Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಬಾಲಿವುಡ್ ಸಾಂಗ್ ಜೊತೆ ಮ್ಯಾಕ್ರನ್ ‘ಧುರಂಧರ್’ ರಾಜತಾಂತ್ರಿಕತೆ! ಪ್ರಧಾನಿ ಮೋದಿ ಫ್ರಾನ್ಸ್ ಪ್ರವಾಸದ ವಿಡಿಯೋ ವೈರಲ್

ಕೆಪಿಟಿಸಿಎಲ್ ನಿಂದ ಪ್ರಾಯೋಗಿಕವಾಗಿ ಬೆಂಗಳೂರು ಕಾರಿಡಾರ್‌ನಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ

​ಶಾಲೆಗಳಲ್ಲಿ ಲಿಪ್‌ಸ್ಟಿಕ್ ಬ್ಯಾನ್! ಕೇರಳದ ಬೆನ್ನಲ್ಲೇ ಇಡೀ ದೇಶಕ್ಕೆ ಹರಡುತ್ತಾ ಹೊಸ ನಿಯಮ?

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ರಾಜ್ಯ ಸರ್ಕಾರಿ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ‘ಕೆಜಿಐಡಿ ಬೋನಸ್’ ಘೋಷಣೆ | Karnataka Government Employees
KARNATAKA

‘ರಾಜ್ಯ ಸರ್ಕಾರಿ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ‘ಕೆಜಿಐಡಿ ಬೋನಸ್’ ಘೋಷಣೆ | Karnataka Government Employees

By ವಸಂತ ಬಿ ಈಶ್ವರಗೆರೆ
vidhana soudha
vidhana soudha

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಎನ್ನುವಂತೆ ಇಂದು ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯು ಸರ್ಕಾರಿ ನೌಕರರಿಗೆ 2018ರಿಂದ 2020ರ ಅವಧಿಯವರೆಗೆ ಬಾಕಿ ಇದ್ದಂತ 2 ವರ್ಷಗಳ ಕೆಜಿಐಡಿ ಬೋನಸ್ ನೀಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಕೆ.ಜಿ.ಐ.ಡಿ ವಿಮಾ ಯೋಜನೆಯ ಕಡ್ಡಾಯ ವಿಮಾದಾರರಿಗೆ 2018-20 ದ್ವೈವಾರ್ಷಿಕ ಅವಧಿಗೆ ಅಧಿಲಾಭಾಂಶ (Bonus) ಘೋಷಣೆ ಮಾಡಲು ಪ್ರಸ್ತಾಪಿಸಲಾಗಿದ್ದು, ದಿನಾಂಕ: 01.04.2018 ರಿಂದ 31.03.2020ರ ದ್ವೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/- ರಂತೆ ಲಾಭಾಂಶ (ಬೋನಸ್) ಘೋಷಿಸಲು; ಮತ್ತು ಅವಧಿ ಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ ದಿನಾಂಕ: 01.04.2020 ರಿಂದ 31.03.2022 ರ ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/- ರಂತೆ ಮಧ್ಯಂತರ ಲಾಭಾಂಶವನ್ನು (ಇಂಟರೀಮ್ ಬೋನಸ್) ಘೋಷಿಸಲು ಸಚಿವ ಸಂಪುಟ ನಿರ್ಣಯಿಸಿತು.

ಇಂದಿನ ಸಚಿವ ಸಂಪುಟ ನಿರ್ಣಯದಂತೆ ರಾಜ್ಯ ಸರ್ಕಾರಿ ನೌಕರರಿಗೆ ಕೆಜಿಡಿಐ ಬೋನಸ್ ನೀಡಲು ಶೀಘ್ರದಲ್ಲೇ ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸಲಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ಸಿಗಲಿದೆ.

ಇನ್ನೂ 5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ದಿನಾಂಕ: 28.02.2025 ರವರೆಗೆ ವಿಸ್ತರಿಸುವ ಸಂಬಂಧ ಆಯೋಗದ ಅವಧಿಯನ್ನು 28ನೇ ಫೆಬ್ರವರಿ 2025 ರವರೆಗೆ ವಿಸ್ತರಿಸುವ ಬಗ್ಗೆ ಹಾಗೂ ಡಿಸೆಂಬರ್ 2024ರ ಒಳಗೆ ಆಯೋಗವು ತನ್ನ ವರದಿಯನ್ನು ಸಲ್ಲಿಸುವಂತೆ ತಿಳಿಸುವ ಬಗ್ಗೆ ಸಚಿವ ಸಂಪುಟದ ಅನುಮೋದನೆ ನೀಡಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Good News: ‘PDO’ಗಳನ್ನು ‘ಕೌನ್ಸಿಲಿಂಗ್ ಮೂಲಕ ವರ್ಗಾವಣೆ’ಗೆ ‘ರಾಜ್ಯ ಸಚಿವ ಸಂಪುಟ ಸಭೆ’ಯಲ್ಲಿ ಅನುಮೋದನೆ | PDO Transfer

‘ಅಂಗನವಾಡಿ ಕಾರ್ಯಕರ್ತೆ’ಯರಿಗೆ ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ ಗುಡ್ ನ್ಯೂಸ್

Share. Facebook Twitter LinkedIn WhatsApp Email

Related Posts

ಕೆಪಿಟಿಸಿಎಲ್ ನಿಂದ ಪ್ರಾಯೋಗಿಕವಾಗಿ ಬೆಂಗಳೂರು ಕಾರಿಡಾರ್‌ನಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ

3 Mins Read

ದಾವಣಗೆರೆಯಲ್ಲಿ ಭೀಕರ ಅಗ್ನಿ ದುರಂತ; ಒಂದರ ಬೆನ್ನಲ್ಲೇ 18 ಸಿಲಿಂಡರ್ ಸ್ಫೋಟ, ಇಬ್ಬರಿಗೆ ಗಂಭೀರ ಗಾಯ!

2 Mins Read

BREAKING: ರಾಜ್ಯದಲ್ಲಿ ಭೀಕರ ಅಗ್ನಿ ಅವಘಡ: ಮೈಸೂರಿನ ಪಬ್ ನಲ್ಲಿ ಆಕಸ್ಮಿಕ ಬೆಂಕಿಯಿಂದ ಇಬ್ಬರು ಸಜೀವದಹನ

1 Min Read
Recent News

​ಬಾಲಿವುಡ್ ಸಾಂಗ್ ಜೊತೆ ಮ್ಯಾಕ್ರನ್ ‘ಧುರಂಧರ್’ ರಾಜತಾಂತ್ರಿಕತೆ! ಪ್ರಧಾನಿ ಮೋದಿ ಫ್ರಾನ್ಸ್ ಪ್ರವಾಸದ ವಿಡಿಯೋ ವೈರಲ್

ಕೆಪಿಟಿಸಿಎಲ್ ನಿಂದ ಪ್ರಾಯೋಗಿಕವಾಗಿ ಬೆಂಗಳೂರು ಕಾರಿಡಾರ್‌ನಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ

​ಶಾಲೆಗಳಲ್ಲಿ ಲಿಪ್‌ಸ್ಟಿಕ್ ಬ್ಯಾನ್! ಕೇರಳದ ಬೆನ್ನಲ್ಲೇ ಇಡೀ ದೇಶಕ್ಕೆ ಹರಡುತ್ತಾ ಹೊಸ ನಿಯಮ?

ದಾವಣಗೆರೆಯಲ್ಲಿ ಭೀಕರ ಅಗ್ನಿ ದುರಂತ; ಒಂದರ ಬೆನ್ನಲ್ಲೇ 18 ಸಿಲಿಂಡರ್ ಸ್ಫೋಟ, ಇಬ್ಬರಿಗೆ ಗಂಭೀರ ಗಾಯ!

State News
KARNATAKA

ಕೆಪಿಟಿಸಿಎಲ್ ನಿಂದ ಪ್ರಾಯೋಗಿಕವಾಗಿ ಬೆಂಗಳೂರು ಕಾರಿಡಾರ್‌ನಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ

By ವಸಂತ ಬಿ ಈಶ್ವರಗೆರೆ KARNATAKA 3 Mins Read

ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ರಾಜ್ಯದ ವಿದ್ಯುತ್ ಪ್ರಸರಣ ಜಾಲದ ಆಧುನೀಕರಣದತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ.…

ದಾವಣಗೆರೆಯಲ್ಲಿ ಭೀಕರ ಅಗ್ನಿ ದುರಂತ; ಒಂದರ ಬೆನ್ನಲ್ಲೇ 18 ಸಿಲಿಂಡರ್ ಸ್ಫೋಟ, ಇಬ್ಬರಿಗೆ ಗಂಭೀರ ಗಾಯ!

BREAKING: ರಾಜ್ಯದಲ್ಲಿ ಭೀಕರ ಅಗ್ನಿ ಅವಘಡ: ಮೈಸೂರಿನ ಪಬ್ ನಲ್ಲಿ ಆಕಸ್ಮಿಕ ಬೆಂಕಿಯಿಂದ ಇಬ್ಬರು ಸಜೀವದಹನ

ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.