿಸಿ ವಿತರಿಸುವುದು. ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಶೂ ಮತ್ತು ಸಾಕ್ಸ್ ಗಳ ಬದಲಾಗಿ ಪಾದರಕ್ಷೆಗಳನ್ನು ಖರೀದಿಸಿ ವಿತರಿಸುವುದು.
3. ಶೂ ಮತ್ತು ಸಾಕ್ಸ್ಗಳ ಖರೀದಿ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಎಸ್.ಡಿ.ಎಂ.ಸಿ.ಯು ಕೆಳಕಂಡಂತೆ ಖರೀದಿ ಸಮಿತಿಯನ್ನು ರಚಿಸತಕ್ಕದ್ದು.
4. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಸಭೆ ನಡೆಸಿ ಶೂ ಮತ್ತು ಸಾಕ್ಸ್ ಅಥವಾ ಪಾದರಕ್ಷೆ ಖರೀದಿ ಸಮಿತಿಯ ಸದಸ್ಯರನ್ನು ಆಯ್ಕೆಗೊಳಿಸಬೇಕು. ಈ ಉದ್ದೇಶಕ್ಕಾಗಿ ನಡೆಸುವ ಎಸ್.ಡಿ.ಎಂ.ಸಿ. ಸಭೆಯಲ್ಲಿ ಕನಿಷ್ಟ ಅರ್ಧದಷ್ಟು ಸದಸ್ಯರು ಹಾಜರಿರತಕ್ಕದ್ದು ಹಾಗೂ ಸಮಿತಿಯ ನಡಾವಳಿಯನ್ನು ವಲಯ ಸಂಪನ್ಮೂಲ ವ್ಯಕ್ತಿಗಳು ಅಥವಾ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು (ಬಿ.ಆರ್.ಪಿ ಅಥವಾ ಸಿ.ಆರ್.ಪಿ) ಇಲಾಖೆಯ ಅಂತರ್ಜಾಲ ತಾಣದಲ್ಲಿ ದಾಖಲಿಸತಕ್ಕದ್ದು.
5. ಹೆಚ್ಚಿನ ಶಾಲೆಗಳಲ್ಲಿ ಖರೀದಿ ವೆಚ್ಚವು ಐದು ಲಕ್ಷಕ್ಕಿಂತ ಕಡಿಮೆ ಆಗುವುದರಿಂದ ಅಂತಹ ಶಾಲೆಗಳು ಮೂರು ಸಂಸ್ಥೆಗಳಿಂದ ಕೊಟೇಶನ್ ಪಡೆದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮದ ಪ್ರಕಾರವಾಗಿ(ಕೆ.ಟಿ.ಟಿ.ಪಿ ಆಕ್ಟ್ 1999) ಖರೀದಿ ಪ್ರಕ್ರಿಯೆಯನ್ನು ನಿರ್ವಹಿಸುವುದು. ಕನಿಷ್ಠ ಮೂರು ಸಂಸ್ಥೆಗಳಿಂದ ದರಪಟ್ಟಿಗಳನ್ನು ಹೊಂದಿರಲೇಬೇಕು. ಖರೀದಿ ಮಾಡುವಂತಹ ಸಂಸ್ಥೆಯು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೋಂದಣಿಯಾಗಿರಬೇಕು ಹಾಗೂ ಜಿಎಸ್‌ಟಿ ಸಂಖ್ಯೆ ಹೊಂದಿರಬೇಕು.

6. ಶೂ ಗಳ ಮೇಲ್ಪದರು ಪಾಲಿವಿನೈಲ್ 1ಪಿ.ವಿ.ಸಿ] ಕೋಟೆಡ್ ವಿಸ್ಕೋಸ್/ಪಾಲಿಯೆಸ್ಟರ್/ ಪಾಲಿಯೆಸ್ಟರ್ ಕಾಟನ್ ಫ್ಯಾಬ್ರಿಕ್ 1.5 ಎಂಎಂ ಹೊಂದಿದ ಮತ್ತು ಎಕ್ಸೆಂಡೆಡ್ ಪಾಲಿವಿನೈಲ್ ಕ್ಲೋರೈಡ್ 1ಪಿ.ವಿ.ಸಿ1 ಸೋಲ್ ಹೊಂದಿದ ಹಾಗೂ ಪಾದರಕ್ಷೆಯ ಒಳಪದರು (Insock) ಬಟ್ಟೆ/ಫ್ಯಾಬ್ರಿಕ್‌ನಿಂದ ಕೂಡಿರುವುದನ್ನು (ಅಂದಾಜು 0.8 ಎಂ.ಎಂ ದಪ್ಪ) ಖರೀದಿಸುವುದು. ಎಸ್.ಡಿ.ಎಂ.ಸಿ.ಗಳು ಪಾದರಕ್ಷೆಗಳನ್ನು ಖರೀದಿಸಲು ತೀರ್ಮಾನಿಸಿದಲ್ಲಿ ವೆಲ್‌ಕ್ರೋ ಪಾದರಕ್ಷೆಗಳನ್ನು (Velcro Sandals) ಮತ್ತು ಲೈನಿಂಗ್ ಸಾಕ್ಸ್ ಖರೀದಿಸಿ ವಿತರಿಸುವುದು.

7. ಪ್ರತಿಯೊಂದು ತಾಲ್ಲೂಕಿನಲ್ಲಿ ಕನಿಷ್ಠ ಶೇ.5ರಷ್ಟು ಶಾಲೆಗಳಲ್ಲಿನ ಶೂ ಮತ್ತು ಸಾಕ್ಸ್ ಗುಣಮಟ್ಟವನ್ನು ಯಾದೃಚ್ಚಿಕವಾಗಿ ಪರೀಕ್ಷಿಸಲು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಒಂದು ಸಮಿತಿಯನ್ನು ರಚಿಸಲು ಕ್ರಮಕೈಗೊಳ್ಳುವುದು.

8. ಹಿಂದಿನ ಸಾಲುಗಳಲ್ಲಿ ಕಳಪೆ ಗುಣಮಟ್ಟದ ಮತ್ತು ನಕಲಿ ಬ್ರಾಂಡೆಡ್ ಶೂ ಮತ್ತು ಸಾಕ್ಸ್ ಸರಬರಾಜಾಗಿರುವ ಬಗ್ಗೆ ಸರ್ಕಾರದ ಹಂತದಲ್ಲಿ ಸಾಕಷ್ಟು ದೂರುಗಳು ಸ್ವೀಕೃತವಾಗಿರುತ್ತವೆ. ಆದ್ದರಿಂದ ಪ್ರಸ್ತುತ ಸಾಲಿನಲ್ಲಿ ಜಾಗರೂಕತೆಯಿಂದ ಪರಿಶೀಲಿಸಿ, ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರಾಂಡ್‌ಗಳ ಅಧಿಕೃತ ಮಾರಾಟಗಾರರಿಂದ ISO CERTIFIED ಶೂ ಮತ್ತು ಸಾಕ್ಸ್ ಅಥವಾ ಪಾದರಕ್ಷೆಗಳನ್ನು ಖರೀದಿಸತಕ್ಕದ್ದು. ಅನಧಿಕೃತ ಮಾರಾಟಗಾರರಿಂದ ನಕಲಿ ಬ್ರಾಂಡ್/ಕಳಪೆ ಗುಣಮಟ್ಟದ ಶೂ ಮತ್ತು ಸಾಕ್ಸ್ ಅಥವಾ ಪಾದರಕ್ಷೆಗಳನ್ನು ಖರೀದಿಸಿರುವ ಬಗ್ಗೆ ದೂರುಗಳು ವರದಿಯಾದಲ್ಲಿ ತಪಾಸಣೆಗೆ ಒಳಪಡಿಸಿ ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರು/ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವುದು.

 

Good news for students of classes 1-10: State government orders distribution of free shoes socks ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ : ಉಚಿತ ಶೂ ಸಾಕ್ಸ್‌ ವಿತರಣೆಗೆ ರಾಜ್ಯ ಸರ್ಕಾರ ಆದೇಶ
Share. Facebook Twitter LinkedIn WhatsApp Email

Related Posts

BREAKING : ಕನ್ನಡಧ್ವಜಕ್ಕೆ ಮತ್ತೆ ಹಕ್ಕು ಮಂಡಿಸಿದ ರಾಜ್ಯ ಸರ್ಕಾರ : ಕನ್ನಡ ಬಾವುಟಕ್ಕೆ ಮಾನ್ಯತೆ ಕೊಡುವಂತೆ ಪತ್ರ.!

19/07/2025 10:10 AM1 Min Read

`WhatsApp’ ನಲ್ಲಿ ಡಿಲೀಟ್ ಆದ ಮೆಸೇಜ್ ಓದುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

19/07/2025 9:50 AM2 Mins Read

ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಬೀಳಲಿದೆ ಬ್ರೇಕ್ : ಮುಂದಿನ ಅಧಿವೇಶನದಲ್ಲಿ `ಕಾಯ್ದೆ’ ಜಾರಿಗೆ ಸರ್ಕಾರ ಸಿದ್ಧತೆ

19/07/2025 9:24 AM1 Min Read
Recent News

BREAKING: ಬೆಟ್ಟಿಂಗ್ ಪ್ರಕರಣ: ಗೂಗಲ್, ಮೆಟಾಗೆ ಇಡಿ ನೋಟಿಸ್ | Betting app cases

19/07/2025 10:10 AM

BREAKING : ಕನ್ನಡಧ್ವಜಕ್ಕೆ ಮತ್ತೆ ಹಕ್ಕು ಮಂಡಿಸಿದ ರಾಜ್ಯ ಸರ್ಕಾರ : ಕನ್ನಡ ಬಾವುಟಕ್ಕೆ ಮಾನ್ಯತೆ ಕೊಡುವಂತೆ ಪತ್ರ.!

19/07/2025 10:10 AM

ಅತ್ಯಾಚಾರ ಆರೋಪಿಗಳು ರಕ್ತದ ಮಾದರಿ ನೀಡಲು ನಿರಾಕರಿಸಿದರೆ ಪೊಲೀಸರು ಬಲಪ್ರಯೋಗ ಮಾಡಬಹುದು: ದೆಹಲಿ ಹೈಕೋರ್ಟ್

19/07/2025 10:06 AM

ನಂ.18 ಜೆರ್ಸಿ ಧರಿಸಿದ `ವೈಭವ್ ಸೂರ್ಯವಂಶಿ’ಫೋಟೋ ವೈರಲ್ : ಕೊಹ್ಲಿ ಫ್ಯಾನ್ಸ್ ಕಿಡಿ.!

19/07/2025 10:00 AM
State News
KARNATAKA

BREAKING : ಕನ್ನಡಧ್ವಜಕ್ಕೆ ಮತ್ತೆ ಹಕ್ಕು ಮಂಡಿಸಿದ ರಾಜ್ಯ ಸರ್ಕಾರ : ಕನ್ನಡ ಬಾವುಟಕ್ಕೆ ಮಾನ್ಯತೆ ಕೊಡುವಂತೆ ಪತ್ರ.!

By kannadanewsnow5719/07/2025 10:10 AM KARNATAKA 1 Min Read

ಬೆಂಗಳೂರು : ಕನ್ನಡ ಧ್ವಜಕ್ಕೆ ರಾಜ್ಯ ಸರ್ಕಾರವು ಮತ್ತೆ ಹಕ್ಕು ಮಂಡಿಸಿದೆ. ಕನ್ನಡ ಬಾವುಟಕ್ಕೆ ಮಾನ್ಯತೆ ಕೊಡುವಂತೆ ಕೇಂದ್ರ ಸರ್ಕಾರಕ್ಕೆ…

`WhatsApp’ ನಲ್ಲಿ ಡಿಲೀಟ್ ಆದ ಮೆಸೇಜ್ ಓದುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

19/07/2025 9:50 AM

ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಬೀಳಲಿದೆ ಬ್ರೇಕ್ : ಮುಂದಿನ ಅಧಿವೇಶನದಲ್ಲಿ `ಕಾಯ್ದೆ’ ಜಾರಿಗೆ ಸರ್ಕಾರ ಸಿದ್ಧತೆ

19/07/2025 9:24 AM

ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ ನೋಡಿ : ದಿನಾಂಕ:19-07-2025 ಶನಿವಾರ

19/07/2025 9:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.