ಬೆಂಗಳೂರು: ರಾಜ್ಯ ಸರ್ಕಾರದಿಂದ ಎಸ್ಟಿ, ಎಸ್ಸಿ ಬಿಪಿಎಲ್ ಕುಟುಂಬಗಳಿಗೆ 75 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಈಗಾಗಲೇ ಯೋಜನೆಗೆ ಚಾಲನೆ ನೀಡಲಾಗಿದ್ದು, ಇಂತಹ ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿಸೋದಕ್ಕಾಗಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.  

ಇಂದು ವಿಧಾನಸೌಧದಲ್ಲಿ 2022-23ನೇ ಸಾಲಿನ ಎಸ್ ಸಿ ಎಸ್ ಪಿ, ಟಿಎಸ್ ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಎಸ್ಸಿ, ಎಸ್ಟಿ ಬಿಪಿಎಲ್ ಕುಟುಂಬಗಳಿಗೆ ಉಚಿತ 75 ಯುನಿಟ್ ವಿದ್ಯುತ್ ಸರಬರಾಜು ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಿಂದೂ, ಮುಸ್ಲೀಂ ಯುವಕರ ಹತ್ಯೆ ಎಂದು ತಾರತಮ್ಯವಿಲ್ಲದೇ ಪರಿಹಾರ ನೀಡಿ – ಮಂತ್ರಾಲಯ ಶ್ರೀ

ಅಂದಹಾಗೇ, ರಾಜ್ಯದ ಎಲ್ಲಾ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಿಪಿಎಲ್ ಕಾರ್ಡ ( BPL Card ) ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಳ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ( 75 units of free electricity ) ನೀಡುವ ಯೋಜನೆ ಇದಾಗಿದೆ.

ಈ ಯೋಜನೆ ಕುರಿತು ರಾಜ್ಯದ ಎಲ್ಲಾ ಎಸ್ಕಾಂಗಳು ಎಸ್ ಸಿ-ಎಸ್ ಟಿ ಗ್ರಾಹಕರಿಗೆ ಅರಿವು ಮೂಡಿಸಿದ್ದು ವಿದ್ಯುತ್ ಮೀಟರ್ ಮಾಪಕರು ಮತ್ತು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಮನೆ ಮನೆಗೆ ತೆರಳಿ ಈ ಯೋಜನೆಯ ಕುರಿತು ಕರ ಪತ್ರಗಳನ್ನು ಹಂಚಿದ್ದಾರೆ.

BREAKING NEWS: ಹುಬ್ಬಳ್ಳಿಯಲ್ಲಿ ಇಂದು ರಾತ್ರಿ 8ಕ್ಕೆ ನಿಗದಿಯಾಗಿದ್ದ ರಾಹುಲ್ ಗಾಂಧಿ ನೇತೃತ್ವದ ಕೆಪಿಸಿಸಿ ಸಭೆ ದಿಢೀರ್ ರದ್ದು

ಬೆಸ್ಕಾಂ, ಸೆಸ್ಕಾಂ, ಜೆಸ್ಕಾಂ, ಹೆಸ್ಕಾಂ ಮತ್ತು ಮೆಸ್ಕಾಂ ಕಂಪನಿಗಳು ಈಗಾಗಲೇ ಈ ಕುರಿತು ಅರಿವು ಮೂಡಿಸುವ ಅಭಿಯಾನವನ್ನು ಆರಂಭಿಸಿದ್ದು, ಎಸ್ಸಿ ಎಸ್ಟಿ ಗ್ರಾಹಕರು ಯೋಜನೆ ಲಾಭ ಪಡೆಯಲು ಉತ್ಸುಹಕರಾಗಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ. ಬಿ.ಆರ್ .ಅಂಬೇಡ್ಕರ್ 115 ನೇ ಜಯಂತಿಯಂದು ಈ ಯೋಜನೆಯನ್ನು ಘೋಷಣೆ ಮಾಡಿದ್ದರು. ಈ ಯೋಜನೆ ಜುಲೈ ತಿಂಗಳಿಂದ ಬೆಸ್ಕಾಂನ 8 ಜಿಲ್ಲೆಯಲ್ಲಿ ಕಾರ್ಯಗತಗೊಂಡಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳು ತಾವು ಬಳಸುವ ವಿದ್ಯುತ್ ಪ್ರಮಾಣದಲ್ಲಿ 75 ಯೂನಿಟ್ ನವರೆಗೆ ಉಚಿತವಾಗಿ ಪಡೆಯಲಿದೆ.

ಬಳ್ಳಾರಿಯಲ್ಲಿ ವೇದಾವತಿ ನದಿಯಲ್ಲಿ ಸಿಲುಕಿ 25 ಕಾರ್ಮಿಕರ ಪರದಾಟ: 2 ಗಂಟೆಯೇ ಕಳೆದರೂ ಬಾರದ ರಕ್ಷಣಾ ಸಿಬ್ಬಂದಿ

75 ಯೂನಿಟ್ ವರೆಗಿನ ವಿದ್ಯುತ್ ಶುಲ್ಕದ ಮೊತ್ತವನ್ನು ಎಸ್. ಸಿ-ಎಸ್.ಟಿ ಗ್ರಾಹಕರಿಗೆ ಡಿಬಿಟಿ ಮೂಲಕ ಸರ್ಕಾರ ಪಾವತಿಸಲಿದೆ. ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರವನ್ನು ಗ್ರಾಹಕರು ಒದಗಿಸಿ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗ್ರಾಹಕರ ಸಂಖ್ಯೆ ಮತ್ತು ಅವರು ಪ್ರತಿ ತಿಂಗಳು ಬಳಸಿರುವ 75 ಯೂನಿಟ್ ಗೆ ಸರ್ಕಾರದಿಂದ ಪಾವತಿಸಬೇಕಾದ ಸಬ್ಸಿಡಿ ಮೊತ್ತದ ಮಾಹಿತಿ ಕ್ರೋಡಿಕರಿಸಲು ಬೆಸ್ಕಾಂ ಸಾಫ್ಟ್ ವೇರ್ ಒಂದನ್ನುಅಭಿವೃದ್ದಿ ಪಡಿಸಿದೆ.

Share.
Exit mobile version