ಬೆಳಗಾವಿ/ಮೈಸೂರು ಕಂದಾಯ ವಿಭಾಗಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದ ಯುವ ಜನರಿಗೆ ವಸತಿಯುತ Police Sub Inspector (PSI) ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆ ಮಾಡುವ ಸಂಬಂಧ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನಿಸುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2024-25ನೇ ಸಾಲಿಗೆ ಮಂಜೂರಾದ ರಾಜ್ಯದ ಬೆಳಗಾವಿ/ಮೈಸೂರು ಕಂದಾಯ ವಿಭಾಗಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದ ಯುವ ಜನರಿಗೆ 90 ದಿನಗಳ ವಸತಿಯುತ Police Sub Inspector (PSI) ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಯನ್ನು ಪುರುಷ & ಮಹಿಳಾ ಅಭ್ಯರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಯ ಮೂಲಕ ತರಬೇತಿ ನೀಡಲು ಅರ್ಜಿಯನ್ನು ಸಲ್ಲಿಸಲು ಸೇವಾಸಿಂಧು ಪೋರ್ಟಲ್ ನಲ್ಲಿ ಸೇವೆಯನ್ನು ಸಕ್ರಿಯಗೊಳಿಸಿ ದಿನಾಂಕ: 10.05.2025 ರಿಂದ ಪ್ರಾರಂಭಿಸಿ ದಿನಾಂಕ:05.06.2025 ರವರೆಗೆ ಮುಕ್ತಾಯಗೊಳಿಸಲು ಕೋರಲಾಗಿತ್ತು.
ಮುಂದುವರೆದು ಅಭ್ಯರ್ಥಿಗಳ ಕೋರಿಕೆ ಮತ್ತು ಸಹಾಯವಾಣಿಗೆ ಕರೆಗಳು ಬರುತ್ತಿರುವ ಕಾರಣ ದಿನಾಂಕ: 15.06.2025 ರವರೆಗೆ ಸೇವಾಸಿಂಧು ತಂತ್ರಾಂಶದಲ್ಲಿ ಸೇವೆಯನ್ನು ಮುಂದುವರೆಸಲು ಕೋರಿದೆ.