Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Ramadan Timetable 2026: ರಂಜಾನ್ ಉಪವಾಸ ಯಾವಾಗ ಶುರು? ಇಲ್ಲಿದೆ ಸಹರಿ, ಇಫ್ತಿಯಾರ್ ವೇಳಾಪಟ್ಟಿ

16/02/2026 1:35 PM

ALERT : ನಿಮ್ಮ ದೇಹದ ಮೇಲಿನ `ಕೊಬ್ಬಿನ ಗಡ್ಡೆ’ ಇದೆಯಾ? ಕರಗಲು ಜಸ್ಟ್ ಹೀಗೆ ಮಾಡಿ !

16/02/2026 1:28 PM

ದೆಹಲಿಯಲ್ಲಿ ಕೃತಕ ಬುದ್ಧಿಮತ್ತೆಯ ಮೇಳ! 600ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು, ಲಕ್ಷಾಂತರ ವೀಕ್ಷಕರು: AI ಕ್ರಾಂತಿಗೆ ಭಾರತ ಸಜ್ಜು

16/02/2026 1:25 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಗ್ರಾಮೀಣ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : `ಇ-ಸ್ವತ್ತು’ ಮೂಲಕ ನಮೂನೆ-9, 11-ಎ ವಿತರಣೆ : ಸರ್ಕಾರದಿಂದ ಮಹತ್ವದ ಆದೇಶ
KARNATAKA

ರಾಜ್ಯದ ಗ್ರಾಮೀಣ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : `ಇ-ಸ್ವತ್ತು’ ಮೂಲಕ ನಮೂನೆ-9, 11-ಎ ವಿತರಣೆ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5725/11/2025 5:53 AM

ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಪ್ರಕರಣ 94-ಸಿ, 94-ಸಿಸಿ ಹಾಗೂ 94-ಡಿ ರಡಿಯಲ್ಲಿ ನಿವೇಶನ ಮತ್ತು ಮನೆ ನೀಡುವ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11-ಎ ನೀಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಪ್ರಕರಣ 94-ಸಿ, 94-ಸಿಸಿ ಹಾಗೂ 94-ಡಿ ರಡಿಯಲ್ಲಿ ನಿವೇಶನ ಮತ್ತು ಮನೆ ನೀಡುವ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11-ಎ ನೀಡಲು ಕೈಗೊಳ್ಳಬೇಕಾದ ಪ್ರಕ್ರಿಯೆಗಳ ಬಗ್ಗೆ ಉಲ್ಲೇಖ (1) ರಲ್ಲಿ ಸರ್ಕಾರದಿಂದ ಆದೇಶ ಹೊರಡಿಸಲಾಗಿರುತ್ತದೆ.

ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಪ್ರಕರಣ 94-ಡಿ ರಡಿಯಲ್ಲಿ ಕಂದಾಯ ಇಲಾಖೆಯಿಂದ ವಿತರಣೆ ಮಾಡಲಾದ ಹಕ್ಕು ಪತ್ರಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಗಳಲ್ಲಿ ಉಂಟಾದ ಗೊಂದಲಗಳಿಗೆ ಉಲ್ಲೇಖ (2) ರಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸದರಿ ಸಭೆಯ ನಡವಳಿಯಂತೆ ಈ ಕೆಳಕಂಡಂತೆ ಕ್ರಮ ವಹಿಸಲು ತಿಳಿಸಿದೆ.

1. ಕಂದಾಯ ಇಲಾಖೆಯ ತಂತ್ರಾಂಶದ ಮೂಲಕ ತಹಶೀಲ್ದಾರರಿಂದ ಸ್ವೀಕರಿಸಲಾದ ಹಕ್ಕು ಪತ್ರಗಳಲ್ಲಿ ತಪ್ಪಾದ/ಅಪೂರ್ಣ (ವಿಸ್ತೀರ್ಣ, ಚಕ್ಕುಬಂಧಿ ಇತ್ಯಾದಿ) ಮಾಹಿತಿಯಿದ್ದಲ್ಲಿ, ಅಂತಹ ಹಕ್ಕು ಪತ್ರಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ PID ತಯಾರಿಸಿದ ಇ-ಸ್ವತ್ತು ತಂತ್ರಾಂಶದಲ್ಲಿ ತಿರಸ್ಕರಿಸುವುದು.
2. ತಪ್ಪಾದ/ಅಪೂರ್ಣ ಮಾಹಿತಿಯುಳ್ಳ ಹಕ್ಕುಪತ್ರಗಳಿಗೆ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ PID ಗಳನ್ನು ಸೃಜಿಸಿರುವ ಸಂದರ್ಭಗಳಿದ್ದಲ್ಲಿ XML ಫೈಲ್‌ಗಳನ್ನು ರಿಜೆಕ್ಟ್ ಮಾಡುವುದು, ಈಗಾಗಲೇ, ಒಂದು ವೇಳೆ ನೋಟೀಸ್ ಸೃಜಿಸಿ 15 ದಿನಗಳ ಮ್ಯುಟೇಷನ್ ಅವಧಿಯಲ್ಲಿದ್ದಲ್ಲಿ ಅಂತಹ PID ಗಳನ್ನು ಅನುಮೋದಿಸದ ಫಲಾನುಭವಿಗಳ ಮಾಹಿತಿಯನ್ನು ತಹಶೀಲ್ದಾರರಿಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಸಲ್ಲಿಸುವುದು.

3. ತಹಶೀಲ್ದಾರರಿಂದ ಸ್ವೀಕರಿಸಲಾದ ಹಕ್ಕು ಪತ್ರಗಳ ವಿವರಗಳನ್ವಯ ಈಗಾಗಲೇ ಗ್ರಾಮ ಪಂಚಾಯಿತಿಯ ಪಂಚತಂತ್ರ ತಂತ್ರಾಂಶದಲ್ಲಿ ಫಲಾನುಭವಿಯ ವಿವರಗಳು ಇದ್ದಲ್ಲಿ ತಹಶೀಲ್ದಾರರಿಂದ ಸ್ವೀಕರಿಸಲಾದ ಹಕ್ಕು ಪತ್ರಗಳಿಗೆ ಹೊಸದಾಗಿ ಇ-ಸ್ವತ್ತು ತಂತ್ರಾಂಶದಲ್ಲಿ PID ಸೃಜಿಸದೆ, ಪಂಚತಂತ್ರ ತಂತ್ರಾಂಶದಲ್ಲಿನ ಆಸ್ತಿಯ PID ಗೆ ಹಕ್ಕು ಪತ್ರವನ್ನು ಜೋಡಣೆ ಮಾಡುವುದು. ಈ ಪ್ರಕರಣದಲ್ಲಿ ನೊಂದಣಿಯ ಅಗತ್ಯ ಇರುವುದಿಲ್ಲ.

4. ಪಂಚತಂತ್ರ ತಂತ್ರಾಂಶದಲ್ಲಿನ ಮಾಹಿತಿಗೆ ಹಕ್ಕು ಪತ್ರವನ್ನು ಜೋಡಣೆ ಮಾಡದೆಯೇ, ಹಕ್ಕು ಪತ್ರಗಳಿಗೆ ಹೊಸದಾಗಿ ಇ-ಸ್ವತ್ತು ತಂತ್ರಾಂಶದಲ್ಲಿ PID ಸೃಜಿಸಲಾಗಿದ್ದರೆ, ಪಂಚತಂತ್ರದಲ್ಲಿನ ಹಳೆಯ PIDಯನ್ನು ನಿಷ್ಕ್ರಿಯಗೊಳಿಸುವುದು (Disable).

5. ಪಂಚತಂತ್ರ ತಂತ್ರಾಂಶದಲ್ಲಿನ ಮಾಹಿತಿಗೆ ಹಕ್ಕು ಪತ್ರವನ್ನು ಜೋಡಣೆ ಮಾಡದೆಯೇ, ಹಕ್ಕು ಪತ್ರಗಳಿಗೆ ಹೊಸದಾಗಿ ಇ-ಸ್ವತ್ತು ತಂತ್ರಾಂಶದಲ್ಲಿ PID ಸೃಜಿಸಲಾಗಿದ್ದು ಮತ್ತು ಪಂಚತಂತ್ರ ತಂತ್ರಾಂಶದಲ್ಲಿನ PID ಯನ್ನು ಇ-ಸ್ವತ್ತು ತಂತ್ರಾಂಶದಲ್ಲಿಒಂದಕ್ಕಿಂತ ಹೆಚ್ಚು ಬಾರಿ ವರ್ಗಾವಣೆಗೆ ಒಳಪಡಿಸಿದ್ದರೆ, ಅಂತಹ ಸಂದರ್ಭದಲ್ಲಿ ಹಕ್ಕು ಪತ್ರಗಳನ್ವಯ ಸೃಜಿಸಲಾಗಿರುವ PID ಯ XML File ಗೆ ಗ್ರಾಮ ಪಂಚಾಯಿತಿಯಿಂದ ನೋಟೀಸ್ ಸೃಜಿಸದೆ, XML File ಅನ್ನು ರಿಜೆಕ್ಟ್ ಮಾಡುವುದು. ಒಂದು ವೇಳೆ ನೋಟೀಸ್ ಸೃಜಿಸಿ, 15 ದಿನಗಳ ಮ್ಯುಟೇಷನ್ ಅವಧಿಯಲ್ಲಿದ್ದರೇ, ಅಂತಹ PID ಗಳನ್ನು ಅನುಮೋದಿಸದೆ ಫಲಾನುಭವಿಗಳ ಮಾಹಿತಿಯನ್ನು ತಹಶೀಲ್ದಾರರಿಗೆ ಮುಂದಿನ ಸೂಕ್ತ ತಿದ್ದುಪಡಿಗೆ ವರ್ಗಾಯಿಸುವುದು.

6. ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಪ್ರಕರಣ 94-ಡಿ ರಡಿಯಲ್ಲಿ ವಾಸದ ಮನೆಗಳಿಗೆ ಹಾಗೂ ಹೊಂದಿಕೊಂಡಿರುವ ಜಾಗಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿರುತ್ತದೆ. ಪ್ರಸ್ತುತ, ವಿತರಣೆ ಮಾಡಲಾಗಿರುವ ಹಕ್ಕು ಪತ್ರಗಳಲ್ಲಿ ನಿವೇಶನದ ಮಾಹಿತಿ ಮಾತ್ರ ಲಭ್ಯವಿರುವುದರಿಂದ ಕಾವೇರಿ ತಂತ್ರಾಂಶದಿಂದ ಗ್ರಾಮ ಪಂಚಾಯಿತಿಗಳು ಫಲಾನುಭವಿ ಹೆಸರಿಗೆ ಸ್ವೀಕರಿಸುವ XML File ಗಳನ್ನು ಮ್ಯುಟೇಷನ್ ಪ್ರಕ್ರಿಯೆಗೆ ಒಳಪಡಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು, 15 ದಿನಗಳ ನೋಟೀಸ್ ಅವಧಿಯಲ್ಲಿ ಹಕ್ಕು ಪತ್ರಗಳಲ್ಲಿನ ವಿವರಗಳಿಗೆ ಅನುಗುಣವಾಗಿ ಮನೆಗಳ ಸ್ಥಳ ಪರಿಶೀಲನೆ ಮಾಡಿ ಕಟ್ಟಡಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಹಜರಿನೊಂದಿಗೆ ಲಿಖಿತವಾಗಿ ಫಲಾನುಭವಿಯಿಂದ ಪಡೆದು ಫಲಾನುಭವಿಯ ಹೆಸರನ್ನು ಇ-ಸ್ವತ್ತು ತಂತ್ರಾಂಶದಲ್ಲಿ ಅನುಮೋದನೆ ಮಾಡಿದ ನಂತರ, ಪುನಃ ಮ್ಯಾನ್ಯುಯಲ್ ಮ್ಯುಟೇಷನ್ ಮಾಡುವ ಮೂಲಕ (ಸ್ವತ್ತಿನ ಪ್ರಕಾರ) ನಿವೇಶನದ ವಿವರದೊಂದಿಗೆ ಕಟ್ಟಡದ ಮಾಹಿತಿಯನ್ನು ತಂತ್ರಾಂಶದಲ್ಲಿ ಇಂಧೀಕರಿಸುವ ಮೂಲಕ ಫಲಾನುಭವಿಯ ಹೆಸರಿಗೆ ನಮೂನೆಗಳ ವಿತರಣೆಗೆ ಕ್ರಮ ವಹಿಸುವುದು.

7. ಹಕ್ಕು ಪತ್ರಗಳ ಷರತ್ತುಗಳನ್ವಯ ಫಲಾನುಭವಿಗಳು ಪಡೆದ ಆಸ್ತಿಯನ್ನು 15 ವರ್ಷಗಳ ಅವಧಿಯವರಗೆ ಪರಭಾರೆ ಮಾಡದ ಅಂಶವನ್ನು ಇ-ಸ್ವತ್ತು ತಂತ್ರಾಂಶದ ಹಕ್ಕುಗಳು ಮತ್ತು ಋಣಗಳು ಕಾಲಂನಲ್ಲಿ ಸ್ವಯಂ ಚಾಲಿತವಾಗಿ (Automatic) ದಾಖಲಾಗಿರುವುದನ್ನು ಹಾಗೂ ಇ-ಸ್ವತ್ತು ನಮೂನೆಗಳಲ್ಲಿ ದಾಖಲಾಗಿರುವುದರ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ದೃಢೀಕರಿಸಿಕೊಳ್ಳುವುದು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸೇರಿದ ಕಟ್ಟಡ/ನಿವೇಶನ PTCL ವ್ಯಾಪ್ತಿಗೆ ಒಳಪಡುವುದರಿಂದ PTCL ಕಾಯ್ದೆಯಂತೆ ಕ್ರಮ ವಹಿಸುವುದು.

ಮೇಲ್ಕಂಡ ಎಲ್ಲಾ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಎಲ್ಲಾ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತಿಯ ಇತರ ಎಲ್ಲಾ ಅಧಿಕಾರಿಗಳು, ಎಲ್ಲಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರುಗಳು, ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಸೂಚಿಸಿದೆ.

11-A through `e-Svatthu`: Important order from the government Good news for rural property owners in the state: Distribution of Form-9
Share. Facebook Twitter LinkedIn WhatsApp Email

Related Posts

Ramadan Timetable 2026: ರಂಜಾನ್ ಉಪವಾಸ ಯಾವಾಗ ಶುರು? ಇಲ್ಲಿದೆ ಸಹರಿ, ಇಫ್ತಿಯಾರ್ ವೇಳಾಪಟ್ಟಿ

16/02/2026 1:35 PM2 Mins Read

ALERT : ನಿಮ್ಮ ದೇಹದ ಮೇಲಿನ `ಕೊಬ್ಬಿನ ಗಡ್ಡೆ’ ಇದೆಯಾ? ಕರಗಲು ಜಸ್ಟ್ ಹೀಗೆ ಮಾಡಿ !

16/02/2026 1:28 PM2 Mins Read

BREAKING : ನಟ ದರ್ಶನ್‌ ಹುಟ್ಟು ಹಬ್ಬದಂದು ಪವಿತ್ರಾಗೌಡಗೆ ಬಿಗ್ ಶಾಕ್ : ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ

16/02/2026 12:56 PM1 Min Read
Recent News

Ramadan Timetable 2026: ರಂಜಾನ್ ಉಪವಾಸ ಯಾವಾಗ ಶುರು? ಇಲ್ಲಿದೆ ಸಹರಿ, ಇಫ್ತಿಯಾರ್ ವೇಳಾಪಟ್ಟಿ

16/02/2026 1:35 PM

ALERT : ನಿಮ್ಮ ದೇಹದ ಮೇಲಿನ `ಕೊಬ್ಬಿನ ಗಡ್ಡೆ’ ಇದೆಯಾ? ಕರಗಲು ಜಸ್ಟ್ ಹೀಗೆ ಮಾಡಿ !

16/02/2026 1:28 PM

ದೆಹಲಿಯಲ್ಲಿ ಕೃತಕ ಬುದ್ಧಿಮತ್ತೆಯ ಮೇಳ! 600ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು, ಲಕ್ಷಾಂತರ ವೀಕ್ಷಕರು: AI ಕ್ರಾಂತಿಗೆ ಭಾರತ ಸಜ್ಜು

16/02/2026 1:25 PM

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ 61 ರನ್ ಗಳ ಭರ್ಜರಿ ಗೆಲುವಿನ ನಂತರ ಪಾಕಿಸ್ತಾನವನ್ನು ಅಪಹಾಸ್ಯ ಮಾಡಿದ ಗೂಗಲ್!

16/02/2026 1:24 PM
State News
KARNATAKA

Ramadan Timetable 2026: ರಂಜಾನ್ ಉಪವಾಸ ಯಾವಾಗ ಶುರು? ಇಲ್ಲಿದೆ ಸಹರಿ, ಇಫ್ತಿಯಾರ್ ವೇಳಾಪಟ್ಟಿ

By kannadanewsnow5716/02/2026 1:35 PM KARNATAKA 2 Mins Read

ನವದೆಹಲಿ : ಪ್ರಪಂಚದಾದ್ಯಂತ ಮುಸ್ಲಿಮರು ಪವಿತ್ರ ರಂಜಾನ್ ತಿಂಗಳ ಆರಂಭವನ್ನು ಎದುರು ನೋಡುತ್ತಿರುವ ಸಮಯ ಇದು. ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ…

ALERT : ನಿಮ್ಮ ದೇಹದ ಮೇಲಿನ `ಕೊಬ್ಬಿನ ಗಡ್ಡೆ’ ಇದೆಯಾ? ಕರಗಲು ಜಸ್ಟ್ ಹೀಗೆ ಮಾಡಿ !

16/02/2026 1:28 PM

BREAKING : ನಟ ದರ್ಶನ್‌ ಹುಟ್ಟು ಹಬ್ಬದಂದು ಪವಿತ್ರಾಗೌಡಗೆ ಬಿಗ್ ಶಾಕ್ : ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ

16/02/2026 12:56 PM

GOOD NEWS : `BP’ ಕಾಯಿಲೆ ಇರೋರಿಗೆ ಗುಡ್ ನ್ಯೂಸ್ : ಇನ್ಮುಂದೆ ಮಾತ್ರೆಗಳ ಅಗತ್ಯವಿಲ್ಲ, ವರ್ಷಕ್ಕೆ ಕೇವಲ ಎರಡು ಇಂಜೆಕ್ಷನ್‌ಗಳು !

16/02/2026 12:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.