ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಪರಿಶಿಷ್ಠ ಪಂಗಡದ ನಿರುದ್ಯೋಗಿ ಯುವಕ ಯುವತಿಯರಿಗೆ 2023-24ನೇ ಸಾಲಿನ ಕೌಶಲ್ಯಭಿವೃದ್ಧಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಉತ್ತರಕನ್ನಡ ಲೋಕಸಭಾ ಕ್ಷೇತ್ರಕ್ಕೆ ಅನಂತಕುಮಾರ್ ‘ಹೆಗ್ಡೆ’ ಬದಲು ಚಕ್ರವರ್ತಿ ‘ಸೂಲಿಬೆಲೆ’ ಸ್ಪರ್ಧೆ?
BREAKING: ಚುನಾವಣಾ ಬಾಂಡ್ ಸಂಖ್ಯೆಗಳನ್ನು SBI ಬಹಿರಂಗಪಡಿಸಬೇಕು: ಸುಪ್ರೀಂ ಕೋರ್ಟ್ ಸೂಚನೆ!
ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನ 571 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳ ಖರೀದಿ : ವರದಿ
ಆಸಕ್ತ ಅರ್ಹ ಅಭ್ಯರ್ಥಿಗಳು ಮಾ.28ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಕೌಶಲ್ಯಭಿವೃದ್ಧಿ ತರಬೇತಿಯಡಿ 60 ದಿನಗಳ ಸ್ವಯಂ ಉದ್ಯೋಗದ ಟೈಲರ್, ಹಾಗೂ 30 ದಿನಗಳ ಬೋಟಿಕ್, ಸಹಾಯಕ ಕೂದಲು ಚಿಕಿತ್ಸಕ, ವಸ್ತ್ರ ವಿನ್ಯಾಸಕಾರ, ಯಂತ್ರಾಂಶ ದುರಸ್ತಿ ತಂತ್ರಜ್ಞ, ಹೇರ್ ಸ್ಟೈಲಿಸ್ಟ್, ಸೌಂದರ್ಯ ಚಿಕಿತ್ಸಕ, ಡೇಟಾ ಎಂಟ್ರಿ ಆಪರೇಟರ್, ಸೌರ ಫಲಕ ಸ್ಥಾಪನೆ ಮತ್ತು ಸೇವೆಗಳ ತರಬೇತಿಯನ್ನು ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗಳನ್ನು ಸಂಪರ್ಕ ಮಾಡಬಹುದಾಗಿದೆ.