ಬೆಂಗಳೂರು: ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಡಯಾಗ್ನೋಸ್ಟಿಕ್ಸ್ ವಲಯದಲ್ಲಿ ವೃತ್ತಿಪರ ಉದ್ಯೋಗಾವಕಾಶ ವಿಶೇಷ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ( CMKKY) ಯೋಜನೆಯಡಿ ನ್ಯೂಬರ್ಗ್ ಆನಂದ್ ಅಕಾಡೆಮಿ ಅಫ್ ಲ್ಯಾಬೋರೇಟರಿ ಮೆಡಿಸಿನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ SSLC ಮತ್ತು PUC ವಿದ್ಯಾರ್ಥಿಗಳಿಗೆ ಡಯಾಗ್ನೋಸ್ಟಿಕ್ಸ್ ವಲಯದಲ್ಲಿ ವೃತ್ತಿಪರ ಉದ್ಯೋಗಾವಕಾಶ ಬಯಸುವ ವಿಶೇಷ ತರಬೇತಿಯನ್ನು ಆಯೋಜಿಸಲಾಗಿದೆ.
ಉದ್ಯೋಗ ಆಧಾರಿತ ತರಬೇತಿಯಾದಂತ ಪ್ಲೆಬೋಟೊಮಿಸ್ಟ್ ತರಬೇತಿಯನ್ನು 6 ತಿಂಗಳುಗಳ ಕಾಲ ಎಸ್ ಎಸ್ ಎಲ್ ಸಿ ಹಾಗೂ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ಡಯೊಗ್ನೋಸ್ಟಿಕ್ಸ್ ನಲ್ಲಿ ಸಹಾಯಕ ಗುಣಮಟ್ಟ ನಿರ್ವಾಹಕ ತರಬೇತಿಯನ್ನು 2 ತಿಂಗಳವರೆಗೆ ನೀಡಲಾಗುತ್ತದೆ. ರೋಗ ನಿರ್ಣಯ ಕೇಂದ್ರಗಳಲ್ಲಿ ಗುಣಮಟ್ಟ ಪ್ರಕ್ರಿಯೆಗಳನ್ನು ನಿರ್ವಹಿಸಲು ಕೌಶಲ್ಯವನ್ನು ಪಡೆಯಬಹುದಾಗಿದೆ. ಇದಕ್ಕೆ ಪಿಯುಸಿ ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾಗಿರಬೇಕು.
ತರಬೇತಿ ಮಾತ್ರವೇ ಉಚಿತವಾಗಿದ್ದು, ತರಬೇತಿ ಕಾರ್ಯಕ್ರಮದ ಸಮಯದಲ್ಲಿ ಯಾವುದೇ ವಸತಿ ಮತ್ತು ಸ್ಟೈಫಂಡ್ ಒದಗಿಸಲಾಗುವುದಿಲ್ಲ. ಅಭ್ಯರ್ಥಿಗಳು ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 08025318550 ಅಥವಾ 8310177946ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ( CMKKY) ಯೋಜನೆಯಡಿ ನ್ಯೂಬರ್ಗ್ ಆನಂದ್ ಅಕಾಡೆಮಿ ಅಫ್ ಲ್ಯಾಬೋರೇಟರಿ ಮೆಡಿಸಿನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ SSLC ಮತ್ತು PUC ವಿದ್ಯಾರ್ಥಿಗಳಿಗೆ ಡಯಾಗ್ನೋಸ್ಟಿಕ್ಸ್ ವಲಯದಲ್ಲಿ ವೃತ್ತಿಪರ ಉದ್ಯೋಗಾವಕಾಶ ಬಯಸುವ ವಿಶೇಷ ತರಬೇತಿಯನ್ನು ಆಯೋಜಿಸಲಾಗಿದೆ. pic.twitter.com/V1tFeDREhS
— 𝐊.𝐒.𝐃.𝐂 – ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (@Skill_Karnataka) November 11, 2024
BREAKING: ಶಿವಮೊಗ್ಗದಲ್ಲಿ ‘ಖಾಸಗಿ ಬಸ್’ ಪಲ್ಟಿಯಾಗಿ ಭೀಕರ ಅಪಘಾತ: ಹಲವು ಪ್ರಯಾಣಿಕರಿಗೆ ಗಂಭೀರ ಗಾಯ
BREAKING : ನಾನು ಅತ್ಯಾಚಾರ ಮಾಡಿದ್ರೆ ರಕ್ತ ಕಾರಿ ಸಾಯುತ್ತೇನೆ : ಬಿಜೆಪಿ ಶಾಸಕ ಮುನಿರತ್ನ ಹೇಳಿಕೆ