ಬೆಂಗಳೂರು: ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವೆಬ್ಸೈಟ್ www.indiapostgdsonline.gov.in ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಆಗಸ್ಟ್ 5 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಈ ಎಲ್ಲ ಹುದ್ದೆಗಳಿಗೆ 10 ನೇ ತರಗತಿ ತೇರ್ಗಡೆ ಕಡ್ಡಾಯ. ಗಣಿತ ಮತ್ತು ಇಂಗ್ಲಿಷ್ನಲ್ಲಿ ಕನಿಷ್ಟ ತೇರ್ಗಡೆ ಅಂಕ ಹೊಂದಿರಬೇಕು.
ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಅಭ್ಯರ್ಥಿಯ ವಯೋಮಿತಿ 18 ರಿಂದ 40 ವರ್ಷ. ಅಂಕಗಳ ಆಧಾರದಲ್ಲಿ ಆಯ್ಕೆ ನಡೆಯುವುದು. ಶಿವಮೊಗ್ಗ ಅಂಚೆ ವಿಭಾಗದಲ್ಲಿ 89 ಹುದ್ದೆಗಳು ಖಾಲಿ ಇವೆ.
ಹೆಚ್ಚಿನ ಮಾಹಿತಿಗೆ ಆಯಾ ವಿಭಾಗದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು. ಅಲ್ಲದೇ ಅರ್ಜಿ ಸಲ್ಲಿಕೆ, ಹುದ್ದೆಗಳ ಸಂಖ್ಯೆ ಸೇರಿದಂತೆ ಇತರೆ ಮಾಹಿತಿಗಾಗಿ www.indiapostgdsonline.gov.in ಜಾಲತಾಣಕ್ಕೆ ಭೇಟಿ ನೀಡಿ ಪಡೆಯಬಹುದಾಗಿದೆ.
BREAKING: ಬಾಲಿವುಡ್ ನಟಿ ‘ಜಾಹ್ನವಿ ಕಪೂರ್’ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು | Janhvi Kapoor