ಮಡಿಕೇರಿ : ಪ್ರಸಕ್ತ(2024-25) ಸಾಲಿನ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಡಿ ಸಹಾಯಧನದಲ್ಲಿ ಕೃಷಿ ಉಪಕರಣಗಳನ್ನು ವಿತರಿಸಲಾಗುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ.50ರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.90 ರ ರಿಯಾಯಿತಿಯಲ್ಲಿ ಮಿನಿ ಟ್ರಾಕ್ಟರ್, ಪವರ್ ಟಿಲ್ಲರ್, ರೋಟೋವೇಟರ್, ಕಳೆ ಕೊಚ್ಚುವ ಯಂತ್ರಗಳು(ಪವರ್ ವೀಡರ್), ಪವರ್ ಸ್ಪ್ರೇಯರ್, ಡೀಸೆಲ್ ಪಂಪ್ ಸೆಟ್, ಮೊಟೋಕರ್ಟಗಳನ್ನು ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳಾದ ಪ್ರೋರ್ ಮಿಲ್, ಮಿನಿ ರೈಸ್ ಮಿಲ್, ರಾಗಿ ಕ್ಲೀನಿಂಗ್ ಮಿಶನ್, ಚಿಲ್ಲಿಪೌಡರಿಂಗ್ ಮಿಶನ್, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು ಮತ್ತು ಇತರೆ ಕೃಷಿ ಉಪಕರಣಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ.
ಆಸಕ್ತ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯ ರೈತರು ಪಹಣಿ(ಆರ್‍ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಒಂದು ಭಾವಚಿತ್ರ, ರೂ.100ರ ಛಾಪಾ ಕಾಗದದೊಂದಿಗೆ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವಂತೆ ವಿರಾಜಪೇಟೆ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಈ ಮಾರ್ಗದಲ್ಲಿ ವಿಶೇಷ ಸಾಪ್ತಾಹಿಕ ರೈಲು ಸಂಚಾರ | South Western Railway
BREAKING: ಕೆಇಎಯಿಂದ UG CET, UG NEETಗೆ 2ನೇ ಸುತ್ತಿನ ಸೀಟು ಹಂಚಿಕೆಗೆ ವೇಳಾಪಟ್ಟಿ ಪ್ರಕಟ