ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ. ಅದೇ ಪೂರ್ಣ ಪ್ರಮಾಣದ ನಿವೃತ್ತಿ ವೇತನ ಪಡೆಯುವ ಅದ್ದೇಶಕ್ಕಾಗಿ ಗರಿಷ್ಠ ಅರ್ಹತಾದಾಯಕ ಸೇವೆಯ ಪ್ರಮಾಣವನ್ನು 30 ವರ್ಷಕ್ಕೆ ಇಳಿಕೆ ಮಾಡಿದೆ.
ಈ ಕುರಿತಂತೆ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದಾರೆ. ಅದರಲ್ಲಿ ಸರ್ಕಾರದ ಆದೇಶ ಸಂಖ್ಯೆ: ಆಇ 22 ಎಸ್‌ಆರ್‌ಪಿ 2017, ದಿನಾಂಕ 01.06.2017ರನ್ವಯ ರಚಿಸಲಾಗಿದ್ದ ಆರನೇ ರಾಜ್ಯ ವೇತನ ಆಯೋಗವು ದಿನಾಂಕ 31.01.2018ರಂದು ತನ್ನ ವರದಿಯನ್ನು (ಮೊದಲ ಸಂಪುಟ) ಸಲ್ಲಿಸಿದೆ. ಈ ಕುರಿತಾದ ಆರನೇ ರಾಜ್ಯ ವೇತನ ಆಯೋಗದ ಶಿಫಾರಸ್ಸನ್ನು ಸರ್ಕಾರವು ಪರಿಗಣಿಸಿದೆ. ಮತ್ತು ರಾಜ್ಯ ಸರ್ಕಾರಿ ನೌಕರರು ಪೂರ್ಣ ಪ್ರಮಾಣದ ನಿವೃತ್ತಿ ವೇತನ ಪಡೆಯುವಲ್ಲಿನ ಗರಿಷ್ಠ ಅರ್ಹತಾದಾಯಕ ಸೇವೆಯ ಪರಿಷ್ಕರಣೆ ಸಂಬಂಧದ ಶಿಫಾರಸ್ಸನ್ನು ಅಂಗೀಕರಿಸಿ, ಈ ಕೆಳಕಂಡಂತೆ ಆದೇಶವನ್ನು ಹೊರಡಿಸಲು ಹರ್ಷಿಸುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರಿ ನೌಕರರು ಪೂರ್ಣ ಪ್ರಮಾಣದ ನಿವೃತ್ತಿ ವೇತನ ಪಡೆಯುವ ಉದ್ದೇಶಕ್ಕಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಗಳಲ್ಲಿ ವಿಧಿಸಲಾಗಿರುವ ಗರಿಷ್ಠ 33 ವರ್ಷಗಳ ಅರ್ಹತಾದಾಯಕ ಸೇವೆಯ ಷರತ್ತನ್ನು ಗರಿಷ್ಠ 30 ವರ್ಷಗಳಿಗೆ ಇಳಿಕೆ ಮಾಡಿ ಆದೇಶಿಸಲಾಗಿದೆ. ಈ ಆದೇಶವು ದಿನಾಂಕ 01.1.2019ರಿಂದ ಜಾರಿಗೆ ಬರತಕ್ಕದ್ದು. ಕರ್ನಾಟಕ ನಾಗರೀಕ ಸೇವಾ ನಿಯಮಗಳಿಗೆ ಅವಶ್ಯಕ ತಿದ್ದುಪಡಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದಿದ್ದಾರೆ.
ರಾಜ್ಯದಲ್ಲಿ ‘ಕಾಂಗ್ರೆಸ್ ಸರ್ಕಾರ 10 ವರ್ಷ’ ಅಧಿಕಾರದಲ್ಲಿ ಇರುತ್ತೆ: ಸಚಿವ ರಾಮಲಿಂಗಾರೆಡ್ಡಿ ಭವಿಷ್ಯ
ಬೆಂಗಳೂರು ಜನತೆಗೆ ಬಿಗ್ ರಿಲೀಫ್: ಮಾ.15ರ ನಂತ್ರ ಅನ್ಯ ಉದ್ದೇಶಕ್ಕೆ ನೀರು ಬಳಸಿದ್ರೆ 5,000 ದಂಡ