ಬೆಂಗಳೂರು : ಸೋಮವಾರದಿಂದ ಆರಂಭವಾಗಲಿರುವ ಎಸ್ ಎಸ್ ಎಲ್ ಸಿ ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿಯ ಸಂಭಾವನೆಯನ್ನು ಶೇ. 5 ರಷ್ಟು ಹೆಚ್ಚಿಸಲಾಗಿದೆ.
ಮಾರ್ಚ್/ಏಪ್ರಿಲ್-2024 ರ ಎಸ್ ಎಸ್ ಎಲ್ ಸಿ ಪರೀಕ್ಷೆ-1 ದನ್ನು ನಡೆಸಲು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸಾದಿಲ್ವಾರು ಹಾಗೂ ಸಂಭಾವನೆಯ ಪೂರ್ಣ ಹಣದ ಮೊತ್ತವನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಉಳಿತಾಯ ಖಾತೆಗೆ ನೆಫ್ಟ್ ಮೂಲಕ ಜಮಾ ಮಡಲಾಗಿದೆ.
ಅನಿವಾರ್ಯ ಸಂದರ್ಭದಲ್ಲಿ ನಮೂದಿಸಿರುವ ಹೆಸರಿನ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಬದಲಾವಣೆಯಾಗಿದ್ದಲ್ಲಿ, ಬದಲಿ ನಿಯೋಜಿತ ಮುಖ್ಯ ಅಧೀಕ್ಷಕರು ಮಂಡಳಿಯಿಂದ ನೆಫ್ಟ್ ಮುಖಾಂತರ ರವಾನಿಸಿದ ಹಣವನ್ನು ಬದಲಾದ ಮುಖ್ಯ ಅಧಿಕ್ಷಕರಿಗೆ ಹಸ್ತಾಂತರಿಸುವುದು, ಹಾಗೂ ಮಂಡಳಿಗೆ ವರದಿ ಮಾಡುವುದು. ಸಾದಿಲ್ವಾರು ಹಣ ಸ್ವೀಕೃತಿ ವ್ಯತ್ಯಯಾವಾಗಿರುವ ಬಗ್ಗೆ ಮನವಿಗಳನ್ನು ಪರೀಕ್ಷೆ ಮುಗಿದ ಒಂದು ತಿಂಗಳೊಳಗೆ ಮಂಡಲಿಗೆ ಪತ್ರ ಮುಖೇನ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ ಬಗೆಹರಿಸಿಕೊಳ್ಳುವುದು. ಪರೀಕ್ಷೆ ಮುಗಿದ 30 ದಿನಗಳ ನಂತರ ಬರುವ ಯಾವುದೇ ಮನವಿಯನ್ನು ಪರಿಗಣಿಸಲಾಗುವುದಿಲ್ಲ.
1. ಸಾದಿಲ್ವಾರು ಬಿಲ್ಲುಗಳನ್ನು ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು :
• ಸಾದಿಲ್ವಾರು ಸಾಮಗ್ರಿ ಖರೀದಿಸಿದ ರಸೀದಿ ಹಾಗೂ ಸಾದಿಲ್ವಾರು ವೆಚ್ಚದ ಮೂಲ ರಶೀದಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಅನಗತ್ಯ ವೆಚ್ಚ ಕಂಡು ಬಂದಲ್ಲಿ ಸಂಬಂಧಿಸಿದವರಿಂದ ಹಣ ವಸೂಲಿ ಮಾಡಲಾಗುವುದು.
ಸಾದಿಲ್ವಾರು ಬಿಲ್ಲುಗಳ ಸಹಿತ ಲಗತ್ತಿಸಿರುವ ಎಲ್ಲಾ ಮೂಲ ರಶೀದಿಗಳ ಮೇಲೆ ಮುಖ್ಯ ಅಧೀಕ್ಷಕರು ಹಣ ಸಂದಾಯಗೊಳಿಸಿ ರದ್ದುಗೊಳಿಸಿದೆ ಎಂದು ದೃಢೀಕರಿಸುವುದು.
ಖರ್ಚಾದ ಒಟ್ಟು ಹಣ ಬಗ್ಗೆ ಕ್ರೋಢೀಕೃತ ವಿವರಗಳನ್ನು ಸಾದಿಲ್ವಾರು ಬಿಲ್ಲಿನಲ್ಲಿ ನಮೂದಿಸಬೇಕು
2. ಉಲ್ಲೇಖ (2) ರಂತೆ ಪ್ರತಿ 24 ವಿದ್ಯಾರ್ಥಿಗಳಿಗೆ ಒಬ್ಬರು ಕೊಠಡಿ ಮೇಲ್ವಾಚಾರಕರನ್ನು ಹಾಗೂ ಹತ್ತು ಕೊಠಡಿ ಮೇಲ್ವಾಚಾರಕರಿಗೆ ಒಬ್ಬರಂತೆ ಮಾತ್ರ ರಿಲೀವರ್ ರನ್ನು ನೇಮಿಸಿಕೊಳ್ಳವುದು.
3. ಉಲ್ಲೇಖ (1) ರ ಸರ್ಕಾರದ ಆದೇಶ ಮತ್ತು ಉಲ್ಲೇಖ (4) ರನ್ವಯ, ಕಳೆದ ಬಾರಿ ಪರಿಷ್ಕೃಣೆ ಮಾಡಿದ ದರಗಳಿಗೆ ಈ ಬಾರಿಗೆ ಶೇ. 5ರಷ್ಟು ದರಗಳನ್ನು ಪರಿಷ್ಕರಿಸಿ ಕೆಳಕಂಡಂತೆ ಬಿಡುಗಡೆ ಮಾಡಲಾಗಿರುತ್ತದೆ. ಅದರಂತೆ ಸೂಕ್ತ ಕ್ರಮವಹಿಸಲು ಸೂಚಿಸಿದೆ. ಸಂಭಾವನೆಯನ್ನು ಈ ಕೆಳಗಿನ ದರದಲ್ಲಿ ನೀಡುವುದು.