ಚಿತ್ರದುರ್ಗ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ 2024-25ನೇ ಸಾಲಿನಲ್ಲಿ ಗಿರಿಜನ ಉಪಯೋಜನೆ ಅಡಿಯಲ್ಲಿ ಕುರಿ, ಮೇಕೆ ಘಟಕ ಪೂರೈಕೆ ಯೋಜನೆಯನ್ನು ನಿಗಮದಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ ಸದಸ್ಯರಿಗಾಗಿ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ. ಡಿ.15 ಅರ್ಜಿ ಸಲ್ಲಿಸಲು ಕೊನೆಯ ದಿನ.
ಅರ್ಜಿ ಸಲ್ಲಿಸುವವರು 18 ರಿಂದ 60 ವರ್ಷ ಒಳಗಿನ ಮಹಿಳಾ, ಪುರುಷ ಸದಸ್ಯರಾಗಿದ್ದು, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಯೋಜನೆಯಡಿ 10 ಸುಧಾರಿತ ಹೆಣ್ಣು ಕುರಿ, ಮೇಕೆ, 01 ಟಗರು, ಹೋತಕ್ಕೆ ಒಟ್ಟು ಘಟಕ ದರ ರೂ.66,000/-ಗಳಿದ್ದು, ಶೇ.90ರಷ್ಟು ಸಹಾಯಧನ ಹೊಂದಿರುತ್ತದೆ. ಚಿತ್ರದುರ್ಗ ಜಿಲ್ಲೆಗೆ ಒಟ್ಟು 14 ಗುರಿ ನಿಗಧಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಅಥವಾ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಪಶು ಆಸ್ಪತ್ರೆ ಆವರಣ, ಚಿತ್ರದುರ್ಗ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
BIG NEWS: ಕರ್ನಾಟಕ SSLC, ದ್ವಿತೀಯ PUC ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಹೀಗಿದೆ ವಿಷಯವಾರು ಪರೀಕ್ಷೆ