Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ನೌಕರಿ ಆರೋಪ: ಸಾಗರ ನಗರಸಭೆ ಮೇಸ್ತ್ರಿ ನಾಗರಾಜ್ ವಿರುದ್ಧ ಡಿಸಿಗೆ DSS ದೂರು

​ಭಯೋತ್ಪಾದನೆ, ಸೈಬರ್ ಕ್ರೈಂ ಮತ್ತು ಡ್ರಗ್ಸ್ ದಂಧೆಗೆ ಟೆಲಿಗ್ರಾಂ ಆಪ್ ದುರುಪಯೋಗ: ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ!

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 IAS ಅಧಿಕಾರಿ’ಗಳನ್ನು ವರ್ಗಾವಣೆ | IAS Officer Transfer

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ಓದುವ ಸಮಸ್ಯೆ’ ಎದುರಿಸುತ್ತಿರುವ ‘ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಇಂದಿನಿಂದ ಶಾಲೆಗಳಲ್ಲಿ ‘ರೀಡ್-ಎ-ಥಾನ್’ ಅಭಿಯಾನ
KARNATAKA

BIG NEWS: ‘ಓದುವ ಸಮಸ್ಯೆ’ ಎದುರಿಸುತ್ತಿರುವ ‘ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಇಂದಿನಿಂದ ಶಾಲೆಗಳಲ್ಲಿ ‘ರೀಡ್-ಎ-ಥಾನ್’ ಅಭಿಯಾನ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಓದುವ ಸಮಸ್ಯೆ ಎದುರಿಸುತ್ತಿರುವಂತ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ, ಇಂದಿನಿಂದ ರಾಜ್ಯಾಧ್ಯಂತ ರೀಡ್-ಎ-ಥಾನ್ ಅಭಿಯಾನ ನಡೆಯಲಿದೆ. 21 ದಿನಗಳ ಕಾಲ ನಡೆಯುವಂತ ಅಭಿಯಾನದಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಓದುವ ಕೌಶಲ್ಯವನ್ನು ಶಾಲಾ ಮಕ್ಕಳಿಗೆ ವೃದ್ಧಿಸುವಂತ ಕಾರ್ಯ ನಡೆಯಲಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, “ಇಂದಿನ ಓದುಗರು ನಾಳಿನ ನಾಯಕರು” ಎಂಬ ಗಾದೆ ಮಾತಿನಂತೆ ಮಕ್ಕಳಲ್ಲಿ ಓದುವ ಕೌಶಲ್ಯಗಳು ಹಾಗೂ ಹವ್ಯಾಸ ಬೆಳೆಸುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುವು ಮಾಡುತ್ತದೆ. ಈ ನಿಟ್ಟಿನಲ್ಲಿ 1 ರಿಂದ 7ನೇ ತರಗತಿವರೆಗೆ ಓದುತ್ತಿರುವ ಮಕ್ಕಳಲ್ಲಿ ಓದುವ ಕೌಶಲ್ಯ ಸಂಸ್ಕೃತಿ ಮತ್ತು ಅಭ್ಯಾಸವನ್ನು ಬೆಳೆಸುವುದು ಓದು ಅಭಿಯಾನದ ಉದ್ದೇಶವಾಗಿದೆ ಎಂದಿದೆ.

ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು, ಅಭಿಯಾನದ ರೂಪದಲ್ಲಿ ಓದುವ ಚಟುವಟಿಕೆಗಳನ್ನು ಆಯೋಜಿಸಿ, ಮಕ್ಕಳಲ್ಲಿ ಓದುವಿಕೆ ಮತ್ತು ಪುಸ್ತಕಗಳ ಬಗ್ಗೆ ಒಲವು ಬೆಳಸುವಂತೆ ಕ್ರಮವಹಿಸಬೇಕಾಗಿರುತ್ತದೆ. ಗ್ರಹಿಕೆ ಸಾಮರ್ಥ್ಯಗಳನ್ನು ಹಾಗೂ ಅರಿವಿನ ಕೌಶಲ್ಯಗಳ ಅಭಿವೃದ್ಧಿಗೆ ಪುಸ್ತಕಗಳು ಪಾತ್ರ ಮಹತ್ವದ್ದಾಗಿರುತ್ತದೆ. ಈ ಹಿನ್ನಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಓದುತ್ತಿರುವ ಮಕ್ಕಳಿಗಾಗಿ ಶಾಲೆಗಳಲ್ಲಿ ರಾಜ್ಯಾದ್ಯಂತ 21 ದಿನಗಳ ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿಯನ್ನು ವಿನ್ಯಾಸಗೊಳಿಸಲಾಗಿದೆ. ಮಕ್ಕಳಿಗೆ ಪ್ರತಿ 21 ದಿನ ಮಾಡಬೇಕಾದ ಚಟುವಟಿಕೆಗಳ ವಿವರವಾದ ವಿನ್ಯಾಸದೊಂದಿಗೆ ಕಥೆಯ ಚಟುವಟಿಕೆ ಮಾರ್ಗದರ್ಶಿ ವಿವರಗಳನ್ನು ಲಗತ್ತಿಸಲಾಗಿದೆ. ಪ್ರಾಥಮಿಕ ತರಗತಿ ಮಕ್ಕಳಿಗೆ ತರಗತಿ/ವಯಸ್ಸಿಗೆ ಸೂಕ್ತವಾದ ಓದುವ ಸಾಮಗ್ರಿಗಳು ಲಭ್ಯವಿಲ್ಲದಿದ್ದರೆ, ಕಥೆಯ ಚಟುವಟಿಕೆ ಮಾರ್ಗದರ್ಶಿ. pdf ಅನ್ನು ಬಳಸಬಹುದು. ಇದರಲ್ಲಿರುವ, ಬಾರ್ಕೋಡ್ ಅನ್ನು ಸ್ಕ್ಯಾನ್ ಮಾಡಿ ಮಕ್ಕಳಿಗೆ ಕಥೆಗಳನ್ನು ಓದಿ ಹೇಳಬಹುದು ಎಂದಿದೆ.

ಚಟುವಟಿಕೆಯನ್ನು ಪ್ರಾರ್ಥನಾ ಸಭೆ, ನಲಿಕಲಿ ತರಗತಿಯ ಮೊದಲನೆಯ ಅವಧಿ ಅಥವಾ ಶಾಲಾ ಪಠ್ಯಕ್ರಮದಲ್ಲಿ ನಿಗದಿಪಡಿಸಿದ ಗ್ರಂಥಾಲಯದ ಅವಧಿಯ ಹೀಗೆ ಶಾಲೆಯ ವಹಿವಾಟಿಗೆ ಅನ್ವಯಿಸುವಂತೆ ಹಾಗೂ ಬೋಧನೆಗೆ ತೊಂದರೆಯಾಗದಂತೆ ಚಟುವಟಿಕೆಗಳನ್ನು ಕಡ್ಡಾಯವಾಗಿ ಆಯೋಜಸಿಸುವುದು, ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿ ಶಿಕ್ಷಕರಿಗೆ ಅದರ ಪರಿಚಯ ಮಾಡಿಕೊಡಲು ಸಹಕಾರಿಯಾಗುವಂತೆ ವಿನ್ಯಾಸಗೊಂಡಿದೆ. ಇದಲ್ಲದೆ ಶಿಕ್ಷಕರು ತಮ್ಮ ಕ್ರಿಯಾ ಶೀಲತೆಯಿಂದ ಇತರೆ ಓದುವ ಚಟುವಟಿಕೆಗಳನ್ನು ಶಾಲೆಗಳಲ್ಲಿ ಅಳವಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

ಓದುವ ಅಭಿಯಾನದ ಅವಧಿಯು ಸೆಪ್ಟೆಂಬರ್ 3ರ ಇಂದಿನಿಂದ ಸೆ.18 ರವರೆಗೆ ಮತ್ತು ಸೆಪ್ಟೆಂಬರ್ 26 ರಿಂದ 30, 2024 ರವರೆಗೆ ಇರುತ್ತದೆ (20.09.2024 ರಿಂದ 25.09.2024 ರವರೆಗೆ ಶಾಲೆಗಳಲ್ಲಿ SA-1 ನಡೆಸಲು ಸುಗಮಗೊಳಿಸಲಾಗಿದೆ). ಸೆಪ್ಟೆಂಬರ್ 3 ರಂದು ಅಭಿಯಾನದ ಪ್ರಾರಂಭ ಚಟುವಟಿಕೆಯಾಗಿ ರೀಡ್-ಎ-ಥಾನ್ ನಡೆಸಲಾಗುವುದು. ಮಕ್ಕಳು, ಶಿಕ್ಷಕರು, ಕ್ಲಸ್ಟರ್/ಬ್ಲ್ಯಾಕ್/ಜಿಲ್ಲೆ/ರಾಜ್ಯ ಮಟ್ಟದ ಅಧಿಕಾರಿಗಳು ಎಲ್ಲಾ ಕೆಲಸಗಳನ್ನು ಬದಿಗೆ ಒತ್ತಿ ಬೆಳಿಗ್ಗೆ 11:00 ರಿಂದ 11:30 ರವರೆಗೆ ತಮ್ಮ ನೆಚ್ಚಿನ ಪುಸ್ತಕವನ್ನು ಓದುತ್ತಾರೆ ಎಂದಿದೆ.

ಪಾತ್ರಗಳು ಮತ್ತು ಜವಾಬ್ದಾರಿಗಳು

ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಈ ಕೆಳಕಂಡಂತೆ ಕ್ರಮ ವಹಿಸುವುದು.
1. ಡಯಟ್ ಪ್ರಾಂಶುಪಾಲರು ಸೆಪ್ಟೆಂಬರ್ 3 ರಿಂದ 18 ರವರೆಗೆ ಮತ್ತು ಸೆಪ್ಟೆಂಬರ್ 26 ರಿಂದ 30, 2024 ರವರೆಗೆ ಎಲ್ಲಾ ಶಾಲೆಗಳಲ್ಲಿ ಓದುವ ಅಭಿಯಾನವನ್ನು ನಡೆಸುವುದನ್ನು ಖಚಿತ ಪಡಿಸಿಕೊಳ್ಳಲು ಸಂಬಂಧಿಸಿದ ಎಲ್ಲಾ ತಾಲೂಕು ಕಛೇರಿಗಳಿಗೆ ಮಾಹಿತಿಯನ್ನು ನೀಡಲು ಕ್ರಮವಹಿಸುವುದು.
2. ಉಪನಿರ್ದೇಶಕರು (ಆಡಳಿತ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಎಲ್ಲಾ ಹಂತದ ಅಧಿಕಾರಿಗಳಿಗೆ ಹಾಗೂ ಶಾಲೆಗಳಿಗೆ ಮಾರ್ಗದರ್ಶನ ನೀಡಿ ಕಾರ್ಯಕ್ರಮವು ಕಡ್ಡಾಯವಾಗಿ ಅನುಷ್ಠಾನಗೊಳ್ಳುವಂತೆ ಖಚಿತಪಡಿಸಿಕೊಳ್ಳುವುದು.
3. ಶಿಕ್ಷಕರು ಮತ್ತು ತಾಲೂಕಿನ ಅಧಿಕಾರಿಗಳು ಈಗಾಗಲೇ ತಾಲ್ಲೂಕುವಾರು ಸ್ಥಾಪಿತವಾದ ವಾಟ್ಸಾಪ್ ಗುಂಪುಗಳ ಭಾಗವಾಗಿರುತ್ತಾರೆ. ಶಾಲೆಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಪರಿಶೀಲಿಸಲು ಈ ಗುಂಪುಗಳನ್ನು ಬಳಸಿಕೊಂಡು ಶಿಕ್ಷಕರು ವಾರದ ಕೊನೆಯಲ್ಲಿ ಶಾಲೆಗಳಲ್ಲಿ ನಡೆದ ಚಟುವಟಿಕೆಗಳ 3-4 ಫೋಟೋಗಳನ್ನು ಈ ಗುಂಪಿನಲ್ಲಿ ಪೋಸ್ಟ್ ಮಾಡುವಂತೆ ಮಾರ್ಗದರ್ಶನ ನೀಡಬೇಕು.

ಉಲ್ಲೇಖಿತ ಸಾಮಾಗ್ರಿಗಳು:

21 ದಿನಗಳ ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿ
ಕಥೆಯ ಚಟುವಟಿಕೆ ಮಾರ್ಗದರ್ಶಿ.pdf -ಶಾಲೆಗಳಲ್ಲಿ ಪ್ರತಿದಿನ ನಡೆಸಬಹುದಾದ ಕಥಾ ಚಟುವಟಿಕೆಯ ಮಾರ್ಗದರ್ಶಿ.

Share. Facebook Twitter LinkedIn WhatsApp Email

Related Posts

ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ನೌಕರಿ ಆರೋಪ: ಸಾಗರ ನಗರಸಭೆ ಮೇಸ್ತ್ರಿ ನಾಗರಾಜ್ ವಿರುದ್ಧ ಡಿಸಿಗೆ DSS ದೂರು

2 Mins Read

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 IAS ಅಧಿಕಾರಿ’ಗಳನ್ನು ವರ್ಗಾವಣೆ | IAS Officer Transfer

2 Mins Read

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಭರ್ಜರಿ ಗೆಲುವು

1 Min Read
Recent News

ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ನೌಕರಿ ಆರೋಪ: ಸಾಗರ ನಗರಸಭೆ ಮೇಸ್ತ್ರಿ ನಾಗರಾಜ್ ವಿರುದ್ಧ ಡಿಸಿಗೆ DSS ದೂರು

​ಭಯೋತ್ಪಾದನೆ, ಸೈಬರ್ ಕ್ರೈಂ ಮತ್ತು ಡ್ರಗ್ಸ್ ದಂಧೆಗೆ ಟೆಲಿಗ್ರಾಂ ಆಪ್ ದುರುಪಯೋಗ: ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ!

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 IAS ಅಧಿಕಾರಿ’ಗಳನ್ನು ವರ್ಗಾವಣೆ | IAS Officer Transfer

​ಬಿಸಿಲಿನ ಬೇಗೆಯಿಂದ ಬಚಾವಾಗಲು ಐಪಿಎಲ್ ಮುಂಚಿತವಾಗಿಯೇ ಆರಂಭ? 2027ರ ಟೂರ್ನಿಯಲ್ಲಿ ಹೊಸ ತಂಡಗಳ ಸೇರ್ಪಡೆ ಸದ್ಯಕ್ಕಿಲ್ಲ!

State News
KARNATAKA

ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ನೌಕರಿ ಆರೋಪ: ಸಾಗರ ನಗರಸಭೆ ಮೇಸ್ತ್ರಿ ನಾಗರಾಜ್ ವಿರುದ್ಧ ಡಿಸಿಗೆ DSS ದೂರು

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ನಕಲಿ ಜಾತಿ ಪ್ರಮಾಣ ಪತ್ರವನ್ನು ಬಳಸಿಕೊಂಡು ಸರ್ಕಾರಿ ನೌಕರಿ ಹಾಗೂ ಮುಂಬಡ್ತಿ ಪಡೆದು, ನೈಜ ಪರಿಶಿಷ್ಟ ಜಾತಿಯ ಜನರಿಗೆ…

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’14 IAS ಅಧಿಕಾರಿ’ಗಳನ್ನು ವರ್ಗಾವಣೆ | IAS Officer Transfer

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಭರ್ಜರಿ ಗೆಲುವು

BIG BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 222 ಮತಗಳ ಪೈಕಿ ಒಂದು ಮತ ಅಸಿಂಧು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.