ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳಲ್ಲಿ ಒಂದು ಹಳೆ ಪಿಂಚಣಿ ಯೋಜನೆ ( Old Pension Scheme-OPS) ಜಾರಿಗೊಳಿಸುವುದು. ಈ ವಿಚಾರದಲ್ಲಿ ಈಗಾಗಲೇ ಜಾರಿಗೊಳಿಸುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದರು. ಅದರ ಸಲುವಾಗಿ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ಆಗಸ್ಟ್.12ರಂದು ಈ ಸಂಬಂಧ ಚರ್ಚಿಸಲು ಮಹತ್ವದ ಸಭೆ ಕರೆಯಲಾಗಿದೆ.
ದಿನಾಂಕ: 12.08.2025 ರಂದು ಅಪರಾಹ್ನ 4.00 ಗಂಟೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು ಇವರ ಅಧ್ಯಕ್ಷತೆಯಲ್ಲಿ ಕೊಠಡಿ ಸಂಖ್ಯೆ: 306, 3ನೇ ಮಹಡಿ, ವಿಧಾನಸೌಧ ಇಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯ ಬದಲಾಗಿ ಹಳಯ ಪಿಂಚಣಿ ಯೋಜನೆಯನ್ನು ಜಾರಿ ಮಾಡುವ ಸಾಧ್ಯತೆಗಳ ಕುರಿತು ಚರ್ಚೆ ನಡೆಸಲು ಸಮಿತಿ ಸಭೆಯನ್ನು ಏರ್ಪಡಿಸಲಾಗಿದೆ.
ರಮಣ್ ದೀಪ್ ಚೌಧರಿ, ಭಾ.ಆ.ಸೇ, ಸರ್ಕಾರದ ಕಾರ್ಯದರ್ಶಿರವರ ನೇತೃತ್ವದಲ್ಲಿ ಹಳ ಪಿಂಚಣಿ ಯೋಜನೆ ಜಾರಿ ಮಾಡಿರುವ ಹಿಮಾಚಲ ಪ್ರದೇಶ ರಾಜ್ಯಕ್ಕೆ ಭೇಟಿ ನೀಡಿ ವರದಿಯನ್ನು ಸಲ್ಲಿಸಿದ್ದು ಮತ್ತು ತುಳಸಿ ಮದ್ದಿನೇನಿ, ಭಾ.ಆ.ಸೇ, ಸರ್ಕಾರದ ಕಾರ್ಯದರ್ಶಿರವರು ಅಂಧ ಪ್ರದೇಶ ರಾಜ್ಯಕ್ಕೆ ಭೇಟಿ ನೀಡಿ ವರದಿಯನ್ನು ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಸದರಿ ಸಭೆಯನ್ನು ಏರ್ಪಡಿಸಲಾಗಿದ್ದು. ಸದರಿ ಸಭೆಗೆ ಹಾಜರಾಗುವಂತೆ ಕೋರಿದ್ದಾರೆ.
ಇನ್ಮುಂದೆ ತಿಂಗಳಿಗೊಮ್ಮೆ ಕಾಡಂಚಿನ ಗ್ರಾಮಗಳಲ್ಲಿ ‘ಜನಸಂಪರ್ಕ ಸಭೆ’ ಕಡ್ಡಾಯ: ಸಚಿವ ಈಶ್ವರ್ ಖಂಡ್ರೆ
BREAKING: ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’ ಕೇಸ್: ‘ಕಚೇರಿ ಅಧೀಕ್ಷಕ ಸುನೀಲ್’ ಸೇವೆಯಿಂದ ಅಮಾನತು