ಬೆಂಗಳೂರು: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಮೇಟ್ರಿಕ್ ನಂತರ ವ್ಯಾಸಂಗ ಮಾಡುವ ಎಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಆಸಕ್ತರು ಸದುಪಯೋಗ ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಬಹುದು.
ಪರಿಶಿಷ್ಟಜಾತಿಯ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ 69ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಯೋಜನೆ ಜಾರಿಗೆ ತರಲಾಗಿದ್ದು, ಆಯಾ ರಾಜ್ಯಗಳ ವಿದ್ಯಾರ್ಥಿವೇತನ ಪೋರ್ಟಲ್ಗಳ ಮೂಲಕ ಅರ್ಜಿ ಸಲ್ಲಿಸಬಹುದು. ಪಾಲಕರ ವಾರ್ಷಿಕ ಆದಾಯ 2.5ಲಕ್ಷ ಮೀರಿರಬಾರದು. ಕಾಲೇಜಿನ ಟ್ಯೂಷನ್ ಶುಲ್ಕ ಸೇರಿ ವಾರ್ಷಿಕವಾಗಿ 2,500 ರೂ.ನಿಂದ 13,500 ರೂ. ಶೈಕ್ಷಣಿಕ ಭತ್ಯೆ (ಅಂಗವಿಕಲರಿಗೆ ಶೇ.10 ಹೆಚ್ಚಳ) ಪಾವತಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ http://socialjustice.gov.in/ schemes/25 ವೆಬ್ಸೈಟ್ ಪರಿಶೀಲಿಸಬಹುದು.