ಬೆಂಗಳೂರು: ಕಳೆದ ವರ್ಷರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದು, ಇಡೀ ರಾಜ್ಯದಲ್ಲಿ ಬರಗಾಲವನ್ನು ಆವರಿಸಿದೆ.
ಲೋಕಸಭೆ ಚುನಾವಣೆ 2024: ಬಿಜೆಪಿ ಯಾವ ಜಾತಿಗೆ ಎಷ್ಟು ಟಿಕೆಟ್? ಇಲ್ಲಿದೆ ಮಾಹಿತಿ
BREAKING : ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ : ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ದಾಖಲು
BREAKING : ಬೆಂಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವಿದೇಶಿ ಮಹಿಳೆಯ ಶವ ಪತ್ತೆ!
ಈ ನಡುವೆಈ ಬಾರಿ ಮಳೆಯ ಭಾರತದಲ್ಲಿ ವಾಡಿಕೆಗಿಂತ ಅಧಿಕ ಮಳೆ ಎಂದು ECMWF ವರದಿ ಸೂಚಿಸಿದೆ. ಹೌದು, ವಿಶೇಷವಾಗಿ ದಕ್ಷಿಣ ಭಾರತದಲ್ಲಿಅಧಿಕ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ. ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ಯುರೋಪಿಯನ್ ಕೇಂದ್ರದ (ECMWF) ವರದಿ ಆಧರಿಸಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNMDC) ಈ ಬಾರಿಯ ಮುಂಗಾರು ಮುನ್ನೋಟ ಚೆನ್ನಾಗಿದ್ದು ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ,’ ಎಂದು ಹೇಳಿದೆ. ಈ ನಡುವೆ ದಕ್ಷಿಣ ಕರ್ನಾಟಕದ ಹಲವು ಗ್ರಾಮಗಳಲ್ಲಿ 2024ರ ಮೊದಲ ಮಳೆಯಾಗಿದೆ. ಏತನ್ಮಧ್ಯೆ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಲಘು ತುಂತುರು ಮಳೆಯಾಗಿದ್ದು, ತಾಪಮಾನ ಕಡಿಮೆಯಾಗಿದೆ. ವಿರಾಜಪೇಟೆ ತಾಲ್ಲೂಕಿನ ಕಾಕೋಟ್ ಪರಂಬು ಗ್ರಾಮದಲ್ಲಿ 3.5 ಮಿ.ಮೀ ಮಳೆಯಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಶಿರಮಳ್ಳಿ (2.5 ಮಿ.ಮೀ) ಮತ್ತು ಹಗಿನವಾಳು (1 ಮಿ.ಮೀ) ಗ್ರಾಮಗಳಲ್ಲಿಯೂ ಲಘು ತುಂತುರು ಮಳೆಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬಿಳಿಗಾನಹಳ್ಳಿ ಗ್ರಾಮದಲ್ಲಿ ಅತಿ ಹೆಚ್ಚು 11.5 ಮಿ.ಮೀ ಮಳೆಯಾಗಿದೆ.