Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಲಿಕಾನ್ ಸಿಟಿ ಜನತೆಗೆ ಗುಡ್ ನ್ಯೂಸ್: ಬೆಂಗಳೂರಲ್ಲಿ ಮತ್ತೊಂದು ‘ಸಸ್ಯೋದ್ಯಾನ’ ನಿರ್ಮಾಣ
KARNATAKA

ಸಿಲಿಕಾನ್ ಸಿಟಿ ಜನತೆಗೆ ಗುಡ್ ನ್ಯೂಸ್: ಬೆಂಗಳೂರಲ್ಲಿ ಮತ್ತೊಂದು ‘ಸಸ್ಯೋದ್ಯಾನ’ ನಿರ್ಮಾಣ

By kannadanewsnow0908/10/2024 5:53 PM

ಬೆಂಗಳೂರು: ಉತ್ತರ ಬೆಂಗಳೂರಲ್ಲಿ ಶ್ವಾಸತಾಣ ಅಂದರೆ ಲಂಗ್ ಸ್ಪೇಸ್ ಕೊರತೆ ಇದ್ದು, ಯಲಹಂಕ ಆರ್.ಟಿ.ಓ. ಬಳಿ ಇರುವ ಮಾದಪ್ಪನಹಳ್ಳಿಯ 153 ಎಕರೆ ಅರಣ್ಯ ಭೂಮಿಯಲ್ಲಿ ಕಬ್ಬನ್ ಪಾರ್ಕ್ ಮಾದರಿಯಲ್ಲಿ “ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ’ಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಅರಣ್ಯ ಭವನದಲ್ಲಿ ಸೋಮವಾರದಂದು ನಡೆದ ವನ್ಯಜೀವಿ ಸಪ್ತಾಹದ ಔಪಚಾರಿಕ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, 153 ಎಕರೆ ಅರಣ್ಯ ಭೂಮಿಯನ್ನು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಗುತ್ತಿಗೆ ನೀಡಲಾಗಿತ್ತು. ಈಗ ಗುತ್ತಿಗೆ ಅವಧಿ ಮುಗಿದಿದ್ದು, ಸಾಮಾಜಿಕ ಜವಾಬ್ದಾರಿ- ಇಲಾಖೆ ಮತ್ತು ಸಿ.ಎಸ್.ಆರ್ ನಿಧಿಯ ನೆರವಿನೊಂದಿಗೆ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಒಂದು ಸಸ್ಯೋದ್ಯಾನ ಮಾಡಲಾಗುವುದು ಎಂದರು.

ಯಲಹಂಕ ಸುತ್ತುಮುತ್ತ ಬೆಂಗಳೂರು ವ್ಯಾಪಕವಾಗಿ ಬೆಳೆದಿದೆ. ಈ ಹಿನ್ನೆಯಲ್ಲಿ ಜನರಿಗೆ ಅನುಕೂಲವಾಗುವಂತೆ ಇಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಸ್ಥಾಪಿಸಿದಲ್ಲಿ ಅದು ಅತ್ಯಂತ ಆಕರ್ಷಣೀಯ ತಾಣವಾಗುತ್ತದೆ ಎಂದರು.

ಬೆಂಗಳೂರು ನಗರವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಭಾರತದ ಗಾರ್ಡನ್ ಸಿಟಿ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ಭಾರತೀಯ ಅರಣ್ಯ ಸಮೀಕ್ಷಾ ವರದಿಯಂತೆ ಬೆಂಗಳೂರು ನಗರವು ಭಾರತದಲ್ಲಿ ಮೂರನೇ ಅತಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ನಗರವಾಗಿದ್ದು, ಸುಮಾರು 89 ಚದರ ಕಿಲೋಮೀಟರ್‌ನಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಬೆಂಗಳೂರಿನ ವೃಕ್ಷ ಹೊದಿಕೆ ಶೇ.6.81 ರಷ್ಟಿದೆ. ಕಳೆದ 10 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ 5 ಚದರ ಕಿಲೋಮೀಟರ್‌ ನಷ್ಟು ಹಸಿರು ಹೊದಿಕೆ ಕಡಿಮೆಯಾಗಿದೆ ಎಂದರು.

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಉದ್ಯಾನ ನಗರಿ ಎನ್ನುವ ಹೆಗ್ಗಳಿಕೆಯನ್ನು ಮರುಸ್ಥಾಪಿಸಲು ಇಲಾಖೆಯು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಇನ್ನು ಹೆಚ್ಚು ಹೆಚ್ಚಾಗಿ ಮಾಡಬೇಕಾಗಿದೆ. ಜೊತೆಗೆ ರಾಜಧಾನಿಯಲ್ಲಿ ಒತ್ತುವರಿಯಾಗಿರುವ ಅರಣ್ಯಭೂಮಿಯನ್ನು ಮರಳಿ ವಶಕ್ಕೆ ಪಡೆಬೇಕಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ವನ್ಯ ಜೀವಿಗಳನ್ನು ನೋಡಲೆಂದೇ ಅರಣ್ಯದಲ್ಲಿ ಸಫಾರಿಗೆ ಮತ್ತು ಮೃಗಾಲಯಗಳಿಗೆ ಜನರು ಹೋಗುತ್ತಾರೆ. ಸಫಾರಿಯಲ್ಲಿ ಹುಲಿ, ಚಿರತೆ, ಕರಡಿ, ಗರಿಬಿಚ್ಚಿ ನರ್ತಿಸುವ ನವಿಲು ಕಂಡರೆ ಮಂತ್ರಮುಗ್ಧರಾಗುತ್ತಾರೆ. ಅದೇ ವನ್ಯಜೀವಿಗಳು ಕಾಣದಿದ್ದರೆ ಬೇಸರಗೊಳ್ಳುತ್ತಾರೆ. ಮನಸ್ಸಿಗೆ ಇಷ್ಟು ಸಂತೋಷ, ಮುದ ನೀಡುವ ವನ್ಯ ಮೃಗಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

ಈ ಹಿನ್ನೆಲೆಯಲ್ಲಿ ವನ್ಯ ಮೃಗಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಜನರಲ್ಲಿ ಅರಿವು ಮೂಡಿಸಲು ಮುಂದಿನ ಪೀಳಿಗೆಗೆ ವನ್ಯ ಮೃಗಗಳ ಮಹತ್ವ ತಿಳಿಸಲು ಪ್ರತಿವರ್ಷ ಅಕ್ಟೋಬರ್ 2ರಿಂದ 8ರವರೆಗೆ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ -ಅರಣ್ಯ ಕಾರ್ಯಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್, ಮುಖ್ಯ ವನ್ಯ ಜೀವಿ ಪರಿಪಾಲಕರಾದ ಸುಭಾಷ್ ಮಾಲ್ಖಡೆ ಮತ್ತಿತರರು ಪಾಲ್ಗೊಂಡಿದ್ದರು.

“ಇನ್ನೊಮ್ಮೆ ಇಂತಹ ಅನಕ್ಷರಸ್ಥರನ್ನ ಆಹ್ವಾನಿಸಬೇಡಿ” : ‘ಝಾಕಿರ್ ನಾಯ್ಕ್’ ಗೌರವಿಸಿದ ಸರ್ಕಾರಕ್ಕೆ ‘ಪಾಕಿಸ್ತಾನಿ’ಯರ ತರಾಟೆ

ಇಂದು ‘ನಟ ದರ್ಶನ್’ಗೆ ಸಿಗದ ರಿಲೀಫ್: ನಾಳೆಗೆ ಕೊಲೆ ಕೇಸ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ | Actor Darshan

BIG BREAKING: ಶೀಘ್ರವೇ ಕರ್ನಾಟಕದಲ್ಲಿ ‘ಜಾತಿ ಗಣತಿ ವರದಿ’ಯನ್ನು ಜಾರಿ: ಸಿಎಂ ಸಿದ್ಧರಾಮಯ್ಯ ಘೋಷಣೆ | CM Siddaramaiah

Share. Facebook Twitter LinkedIn WhatsApp Email

Related Posts

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM1 Min Read

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM2 Mins Read

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM2 Mins Read
Recent News

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

15/03/2026 10:37 PM

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಆಧುನಿಕ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು: ಇಲ್ಲಿದೆ ಕಾರಣ ಹಾಗೂ ಪರಿಹಾರ

15/03/2026 9:49 PM

ಸುರಕ್ಷಿತ ಲೈಂಗಿಕತೆ: ಆರೋಗ್ಯಕರ ಜೀವನಕ್ಕೆ ಒಂದು ಮಾರ್ಗದರ್ಶಿ, ಇಲ್ಲಿದೆ ಟಿಪ್ಸ್

15/03/2026 9:43 PM
State News
KARNATAKA

ಸಿದ್ದರಾಮಯ್ಯಗೆ 100 ಕುರಿ ಲೆಕ್ಕ ಹಾಕಲು ಬರಲ್ಲ ಅಂದಿದ್ದರು ಲಂಕೇಶ್; ಅದನ್ನು ಸವಾಲಾಗಿ ಸ್ವೀಕರಿಸಿದ್ದೆ, ಹಳೆ ನೆನಪು ಬಿಚ್ಚಿಟ್ಟ ಸಿಎಂ

By kannadanewsnow0915/03/2026 10:37 PM KARNATAKA 1 Min Read

​ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿವಂಗತ ಸಾಹಿತಿ ಹಾಗೂ ಪತ್ರಕರ್ತ ಪಿ. ಲಂಕೇಶ್‌ ಅವರೊಂದಿಗಿನ ತಮ್ಮ ಒಡನಾಟ ಮತ್ತು ಲಂಕೇಶ್‌ ಪತ್ರಿಕೆಯಲ್ಲಿ…

ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ; ಚಿತ್ರದುರ್ಗದ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು, ಗೋಡೌನ್‌ನಲ್ಲೇ ಲಕ್ಷಾಂತರ ಮೊಟ್ಟೆಗಳು ಲಾಕ್!

15/03/2026 9:58 PM

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

15/03/2026 9:00 PM

ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಬರಬೇಕು: ಸಂಸದ ಬಸವರಾಜ ಬೊಮ್ಮಾಯಿ

15/03/2026 7:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.