ರಾಯಚೂರು : ಒಂದು ವಾರದಲ್ಲಿ ಬರಪರಿಹಾರದ ಮೊದಲ ಕಂತಿನ ಹಣ ಪಾವತಿ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಅವರು ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು, ಇದೇ ವೇಳೆ ಅವರು ಮಾತನಾಡಿ, ಹಿಂದೆ ಬರಪರಿಹಾರ, ಅತಿವೃಷ್ಟಿ ಪರಿಹಾರ ನೀಡುವಲ್ಲಿ ಹಲವು ನ್ಯೂನ್ಯತೆಗಳಿದ್ದವು. ಎಷ್ಟೋ ಜನ ಬೆಳೆಯನ್ನೇ ಬೆಳೆಯದಿದ್ದರೂ ಅವರಿಗೂ ಪರಿಹಾರ ಹೋಗುತ್ತಿತ್ತು. ಇದರಿಂದ ಬೆಳೆ ಹಾನಿಯಾದವರಿಗೆ ಪರಿಹಾರ ಸಿಗುತ್ತಿರಲಿಲ್ಲ ಅಂತ ತಿಳಿಸಿದರು. ಇನ್ನೂ ಬೆಳೆ ಸಮೀಕ್ಷೆಯನ್ನು ಶೀಘ್ರದಲ್ಲಿ ಮಾಡಿದ್ದು, ಈಗ ಎಲ್ಲಾ ಕೆಲಸ ಮುಗಿದಿದ್ದು, ಸುಮಾರು ಹನ್ನೆರಡು ಲ ಮಂದಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಆರ್‌ಬಿಐಗೆ ಕಳುಹಿಸಿಕೊಡಲಾಗುವುದು ಅಂತ ತಿಳಿಸಿದ ಅವರು,ಕೇಂದ್ರ ಸರ್ಕಾರದಿಂದ ಇನ್ನೂ ಕೂಡ ಹಣ ಬಂದಿಲ್ಲ, ಸಿಎಂ ಹಣಕ್ಕಾಗಿ ಕಾಯದೇ ರೈತರಿಗೆ ಹಣ ನೀಡುವುದಕ್ಕೆ ತೀರ್ಮಾನ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಕೂಡ ಹಣಕ್ಕಾಗಿ ಮನವಿ ಮಾಡಲಾಗಿದೆ ಅಂತ ತಿಳಿಸಿದರು.